ಬೆಳಕು-ಬಳ್ಳಿ

ತೊದಲೆಂದರೆ ………..!

Share Button

ತೊದಲುವುದು ತಪ್ಪಲ್ಲ ; ಊನವೂ ಅಲ್ಲ !
ಅದು ಮಾತಿನ ಮತ್ತೊಂದು ರೂಪ ಸ್ವರೂಪ !!
ಪದ ಮತ್ತು ಅರ್ಥದ ನಡುವಿನ ಮೌನವೇ ತೊದಲು ;
ನಾಲಗೆಯ ಇನ್ನೊಂದು ತೆರನ ತಡವಾದ ಹೊರಳು

ಹಾಗೆಯೇ ,
ಪದ ಮತ್ತು ಕ್ರಿಯೆಯ ನಡುವೆ
ನಿಂತು ಹೊರಡುವ ಘನಮೌನವೇ ಕುಂಟು ;
ಇಂಥವರೂ ನಮ್ಮ ನಿಮ್ಮ ನಡುವೆ ಉಂಟು !

ಭಾಷೆಗೂ ಮುನ್ನ ತೊದಲು ಬಂದಿತೋ
ಭಾಷೆಯ ನಂತರವೋ ? ಹೇಳುವಿರಾ !
ಇದೊಂದು ಉಪಭಾಷೆಯೋ ಅಥವಾ ಸ್ವತಃ ಭಾಷೆಯೋ?
ಭಾಷಾಕೋವಿದರೂ ತೊದಲುವಂಥ ಪ್ರತಿ ಪ್ರಶ್ನೆಯೋ !

ಪ್ರತಿ ತೊದಲೂ ಅರ್ಥಗಳ ದೇವರಿಗೆ ನಾವು
ನಿಷ್ಠೆಯಿಂದ ಅರ್ಪಿಸುವ ಒಂದು ನಿಶ್ಶಬ್ದ ಬಲಿ
ಸಂಪೂರ್ಣ ಜನಾಂಗವೊಂದು ತೊದಲಿದಾಗ
ರೂಪಿತವಹುದು ಮಾತೃಭಾಷೆ , ಇದನು ತಿಳಿ !

ನಮ್ಮದೂ ಹಾಗೆಯೇ , ನಮ್ಮ ಸೃಷ್ಟಿಸುವ ಕ್ಷಣದಲಿ
ಭಗವಂತನೂ ತೊದಲಿರಬೇಕು , ಅದರ ಫಲವೇ
ನಾವಾಡುವ ಪ್ರತಿ ಪದಕೂ ಬಹು ವಿಧಾರ್ಥಗಳ ಛಾಯೆ
ಅವನುಚ್ಚರಿಸುವುದೆಲ್ಲ ತೊದಲೇ , ಕಾವ್ಯದಂಥ ಮಾಯೆ !

“ವಿಕ್ಕು” ಎಂಬ ಕವಿತೆಯ ಮೂಲ ಮಲಯಾಳಂ ಮತ್ತು ಇಂಗ್ಲಿಷ್‌ ತರ್ಜುಮೆ :
ಕೆ ಸಚ್ಚಿದಾನಂದನ್‌, ಮಲಯಾಳಂ ಕವಿ
ಕನ್ನಡೀಕರಣ : ಡಾ. ಹೆಚ್‌ ಎನ್‌ ಮಂಜುರಾಜ್‌, ಮೈಸೂರು

7 Comments on “ತೊದಲೆಂದರೆ ………..!

  1. ತೊದಲೆಂದರೆ ಅನುವಾದ ಕವನ..ಚೆನ್ನಾಗಿ ದೆ.. ಮೂಲ ಕವನದ ಕತೃವುಗೂ..ಅನುವಾದಕಾರರಿಗೂ ಧನ್ಯವಾದಗಳು…

  2. ತಮ್ಮ ತೊದಲು ಊನವೆಂದುಕೊಂಡವರಿಗೆ ಧೈರ್ಯ ತುಂಬುವ, ತೊದಲು ಭಾಷೆಗೆ ಭಾಷ್ಯ ಬರೆದ ಕವಿಗೆ ನಮನಗಳು. ಭಾವವನ್ನು ಕಿಂಚಿತ್ತೂ ಕುಂದಿಲ್ಲದಂತೆ ಅನುವಾದದಲ್ಲಿ ಯಥಾವತ್ತಾಗಿ ಭಟ್ಟಿ ಇಳಿಸಿದ ಅನುವಾದಕರಿಗೆ ವಿಶೇಷ ವಂದನೆಗಳು

  3. ಭಾವಾನುವಾದ
    ಭಗವಂತನೂ ಭಾಷಾತೀತನೆಂಬ ಮಾತಿಗೆ ಅನುವಾದ………

  4. ನಮಸ್ಕಾರ sir,
    ಅರ್ಥಪೂರ್ಣ ಕವಿತೆಯ ಭಾವಾನುವಾದ.
    ಧನ್ಯವಾದಗಳು

  5. ಚೆಂದದ ಅನುವಾದ
    ತೊದಲಿನಿಂದ ಬರುವ ಕೀಳರಿಮೆ ತಿನ್ನು ಸುಟ್ಟು ಹಾಕುವ ವೈಖರಿ ಅದ್ಭುತ

  6. ತುಂಬಾ ತುಂಬಾ ಅರ್ಥಗರ್ಭಿತವಾದ ಕವನದ ಸೊಗಸಾದ ಕನ್ನಡಾನುವಾದ.
    ಯಾವುದೇ ಒಂದು ಶಕ್ತಿ ಅಥವಾ ನಿಶ್ಯಕ್ತಯನ್ನು ನೋಡುವ ನೋಟ ಸಕಾರಾತ್ಮಕವಾಗಿ ಸ್ವೀಕರಿಸುವ ಪರಿಯ ಕುರಿತು ಮನವನ್ನು ಚಿಂತನೆಗೆ ಹಚ್ವುವ ಕವನ ಇದಾಗಿತ್ತು.

Leave a Reply to Gayathri Sajjan Cancel reply

 Click this button or press Ctrl+G to toggle between Kannada and English

Your email address will not be published. Required fields are marked *