ಬೆಳಕು-ಬಳ್ಳಿ

ಕಾವ್ಯ ಭಾಗವತ 35: ಜಡಭರತ – 2

Share Button

35.ಪಂಚಮ ಸ್ಕಂದ
ಅಧ್ಯಾಯ – 2
ಜಡಭರತ – 2

ಕಳ್ಳರ ಗುಂಪಿನ ಯಜಮಾನ
ಕಾಳಿಗೆ ಹರಕೆ ಹೊತ್ತು,
ಪುತ್ರ ಸಂತಾನವ ಪಡೆದು
ಕಾಳಿಗೆ ನರಬಲಿಯ ಹರಕೆ
ತೀರಿಸಲು,
ದಷ್ಟಪುಷ್ಟ ಜಡಭರತನೇ
ಯೋಗ್ಯನೆಂದೆಣಿಸಿ
ಸ್ನಾನಾನಂತರ, ತಂಪುಗಂಧ,
ಹೊಸ ಬಟ್ಟೆ,
ಕೆಂಪುಹೂಗಳಿಂದವನ
ಅಲಂಕರಿಸಿ
ವಧಾಸ್ಥಾನ ತಲುಪಿದರೂ
ಕಾಳಿಯ ಬಲಿಗೆ
ತಾನೇ ಬಲಿಪಶುವೆಂದರಿತರೂ
ಆತ್ಮಧ್ಯಾನಪರ, ಅಂತರ್ಮುಖಿ,
ಭರತನಿಗೆಲ್ಲಿ ದುಗುಡ!
ಜೀನವನ್ಮುಕ್ತಿಗೆ ಈ ಬಲಿ
ಹರಿಚಿತ್ತವಾದೊಡೆ
ಆಗಲಿ
ಎಂಬಂತೆ, ತಲೆಬಾಗಿಸಿ
ಖಡ್ಗಕೆ ಶಿರನೀಡಿದ
ಭರತನ
ಬಲಿ ಪಡೆಯಲು
ಕಾಳಿಗೆಲ್ಲಿದೆ ಸಹನೆ?

ವಿಷ್ಣು ಭಕ್ತ, ಸಾಧುವರ್ಯ
ಅಹಿಂಸಾಧರ್ಮನಿರತನ
ತೇಜದ ಮುಂದೆ
ಕ್ಷಣಮಾತ್ರವೂ ನಿಲ್ಲಲಾರದೆ
ಕಾಳಿಯ ತಲೆ
ಸಿಡಿದು ಹೋದಂತಾಗಲು
ಭಯಂಕರ ಕೋಪದ
ಭದ್ರಕಾಳಿಯು ಚೋರರೆಲ್ಲರ
ರುಂಡ ಚೆಂಡಾಡಿ
ರಕ್ತದೋಕುಳಿಯಾಡಿ
ಭರತಂಗೆ ವಂದಿಸಿ
ಅದೃಶ್ಯಳಾದುದು
ಭಗವಂತನ ಅಚಿಂತ್ಯ, ಅದ್ಭುತ
ಶಕ್ತಿ ದರ್ಶನ
ಎಲ್ಲ ಭಗವದ್ಭಕ್ತರಿಗೆ
ಅಭಯಹಸ್ತ ದರ್ಶನ

ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : http://surahonne.com/?p=42087

(ಮುಂದುವರಿಯುವುದು)
-ಎಂ. ಆರ್.‌ ಆನಂದ, ಮೈಸೂರು

9 Comments on “ಕಾವ್ಯ ಭಾಗವತ 35: ಜಡಭರತ – 2

    1. ಪ್ರತಿಕ್ರಿಯೆಗಾಗಿ ಧನ್ಯವಾದಗಳು ಮೇಡಂ

  1. ಸತ್ಯ, ಧರ್ಮ ಅಜೇಯ ಎಂಬುದಕ್ಕೆ ನಿದರಗಶನವಾಗಿದೆ ‘ಕಾವ್ಯ ಭಾಗವತ’ದ ಈ ಭಾಗ.

  2. ಪ್ರಕಟಿಸಿದ “ಸುರಹೊನ್ನೆ” ಗೆ ವಂದನೆಗಳು.

  3. ಈ ಸರ್ತಿಯ ಕಾವ್ಯ ಭಾಗವತದಲ್ಲಿಜಡಭರತನ ಕಥೆಯು ಸೂಕ್ಷ್ಮವಾಗಿಯಾದರೂ ಅತ್ಯಂತ ಸುಂದರವಾಗಿ ಮೂಡಿಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *