ಅದೊಂದು ದೋಣಿ
ನಿತ್ಯ ತೀರದಿ ನಿಂತು
ಕಾಯುತ್ತದೆ ಯಾರೋ
ಬರುವವರ ಕಾಯುವಂತೆ
ಬಂದಾಗ ಪ್ರೀತಿಯಿಂದಲೇ
ಕುಳ್ಳಿರಿಸಿ ತಾನು
ಚಲಿಸುತ್ತದೆ ಸುಮ್ಮನೇ
ಕುಳಿತವರ ನೂರು ಮಾತು
ನಗುವಿನ ನಿಗೂಢತೆಯೊಳಗೆ
ಆಳದ ಅಲೆಗಳಿಗೆ ತಾನು
ಹೆದರುತ್ತಾ ಸಾಗುತ್ತದೆ
ತೀರ ತಲುಪಿದರೆ
ಯಾನದ ಅದೆಷ್ಟೋ ಕಾಲ
ಸರಿದು ಬಿಡುತ್ತದೆ
ಮತ್ತೆ ಬರುವವರ ಹತ್ತಿಸಿ
ಈಚೆ ತಂದು ಬಿಟ್ಟರೆ
ಒಂದೊಂದು ನೆನಪಿನ
ಪುಟಕ್ಕೆ ನವಿಲು ಗರಿಯ
ಅಂಟಿಸಿದಂತೆ ದೋಣಿಗೆ
ಸವಾಲಿನ ಗಾಳಿಗೂ
ಅಲೆಯುವ ಅಲೆಗಳಿಗೂ
ಗೊತ್ತಾಗದ ಪಯಣವದು
ಹತ್ತು ದಾರಿಗಳ ಸುತ್ತ
ಪಯಣದ ನಡುವೆ
ಸಹಜ ದಾರಿಯ
ಸಲೀಸು ಪಯಣವದು
ಯಾರಿಗೂ ಕಾಣದು
ಚಳಿ ಮಳೆ ಬಿಸಿಲಿನ
ನಡುವೆ ಉಪಕಾರಿ
ಈ ದೋಣಿಯ ಪಯಣ
ಕಾಣದ ಗುರುತಿಸದ
ಅಂತರ್ಯದ ಯಾನ.

–ನಾಗರಾಜ ಬಿ. ನಾಯ್ಕ ,ಕುಮಟಾ.


ಸುಂದರ ಕವನ
ಧನ್ಯವಾದಗಳು……
ಚೆನ್ನಾಗಿದೆ ಕವಿತೆ.
ಧನ್ಯವಾದಗಳು
ಚಂದದ ಕವನ… ಓ. ಕೆ.
ಚೆನ್ನಾಗಿದೆ ಸರ್…..
Beautiful.
ದೋಣಿಯ ಬದುಕಿನಂತೆ ಗುರುತಿಸದೆ ಹೋದ ಜೀವಗಳೆಷ್ಟೋ ಎಂಬ ಹೋಲಿಕೆಗೆ ಮನಸು ಜಾರುವಷ್ಟು ಮಾರ್ಮಿಕವಾಗಿದೆ ನಿಮ್ಮ ಕವನ.
ಧನ್ಯವಾದಗಳು…
ಚೆಂದದ ಕವನ
ಕಾಣದ ಗುರುತಿಸದ ಅಂತರ್ಯದ ಯಾನ…ಚೆನ್ನಾಗಿ ಮೂಡಿಬಂದಿದೆ.