
ಜಗದಲ್ಲೇ ಎನ್ನ ಕಾಯುವ ಪರಮಾಪ್ತ ಬಂಧುವೇ
ಕರುಣೆ ಮಮಕಾರ ತುಂಬಿದ ಪ್ರೇಮ ಸಿಂಧುವೇ
ನೀನು ಕೈತುತ್ತು ಕೊಟ್ಟು ಸಾಕಿದ ದೇಹದ ಬಲದಿಂದ ಬದುಕಿರುವೆ
ನೀ ನಡೆದು ತೋರಿದ ನೈತಿಕ ದಾರಿಯಲ್ಲಿ ಸಾಗಿರುವೆ
ನಿನ್ನ ಮಡಿಲಲ್ಲಿ ಇದ್ದ ಆ ದಿನಗಳೇ ನಮಗೆ ಸ್ವರ್ಗದ ದಿನಗಳು
ನಿನ್ನಯ ಹಿತನುಡಿಗಳೇ ನಮಗೀಗ ನಂದದ ದೀವಿಗೆಗಳು
ತುಸು ಕೋಪ ಹುಸಿಮುನಿಸು ನೀನು ತೋರಿದರೂ ಎದೆಯಲ್ಲಿ ಬತ್ತದ ಪ್ರೀತಿ ತುಂಬಿಕೊಂಡಿರುವೆ
ಕಸುವು ಇರುವಷ್ಟು ದಿನ ಮನೆ ಮಕ್ಕಳಿಗಾಗಿಯೇ ದುಡಿದಿರುವೆ
ಅನುಗಾಲ ಅನುಕ್ಷಣವೂ ನೀನು ನೀಡಿದ ಭಿಕ್ಷೆ
ಸದಾಕಾಲವೂ ಬಿಡದೆ ಕಾಯಲಿ ನಮ್ಮನು ನಿನ್ನ ಶ್ರೀ ರಕ್ಷೆ
— ಶರಣಬಸವೇಶಕೆ. ಎಂ
ಅಮ್ಮನ ನೆನಪು ಕವನ ಚೆನ್ನಾಗಿದೆ ಸಾರ್
ಅಮ್ಮನನ್ನು ಕುರಿತದ್ದು. ಅನುಗಾಲವೂ ಅನುಕ್ಷಣವೂ ಅಮ್ಮನದೇ ಎಂಬುದು ನಿಜ.
ಎಲ್ಲರ ಅಮ್ಮ ಜಗದಮ್ಮ (ಜಗದಂಬೆ) ಯ ಕೃಪೆಯಿರಲಿ. ಚೆನ್ನಾಗಿದೆ. ಅಭಿನಂದನೆ
ಚೆನ್ನಾಗಿದೆ
Fine sir
ತಾಯಿಯ ಕುರಿತಾಗಿ ಎಷ್ಟು ಬಣ್ಣಿಸಿದರೂ ಮನಸ್ಸನ್ನು ಆರ್ದ್ರಗೊಳಿಸದೇ ಇರದು. ಚಂದದ ಕವಿತೆ.
ಬತ್ತದ ಪ್ರೀತಿ ತುಂಬಿರುವ, ಅಮ್ಮನ ನೆನಪು ಹಸಿಯಾಗಿಸುವ ಭಾವಪೂರ್ಣ ಕವನ.