
ನವಮಸ್ಕಂದ – ಅಧ್ಯಾಯ 1
ವೈವಸ್ವತ ಮನುವಂಶ ಚರಿತೆ – 1
ಸವರ್ಭೂತಾಂತರಾತ್ಮ
ವಿಲಕ್ಷಣ ಪ್ರಕೃತಿಯ ಪರಮಾತ್ಮ
ಕಲ್ಪಾಂತರದಿ ಸಕಲವ
ತನ್ನಡಗಿಸಿಕೊಂಡ ಏಕಾಂಗಿಯ
ನಾಭಿಯ ದ್ವಾರದಿ ಸ್ವರ್ಣಮಯ ಕಮಲದುದ್ಭವ
ಅದರಲಿ ಚತುರ್ಮುಖ ಬ್ರಹ್ಮನ ಸೃಷ್ಟಿ
ಬ್ರಹ್ಮನ ಮಾನಸ ಪುತ್ರ ಸಂತತಿಯಲಿ
ಜನಿಸಿದ ವೈವಸ್ವತನು
ಪುತ್ರಕಾಮೇಷ್ಠಿಯಾಗಿ
ವಿಷ್ಣುಕೃಪೆಯಿಂದ ಪಡೆದ
ಇಕ್ಷ್ವಾಕು
ಅವನ ಸೋದರ ವೃಷದ
ಜನಕ ನೀಡಿದ ಪಶುಪಾಲನೆಯ ಕಾಯಕದಲಿ
ಕತ್ತಲೆಯ ರಾತ್ರಿಯಲಿ
ಗೋವನು ಹುಲಿಯ ಧಾಳಿಯಿಂದ
ತಪ್ಪಿಸ ಹೋಗಿ, ಕತ್ತಿಯ ಪೆಟ್ಟಿಗೆ
ಆಹುತಿಯಾದುದು ಗೋವೆಂದು ತಿಳಿದು
ಗೋಹತ್ಯೆ ಪಾಪಕೆ ತತ್ತರಿಸಿ
ವಷಿಷ್ಟ ಮಹರ್ಷಿಯ ಶಾಪದಿಂ
ಶೂದ್ರ ಜನ್ಮವ ಪಡೆದರೂ
ನಿರಂತರ ಪರಮಾತ್ಮ ಧ್ಯಾನದಿಂ
ಮುಕ್ತಿಯ ಪಡೆದ
ವೈವಸ್ವತ ಮನುವಿನ ವಂಶಜರಲಿ
ಕುಬೇರ, ಇಂದ್ರಾದಿ ದಿಕ್ಪಾಲಕರಲಿ
ಒಬ್ಬನೆನಿಸಿ ವೈಶಾಲೀ ನಗರವ ನಿರ್ಮಿಸಿದ
ವೈಶಾಲರೂ ಇತ್ಯಾದಿ ಮನು ವಂಶಜರ ಚರಿತೆ
ಪುಣ್ಯಪ್ರದವೂ, ಪಾಪಪರಿಹಾರಕವೂ
ಆಗಿ ಸಕಲ ಹರಿಭಕ್ತರಿಗೆ ಮಾದರಿಯಾಗಿದೆ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=42965
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಕಾವ್ಯ ಭಾಗವತ ನನ್ನ ನೆಚ್ಚಿನ ಅಂಕಣವಾಗಿದೆ ಗದ್ಯಭಾಗವತವನ್ನು ಮತ್ತೊಂದು ಸಾರಿ ಓದಲು ಪ್ರೇರೆಪಿಸಿದೆ..ವಂದನೆಗಳು ಸಾರ್
ಚೆನ್ನಾಗಿದೆ
ಚತುರ್ಮುಖ ಬ್ರಹ್ಮನ ಸೃಷ್ಟಿಯ ಜೊತೆಗೆ ವೈವಸ್ವತ ಮನು ಚರಿತೆಯ ಪ್ರಾರಂಭ ಚೆನ್ನಾಗಿ ಮೂಡಿಬಂದಿದೆ ಸರ್…ಧನ್ಯವಾದಗಳು.
ಮನು ವಂಶದರ ಚರಿತೆಯ ಕುರಿತಾದಕಾವ್ಯ ಭಾಗವತದ ಭಾಗ ಸೊಗಸಾಗಿ ಮೂಡಿ ಬಂದಿದೆ.