‘ಬೆಪ್ಪಾಲೆ ‘ ಮರ..ಬೆಪ್ಪಾದೆ??
ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರಕೃತಿ ನಡಿಗೆಯಲ್ಲಿ ಪಾಲ್ಗೊಂಡಿದ್ದಾಗ ವಿಶಿಷ್ಟವಾದ ಕಾಯಿಯೊಂದು ಕಾಣ ಸಿಕ್ಕಿತು. ಎರಡು ಬೀನ್ಸ್ ಗಳನ್ನು ಗಮ್ ಹಾಕಿ ಜೋಡಿಸಿದಂತೆ ಅಥವಾ ಕಿವಿಗೆ ಹಾಕುವ ದೊಡ್ಡ ಲೋಲಾಕಿನಂತೆ ಇತ್ತು ಈ ಕಾಯಿ. ಕಿತ್ತಾಗ ಕೈಗೆ ಬಿಳಿ ಅಂಟು ಮೆತ್ತಿಕೊಂಡಿತು. ಇದು ‘ಬೆಪ್ಪಾಲೆ’ ಮರದ ಕಾಯಿ ಎಂದರು, ಅನುಭವಿ ಸಹಚಾರಣಿಗರೊಬ್ಬರು. ಈ ಮರದ ಕಾಂಡವು ಮೆತ್ತಗೆ ಇರುವುದರಿಂದ, ಮರದ ಬೊಂಬೆ, ಬಳೆ, ಕೀ-ಚೈನ್ ಇತ್ಯಾದಿ ವಸ್ತುಗಳನ್ನು ತಯಾರಿಸಲು ಸುಲಭವಾಗುತ್ತದೆಯಂತೆ.
‘ಗೊಂಬೆಗಳ ಊರು’ ಎಂದೇ ಪ್ರಸಿದ್ಧವಾದ, ಚನ್ನಪಟ್ಣದಲ್ಲಿ ಕಲಾಕಾರರು ಮರದ ಬೊಂಬೆ ತಯಾರಿಗೆ ಬಳಸುವ ಮರ ‘ಬೆಪ್ಪಾಲೆ’!
ಅಬ್ಬಾ, ಪ್ರಕೃತಿಯ ಸೋಜಿಗವೆ? ಇದನ್ನು ಕೇಳಿ ನಾನು ‘ಬೆಪ್ಪಾದೆ’!
– ಹೇಮಮಾಲಾ.ಬಿ
ತುಳುವಿನ “ಬೊಳ್ಪಾಲೆ” ಮರ ಅಲ್ವಾ…? ಅಥ್ವಾ “ಬಲೀಂದ್ರ ಪಾಲೆ” ಯೋ..?
ಇರಬಹುದೇನೋ, ನನಗೆ ಅದರ ಬಗ್ಗೆ ಅರಿವಿಲ್ಲ.
ಬೆಪ್ಪಾಲೆ ಅ೦ದರೆ ತುಳುವಿನ ಬೊಲ್ಪಾಲೆ.ಮರದ ಆಟಿಕೆಗಳು ,ಕುಳಿತು ಕೊಳ್ಳುವ ಮಣೆ ಕೂಡಾ ಇದರಿ೦ದ ತಯಾರಿಸುತ್ತಾರೆ
ಚಿತ್ರದಲ್ಲಿ ಇರುವುದು Wrightia tinctoria :ಬೆಪ್ಪಾಲೆ ,ಪಾಲೆ ,ಬಚ್ಚಣಿಗೆ ಮರ !
Alstonia scholaris :ಮದ್ದಾಲೆ, ಏಳೆಲೆ ಬಾಳೆ ,ಸಪ್ತಪರ್ಣಿ ಎರಡರಲ್ಲಿಯೂ ಇದೇ ರೀತಿ ಕೋಡು ಕಾಯಿಗಳು !
nijakku olle sangatigalanna gnapistidira.danyavadagalu nimage.kaadinanchina gramagalali beleda namage kelavu herare marethu hogithu
exellent .namma urali navu ide maradinda buguri madi ata adta idvu madam.thuka kadime adru kuda bahala gatti mara adu.
ಬಲೀಂದ್ರ ಪಾಲೆಯ ಕಾಯಿಗಳೂ ಇಡೆ ರೀತಿ ಇವೆ, ಆದ್ರೆ ಮರ ಮತ್ತು ಎಲೆಗಳು ಬೇರೆ ತರ.
ಕರಾವಳಿಯಲ್ಲಿ ಸಮುದ್ರ ದ ತಿಂಡಿಯ ಮ್ಯಾಂಗ್ರೋವ್ ಗಿಡದ ಕಾಯಿ ಹೀಗೇ ಇರುತ್ತೆ.ಅದು ಮ್ಯಾಂಗ್ರೋವ್ ಅಲ್ಲವೇ
ನೀವು ಹೇಳಿದ ಮ್ಯಾಂಗ್ರೋವ್ ಗಿಡದ ಕಾಯಿ ಬಗ್ಗೆ ನನಗೆ ಗೊತ್ತಿಲ್ಲ. ನಾನು ತಿಳಿದಂತೆ,ಮ್ಯಾಂಗ್ರೋವ್ ಮರಗಳು ಉಪ್ಪುನೀರಿನಲ್ಲಿ/ಜವುಗು ಮಣ್ಣಿನಲ್ಲಿ/ಸಮುದ್ರ ಹಾಗೂ ನದಿ ಸೇರುವ ಜಾಗದಲ್ಲಿ ಬೆಳೆಯುವಂತವು. ಭಾರತದ ಅತ್ಯಂತ ದೊಡ್ಡದಾದ ಮ್ಯಾಂಗ್ರೋವ್ ಅರಣ್ಯಗಳು ಬಂಗಾಳಕೊಲ್ಲಿಯ ‘ಸುಂದರ ಬನ’ದಲ್ಲಿವೆ. ಅಲ್ಲಿ ಸುಂದರಿ, ಗೋಲಿಪತ್ತಾ, ಢುಂಡುಲ್, ಕಂಕ್ರಾ , ಬೈನ, ಗೇವಾ, ನೀಪಾ ಇತ್ಯಾದಿ ಹಲವಾರು ಪ್ರಭೇದದ ಮರಗಳಿವೆ.
ನನ್ನ ಈ ಲೇಖನದಲ್ಲಿ ವಿವರಿಸಲಾದ ‘ಬೆಪ್ಪಾಲೆ’ ಮರವು ಮ್ಯಾಂಗ್ರೋವ್ ಅಲ್ಲ.