ನನ್ನ ಅಕ್ಷರ ಶಾಂತಿ
ವಿಕಿರಣಗಳು,
ಸಾಮಾನ್ಯರ ಹಕ್ಕುಗಳ
ಸ್ವರ ದರ್ಪಣದ
ಸ್ವಾತಂತ್ರ್ಯ ಪ್ರತಿಬಿಂಬ.
ಕಾಲಾಸ್ತಿತ್ವದ ಜಾಡಿನ
ಮೋಡ ಕರಗಿಸಿ,
ನವ ಗಗನದ ಉಪಗ್ರಹ ಪಥಗಳಲಿ
ಯುವ ಪೀಳಿಗೆಯ ಪ್ರೇರಣೆಯ
ಪರಿಸರ ಗೀತೆಗಳು.
ವಿಪ್ಲವದ ಎದೆಯ ಸದ್ದು,
ಶಬ್ದ ಸೌಂದರ್ಯದ
ಪ್ರಮಾಣಗಳ ಪ್ರತಿಧ್ವನಿ.
ಉದ್ಯಮದ ಜನಜೀವನ ಸ್ರವಂತಿಗೆ
ರಥಸಾರಥಿಯ ಜ್ವಾಲೆ ನಾನು.
ಅಜ್ಞಾನದ ಗೋಡೆಗಳ
ನೆಟ್ಟಗೆ ಸ್ಕ್ಯಾನ್ ಮಾಡಿ,
ಅಡ್ಡಲಾಗಿ ಸುಲಭದಿ ಕೆಡವಿ,
ವೈಜ್ಞಾನಿಕ ಇಟ್ಟಿಗೆಯಲಿ ರವೀಂದ್ರರ
ಗೀತಾಂಜಲಿಯ ಸಮಾನತೆಯ
ಸಾಮ್ರಾಜ್ಯ ನಿರ್ಮಿಸುವ
ಕನಸ ತಾರೆಯ ಹೊಳಪು.
ನನ್ನ ಕವಿತೆ:
ಒಂದು ನೂತನ ತತ್ವದ
ಪ್ರಭಾತ ಭವಿಷ್ಯದ ಗೀತೆ.
ನನ್ನ ಸಾಹಿತ್ಯ:
ಮಹಾತ್ಮರ ಸತ್ಯದ,
ಸ್ವಪ್ನ ಸಂದೇಶದ
ಸ್ವಾತಂತ್ರ್ಯ ಸ್ಫೂರ್ತಿಯ ಬರಹ.
ಭಗತ್ ಸಿಂಗ್ ಭಾವ ಕಾವ್ಯಗಳ
ದೇಶಭಕ್ತಿಯ ರಣ ಶಂಖನಾದ.
ವಿವೇಕಾನಂದರ ಅಭ್ಯುದಯದ
ಮತ ಸಾಮರಸ್ಯದ
ಸಮರ ನಿಘೋಷ.
ನನ್ನ ಕಾವ್ಯ ಒಂದು ನಿತ್ಯತ್ವ,
ನನ್ನ ಲೇಖನಿ ವಿಜ್ಞಾನದ ಶರ.
ನನ್ನ ಆಲೋಚನೆಗಳ ಮುಖಚಿತ್ರ:
ಶತಮಾನಗಳ ಉದಯ ಪಯಣ.
ಅನಂತ ವಿಶ್ವದ ವ್ಯವಸಾಯದಲ್ಲಿ
ಗ್ಯಾಲಕ್ಸಿಗಳ ಸಮುದಾಯ.
ತೆಲುಗು ಮೂಲ : ಫಿಜಿಕ್ಸ್ ಅರುಣ್ ಕುಮಾರ್
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್