ಒಲವ ಹಣತೆ ಹಚ್ಚಿ
ಬೆಳಕಿನ ಕನಸು ಹರಡಿ
ಕಣ್ಣೊಳಗೆ ಕಣ್ಣಿಟ್ಟು
ನೋಡಿದ ಬೆಳಕೇ
ನೀನೊಂದು ಉಳಿವು
ಈ ಜಗಕೆ
ನಗುವ ಹಂಚಿ
ಅರಳುವ ಸುಮವೇ
ಬದುಕಿಸು ಭಾವಗಳ
ಬೆರಗಿನ ಉಯಿಲೇ
ಹಚ್ಚ ಹಸಿರಿನ
ತೇರಿಗೆ ಮುದ್ದು
ಕಿರಣವ ಅಂಟಿಸಿದ
ದಾರಿಯ ಗುರುತಿಗೂ
ಒಲವು ಒಂದು
ತವ ನಿಧಿಯೇ
ನಂಬಿ ಸಾಗುವ
ಸಾಲುಗಳ ಹೊಸತಾದ
ಗುರುತಿಗೂ
ಸರಿಗಮದ ಪಲ್ಲವಿಯ
ಪರಿಚಯಿಸುವ ಪುಟ್ಟ
ಸಾಲೇ ಹೂ ನಗು
ಈ ಕರಗಳ ಬೆವರಿಗೆ
ನೀನಿರದ ಭಾವಗಳಲ್ಲಿ
ಹಸಿರಿಲ್ಲದ ಗುರುತು
ಹೊಸ ಹೊಸಿಲಿಗೆ
ನಿನ್ನದೇ ನೆನಪು…….
–ನಾಗರಾಜ ಬಿ.ನಾಯ್ಕ, ಕುಮಟಾ.
ನೈಸ್ ಪೊಯಂ
ಚಂದದ ಕವಿತೆ ಅರ್ಥಗರ್ಭಿತವಾಗಿದೆ
ಸುಂದರವಾಗಿದೆ.
ಒಲವು ಮಣ್ಣ ತೇವದ ಹಾಗೆ ಜಿನುಗುತ್ತಿದೆ.
ಜೀವನ ಸಾರದ ಸವಿಯನ್ನು ತೋರಿದ ಸೊಗಸಾದ ಕವನ