ಪುಟ್ಟ ಹಣತೆಯ
ತುಂಬಿದೆ ಬದುಕಿನ ಖುಷಿ
ಕಾಲದ ಅನಂತತೆ
ನಡೆದು ಬಂದ ದಾರಿ
ಇಂದಿನ ಸ್ವಾಗತವೂ ಹಾಗೇ
ಬೆಳಕಿನ ನಗುವಿನಲ್ಲಿ
ಕಂಡ ಎಲ್ಲವೂ ಸಾದೃಶ್ಯವೇ
ಒಳಿತಿನ ಭಾವವ
ಮಣ್ಣಿನ ಋಣವ
ಮೇಳೈಸಿದ ಅನುಭಾವ
ಮಾತ್ರ ಬೆಳಕಾಗಿ
ಹಣತೆಯಾಗಿ ಉಳಿದು
ಉರಿದು ನಾಳೆಗೆ
ಉಳಿಕೆಯಾಗುವುದಂತೆ
ಕತ್ತರಿಸದ ಉತ್ತರಿಸದ
ಪ್ರಶ್ನೆಗಳಿಗೆಲ್ಲಾ ಮೌನದಿ
ಕರಗುವ ಸಮಯವದು
ಜಗಮಗಿಸುವ ದೀಪವೂ
ಹಣತೆಯ ಖುಷಿಯಲ್ಲ
ಮೂಲ ಮಣ್ಣು ಕೊನೆಗೆ
ಸೇರುವುದೂ ಮಣ್ಣೇ
ಉರಿವಾಗ ಉಳಿವಾಗ
ನಿರಂತರತೆ ಕಾತುರತೆ
ಸಣ್ಣ ಹಣತೆಯದ್ದು
ನಿಯತದಿ ಪುಟ್ಟ ಹಣತೆ
ಒಂದು ಸಾಕು
ಮನಸಿಗೆ ಮುಗ್ಧತೆಗೆ
ಬದುಕುವ ಪ್ರೀತಿಗೆ…….

ನಾಗರಾಜ ಬಿ.ನಾಯ್ಕ, ಹುಬ್ಬಣಗೇರಿ.ಕುಮಟಾ.


ಸರಳ ಸುಂದರ ಕವಿತೆ
ಚಂದದ ಕವನ
ಭಾವಪೂರ್ಣ ಕವನ ಚೆನ್ನಾಗಿದೆ.