ಕೊನೆಯ ನಿಲ್ದಾಣ

ದೂರದೂರಿನ ಈ ಪಯಣ
ಕೊನೆಗೆ ಸೇರುವುದು ಸ್ಮಶಾನ
ಇರುವುದು ನಾಲ್ಕಾರು ದಿವಸ
ಇರಲಿ ಇರುವಷ್ಟು ದಿನ ಹರುಷ
ಕಳೆದು ಹೋಗುವುದು ವರುಷ
ನಡುವೆ ಯಾಕೆ ಸುಮ್ಮನೆ ವಿರಸ
ಸಂಸಾರದಲ್ಲಿ ಇರಲಿ ಸರಸ
ಅನುಭವಿಸು ನೀ ಪ್ರತಿ ದಿವಸ
ನಿನ್ನದೆನ್ನುವುದು ಇಲ್ಲಿ ಏನಿಲ್ಲ
ಅವನು ಆಡಿಸಿದಂತೆ ನಡೆಯುವುದೆಲ್ಲ
ಬರಿ ಪಾತ್ರದಾರಿಗಳು ನಾವೆಲ್ಲಾ
ಅವನೆದಿರು ಆಟ ನಡೆಯುವುದಿಲ್ಲ
ಅವನು ಕುಣಿಸಿದಂತೆ ಕುಣಿಯಬೇಕಲ್ಲ
ಯಾವ ಉನ್ಮಾದವೂ ಜೊತೆಯಾಗುವುದಿಲ್ಲ
ಯಾವ ಸಂಪತ್ತು ಕೈ ಹಿಡಿಯುವುದಿಲ್ಲ
ನೀ ಮಾಡಿದ ಒಳಿತಷ್ಟೇ ನಿನ್ನ ಕಾಯುವುದು
ಸುಡುವ ಮೌನ ಕಣ್ಣೀರಾಗಿ ಹರಿಯುವುದು
ಎಲ್ಲ ವೇದನೆಯೂ ಕೊನೆಗೊಳ್ಳುವುದು
ಸುಖಾಂತ್ಯವನ್ನು ಬಯಸುತಿದೆ ಮನ
ಸಾಕು ಸಾಕೆನಿಸಿದೆ ಈ ದುಃಖ ದುಮ್ಮಾನ
ದಾರಿ ಮುಗಿದಾಗ ಮುಗಿಯಲಿ ಪಯಣ
ಸುಗಮವಾಗಿ ತಲುಪಲಿ ಕೊನೆಯ ನಿಲ್ದಾಣ
-ನಾಗರಾಜ್ ಜಿ. ಎನ್. ಬಾಡ
ಸರಳ ವಾಗಿ..ಬದುಕಿನ ಪಯಣ ಹಾಗೇ ನಮ್ಮ ಆಶಯ…ಕವನದಲ್ಲಿ ಮೂಡಿರುವ ರೀತಿ ಚೆನ್ನಾಗಿದೆ.. ಸಾರ್
ಧನ್ಯವಾದಗಳು
ಕವನದ ಪ್ರತಿ ಸಾಲುಗಳು ಜೀವನದ ವಾಸ್ತವಿಕತೆಯನ್ನು ಬಿಂಬಿಸುವಂತಿವೆ…. ನೈಜತೆ ತೋರುವ ಸುಂದರ ಕವನ …
ಧನ್ಯವಾದಗಳು
ಚೆನ್ನಾಗಿದೆ ಕವನ
ಸ್ಥಿತಪ್ರಜ್ಞತೆಯತ್ತ ಮನಸ್ಸನ್ನು ಕೇಂದ್ರೀಕರಿಸಲು ನೆರವಾಗುವ ಸುಂದರ ಸಾಲುಗಳ ಸೊಗಸಾದ ಕವಿತೆಗಾಗಿ ಅಭಿನಂದನೆಗಳು.
ಆ ದೇವನ ಕರಗಳು ಆಡಿಸುವ ಸೂತ್ರದ ಗೊಂಬೆಗಳು ನಾವು…
ಜೀವನದ ಒಳಾರ್ಥವನ್ನು ಸ್ಪಷ್ಟವಾಗಿ ತೋರಿಸುವ ಸರಳ ಸುಂದರ ಕವನ.