ಕಾವ್ಯ ಭಾಗವತ 37:  ಋಷಭದೇವ

Share Button

ಪಂಚಮಸ್ಕಂದ
ಅಧ್ಯಾಯ – 1
ಋಷಭದೇವ

ನಾಭಿರಾಜ ಪುತ್ರ
ಋಷಭದೇವ
ದೈವಾಂಶಸಂಭೂತ

ಸಂತಾನಾಪೇಕ್ಷದಿ
ಯಾಗವಮಾಡಿ
ನೀಲವರ್ಣಮಯ ದೇಹ
ದಿವ್ಯ ಸ್ವರ್ಣಮಯ ಪೀತಾಂಬರ
ಧಾರಿಯಾಗಿ
ಶಂಖ, ಚಕ್ರ, ಗಧಾ ಪದ್ಮ
ಶೋಭಿತನಾಗಿ
ದೇದಿಪ್ಯಮಾನ ಕಾತಿಯಿಂ
ದರ್ಶನವನಿತ್ತು,
ನಾಭಿರಾಜ ಪತ್ನಿ
ಮೇರುದೇವಿಯ ಗರ್ಭದಲಿ
ತನ್ನೊಂದಂಶವಹೊತ್ತು,
ಧರೆಗಿಳಿದ ಆ ಶಿಶುವೇ
ಋಷಭದೇವ

ದೈವಾಂಶಸಂಭೂತನಾಗಿ
ಧರೆಗಿಳಿದರೂ,
ಋಷಭದೇವ,
ಲೌಕಿಕದಲಿ ಲೌಕಿಕನಾಗಿ
ಸಕಲ ಕರ್ಮಗಳ ಪಾಲಿಸುತ
ಧರ್ಮಾರ್ಥ, ಕಾಮ, ಮೋಕ್ಷಗಳ,
ಚತುರ್ವಿದ ಪುರುಷಾರ್ಥದಿಂ
ಗೃಹಸ್ಥಾಶ್ರಮದಲಿದ್ದು
ರಾಜ ಧರ್ಮವ
ನಿರ್ವಹಿಸಿದ ಪರಿ
ಅನನ್ಯ

ಲೋಕಕೆ ಭಕ್ತಿ, ಜ್ಞಾನ ವೈರಾಗ್ಯ
ಭೋಧಕಾವಾದ
ಪರಮಹಂಸ ಧರ್ಮವಂ
ತನ್ನಾಚರಣೆಯಿಂದಲೇ ತಿಳಿಸಿ
ಶ್ರೇಷ್ಠ ಪುತ್ರ ಭರತಂಗೆ
ರಾಜ್ಯಾಭಿಷೇಕ ಮಾಡಿ
ವಾನಪ್ರಸ್ಥಾಶ್ರಮಕೆ
ದಿಗಂಬರನಾಗಿ
ದೇವಾತ್ಮ ಭಾವವ ಮರೆತವನಾಗಿ
ಮಹಾಮಹಿಮಯೋಗಿಯಾಗಿ
ಶರೀರಾಭಿಮಾನವ ತೊರೆದು
ದೈವಯೋಗದಿಂ ಉದ್ಭವಿಸಿದ
ಕಾಡ್ಗಿಚ್ಚಿನಿಂದ, ದೇಹವ
ಭಸ್ಮವಾಗಿಸಿ
ಭಗವಂತನೊಂದು ಅಂಶದಿಂ ಜನಿಸಿದ
ಋಷಭದೇವ
ಭಗವತ್ ಪಥದಲಿ
ಸೇರಿದ ಕಥೆ
ಪುಣ್ಯದ ಕಥೆ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=42215
(ಮುಂದುವರಿಯುವುದು)

-ಎಂ. ಆರ್.‌ ಆನಂದ, ಮೈಸೂರು

7 Responses

  1. ಕಾವ್ಯ ಭಾಗವತ ಸುಂದರವಾಗಿ…ಮೂಡಿಬರುತ್ತಿದೆ… ಸಾರ್ ನಿಮ್ಮ ಪ್ರಯತ್ನ ಕ್ಕೆ ನನ್ನ ನಮನ

  2. ಪದ್ಮಾ ಆನಂದ್ says:

    ಋಷಭದೇವನ ಪುಣ್ಯದ ಕಥೆ ಸುಂದರವಾಗಿ ಮೂಡಿ ಬಂದಿದೆ.

  3. ಎಂ. ಆರ್. ಆನಂದ says:

    ಪ್ರಕಟಿಸುತ್ತಿರುವ “ಸುರಹೊನ್ನೆ” ಜಾಲತಾಣ ಪತ್ರಿಕೆಗೆ ವಂದನೆಗಳು.

  4. ನಯನ ಬಜಕೂಡ್ಲು says:

    ಬಹಳ ಚೆನ್ನಾಗಿದೆ.

  5. ಶಂಕರಿ ಶರ್ಮ says:

    ಋಷಭದೇವನ ಪುಣ್ಯದ ಕಥೆಯನ್ನು ನೀಡಿದ ಕಾವ್ಯ ಭಾಗವತವು ಬಹಳ ಚೆನ್ನಾಗಿದೆ ಸರ್.

Leave a Reply to ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: