ಪುಟಗಳ ನೆನಪು…..
ಬರಹಗಳು ಬರುಡಾದವು,
ಸಾಲುಗಳು ಶೂನ್ಯವಾದವು
ಪದಗಳು ಮೌನವಾದವು
ಶಬ್ದಗಳು ಮಾಯವಾದವು,
.
ಕನ್ನಡದ ಹೃದಯಗಳ ಶಬ್ದ ಮಿಡಿತ
ಗದ್ಯ ಪದ್ಯ ವಚನ ಸಾಹಿತ್ಯಗಳಲ್ಲಿ ಹಿಡಿತ
ಸಾರ್ವಭೌಮ ಸಂಗೀತಗಳಲ್ಲಿ ಕುಣಿತ
ಶ್ರೀಗಂಧದ ಸಿರಿಯೇ ಸಂಭ್ರಮ ಸಂಕೇತ
ಸಾಹಿತಿಗಳ ಜೀವನ ಇತರ ಬಾಳಿಗೆ ಉದಾಹರಣೆ
ಹೆಜ್ಜೆ ಹೆಜ್ಜೆಗು ಹಚ್ಚಿದ ಸಾಲುಗಳು
ರಮಣಿಯ ಸ್ಮರಣೆ
ಪಯಣಿಸುವ ಕಾದಂಬರಿ ಸ್ಥಿರ ಸಾಗರ
ವರ್ಣರಂಜಿತ ಕನಕಾಕ್ಷರಗಳು ಎಂದೆಂದಿಗೂ ಅಮರ .
.
ವಿಶ್ವದ ಗ್ರಂಥಾಲಯ ಕೈಬೀಸಿ ಕರೆಯಿತು
ಸಾಹಿತ್ಯ ಲೋಕದ ಕೈಪಿಡಿ ಮರೆ ಮಾಚಿತು..!
ಅಕ್ಷರಾರ್ಪಣೆ : ಚಂದ್ರಶೇಕರ .ಸ.