ಮರಳಿ ಮರಳಿ ಕಾಡುವ
ನೆನಪೊಂದು ಜೊತೆಗಿರಬೇಕು
ನೆನಪಾದಾಗೆಲ್ಲ ಮನಸು
ಹೂವಂತೆ ಅರಳಬೇಕು
ಮನದ ನೋವುಗಳೆಲ್ಲ
ಕರಗಿ ನಲಿವಾಗಬೇಕು
ತಣ್ಣನೆಯ ಭಾವವೊಂದು
ಮೂಡಿ ಗೆಲುವಾಗಿಸಬೇಕು
ಸೋತಾಗಲೆಲ್ಲಾ ಸೋಲಿನ
ಕಹಿಯ ಮರೆಸುವಂತಿರಬೇಕು
ಸ್ಫೂರ್ತಿಯ ಚಿಲುಮೆಯಾಗಿ
ಹೆಜ್ಜೆ ಹೆಜ್ಜೆಗೂ ಜೊತೆಯಾಗಬೇಕು
ಬಿದ್ದಾಗ ಕೈಹಿಡಿದು ಎತ್ತಿ
ಮೇಲೆ ನಿಲ್ಲಿಸಬೇಕು
ಒಂಟಿ ಒಬ್ಬಂಟಿ ಎನಿಸಿದಾಗೆಲ್ಲ
ಬಾಚಿ ತಬ್ಬಿಕೊಳ್ಳಬೇಕು
ಯಾರೂ ಇರದ ಗಳಿಗೆ
ಸುಮ್ಮನೆ ಜೊತೆಯಾಗಬೇಕು
ಏನೇ ಆದರೂ ಜೊತೆಗೆ ಇದ್ದೇನೆ
ಎಂಬ ಭರವಸೆಯೊಂದೇ ಸಾಕು
–ನಾಗರಾಜ ಜಿ. ಎನ್. ಬಾಡ, ಕುಮಟ


ಸರಳ ಸುಂದರ ಕವನ ಸಾರ್
ಚಂದದ ಕವನ
ಯಾರೂ ಇರದ ಗಳಿಗೆ
ಸುಮ್ಮನೆ ಜೊತೆಯಾಗಬೇಕು !
ಈ ಸಾಲು ಇಷ್ಟವಾಯಿತು ಕವಿಗಳೇ.
ಕಾವ್ಯಪ್ರತಿಮೆ ಪ್ರತೀಕಗಳಿಲ್ಲದೆಯೇ ಕಾವ್ಯಾನುಭವ
ತಂದುಕೊಡುವ ಅಪರೂಪದ ಭಾವವಿದು.
ಆಗಬೇಕೆಂಬ ಪ್ರಕ್ರಿಯೆಯ ಹಂಬಲವು ಕೈ ಹಿಡಿದು ಬರೆಸಿದೆ;
ಭರವಸೆಯ ಬೆಳಕಿಗಾಗಿ ಮನವು ಚಡಪಡಿಸುತ ನಿರುಕಿಸಿದೆ !
ನೈಸ್ ಒನ್, ಧನ್ಯವಾದ.
ಭಾವಪೂರ್ಣ ಸರಳ ಸುಂದರ ಕವನ