ಕಾವ್ಯ ಭಾಗವತ 39: ಸಮುದ್ರ ಮಥನ –1

ಅಷ್ಟಮ ಸ್ಕಂದ – ಅಧ್ಯಾಯ -2
ಸಮುದ್ರ ಮಥನ – 1
ದೂರ್ವಾಸ ಮಹರ್ಷಿಗಳಿತ್ತ
ಶಿವಪ್ರಸಾದ ರೂಪ
ಪುಷ್ಪಮಾಲಿಕೆಯ ಭಕ್ತಿಯಿಂದ
ಪುರಸ್ಕರಿಸದೆ
ಅವಮಾನಿಸಿದ ದೇವೇಂದ್ರ
ಮುನಿಶಾಪದಿಂ
ರಾಜ್ಯಭ್ರಷ್ಟನಾಗಿ
ತ್ರಿಲೋಕಾಧಿಪತ್ಯ ನಷ್ಟವಾಗಿ
ಯಜ್ಞಯಾಗಾದಿಗಳಿಲ್ಲದ
ಹವಿರ್ಭಾವ ವಂಚಿತ
ದೇವತೆಗಳ ಅಸ್ಥಿತ್ವಕೆ
ಕುಂದುಂಟಾಗಿ
ಹತಾಶರಾಗಿ ಬ್ರಹ್ಮದೇವನ
ಸಲಹೆಯಂ ಸ್ವೀಕರಿಸಿ,
ರುದ್ರ ಶಂಕರ, ದೇವ ದಾನವ
ಮಾನವ ಚರಚರಾತ್ಮಕ ಸಕಲ
ಜೀವಕೋಟಿಗಳ ಉದ್ಭವ
ಉಜ್ಜೀವಗಳ ಕಾರಣಕರ್ತನೂ
ಸಕಲ ಜೀವಿಗಳಿಗೆ
ಕರ್ಮಾನುಸಾರ ಸುಖಃ ದುಃಖಗಳನ್ನಿತ್ತು
ಸೃಷ್ಟಿ, ಸ್ಥಿತಿ ಸಂಹಾರ ಕಾರ್ಯ
ನಡೆಸುವ ಶ್ರೀಮನ್ನಾರಾಯಣನ ಸ್ತುತಿಸಿ
ಪ್ರಾರ್ಥಿಸಲು
ಶ್ರೀಹರಿಯ ಪ್ರಸನ್ನನಾಗಿ
ಬ್ರಹ್ಮ, ಶಂಕರ, ದೇವಾದಿದೇವತೆಗಳೆಲ್ಲರುದ್ದೇಶಿಸಿ
ಅಮೃತ ಪ್ರಾಪ್ತಿಗಾಗಿ
ಸಮುದ್ರ ಮಥನ
ಮಹಾಕಾರ್ಯವಂ ಮಾಡ್ಪ ಮಹತ್ತರ
ಯೋಜನೆಯಂ ವಿವರಿಸಿದ
ನಾರಾಯಣ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42350
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
Nice
ಕಾವ್ಯ ಭಾಗವತದಲ್ಲಿನ ಸಮುದ್ರ ಮಥನದ ಪ್ರರಂಭದ ಭಾಗ ಚೆನ್ನಾಗಿ ಮೂಡಿಬಂದಿದೆ.. ಸಾರ್
ಪೌರಾಣಿಕ ಕತೆಗಳನ್ನು ಮೊದಲೇ ಕೇಳಿರುತ್ತೇವಾದರೂ, ಪುನ: ಓದಲು ಮುದ ಕೊಡುತ್ತವೆ. ಕ್ಲಿಷ್ಟ ಭಾಗವತವನ್ನು ಸರಳ ಪದಗಳ ಮೂಲಕ, ಸಂಕ್ಷಿಪ್ತ ಕವನಗಳ ಮೂಲಕ ಪ್ರಸ್ತುತ ಪಡಿಸುವ ತಮಗೆ ಅಭಿನಂದನೆಗಳು.
ಸಮುದ್ರ ಮಥನದ ಪ್ರಾರಂಭಿಕ ಕಥೆಯು ಕಾವ್ಯ ಭಾಗವತದಲ್ಲಿ ಸರಳ, ಸುಂದರ ರೂಪದಲ್ಲಿ ಮೂಡಿಬಂದಿದೆ.