ಬೆಳಕು-ಬಳ್ಳಿ

ಏನಾಗಲಿ

Share Button

ಹೋಗಬಾರದು ಕನಸುಗಳು ಬಾಡಿ
ಹಗುರಾಗಬೇಕು ಮನಸಾರೆ ಹಾಡಿ
ಚೈತನ್ಯವ ತುಂಬಿಕೊಳ್ಳಲಿ ನರನಾಡಿ
ಏನಾಗಲಿ
ಕೊನೆಯ ಕ್ಷಣದವರೆಗೂ ಹೋರಾಡಿ

ಕಷ್ಟಗಳು ಇದ್ದದ್ದೇ ಈ ಲೋಕದೊಳಗೆ
ತೊಡೆತಟ್ಟಿ ನಿಲ್ಲಬೇಕು ಗೆಲುವಿನ ಹೆಜ್ಜೆಗೆ
ಅಂಜದೆ ಮುನ್ನುಗ್ಗಬೇಕು ಕನಸಿನಕಡೆಗೆ
ಏನಾಗಲಿ
ಹೋರಾಡದೆ ಶರಣಾಗಬಾರದು ಸೋಲಿಗೆ

ಎಲ್ಲವನ್ನೂ ಮರೆತು ನಕ್ಕು ಹಗುರಾಗಬೇಕು
ನಿನ್ನೆಯದ ಮರೆತು ನಾಳೆಗೆ ಸಿದ್ಧರಾಗಬೇಕು
ನಮ್ಮತನವ ಬಿಟ್ಟುಕೊಡದೆ ಒಗ್ಗೂಡಬೇಕು
ಏನಾಗಲಿ
ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಬೇಕು

ಗೆಲುವನ್ನು ಹಿಂಬಾಲಿಸಿ ಎಲ್ಲರೂ ಓಡುವರು
ಸೋತಾಗ ನೊಂದು ಕುಗ್ಗಿ ಹೋಗುವರು
ಸೋಲುಗೆಲುವಿಗೆ ತಲೆಯ ಕೆಡಿಸಿಕೊಳ್ಳದವರು
ಏನಾಗಲಿ
ಜಗ್ಗದೆಯೇ ಹಿಗ್ಗದೆಯೇ ಬದುಕಲ್ಲಿ ಗೆಲ್ಲುವರು

ನಾಗರಾಜ ಜಿ.ಎನ್. ಬಾಡ, ಕುಮಟ

5 Comments on “ಏನಾಗಲಿ

  1. ಸೋಲನ್ನು ಮೆಟ್ಟಿ ನಿಲ್ಲುವ ಪರಿಯ ಕಾವ್ಯ ರೂಪದಲ್ಲಿ ಕಟ್ಟಿದ ಚಂದದ ಕವನ

  2. ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಮೂಡಿಸುವ ಕವನ ಸುಂದರವಾಗಿ ಮೂಡಿಬಂದಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *