ನಡೆಯುವ ಹಾದಿ

ತುಳಿಯುವವರು ತುಳಿಯುತ್ತಲೇ ಇರುತ್ತಾರೆ
ಬೆಳೆಯುವವನು ಮೈ ಕೊಡವಿ ಏಳಬೇಕು
ತುಳಿದವರ ಎದಿರು ತಲೆ ಎತ್ತಿ ನಿಲ್ಲಬೇಕು
ಸೋಲುಗಳ ಮೀರಿ ಬೆಳೆದು ತೋರಿಸಬೇಕು
ಸಾಧನೆಯ ಹಾದಿಯಲಿ ಮುನ್ನುಗ್ಗ ಬೇಕು
ತುಳಿತಕ್ಕೆ ಒಳಗಾದವರಿಗೆ ಪ್ರೇರಣೆಯಾಗಬೇಕು
ನೊಂದವರ ಕೈ ಹಿಡಿದು ಮೇಲೆತ್ತಬೇಕು
ಕಡು ಕತ್ತಲಲ್ಲೂ ಭರವಸೆಯ ಬೆಳಕ ಹಚ್ಚಬೇಕು
ಬದುಕಿನಲ್ಲಿ ಸೋಲು ಗೆಲುವು ಎಲ್ಲವೂ ಉಂಟು
ನೋವು ನಲಿವು ಬಾಳಲಿ ಬಂದು ಹೋಗುವುದುಂಟು
ಕೊಟ್ಟು ಪಡೆದಷ್ಟು ಹೆಚ್ಚುವುದು ಪ್ರೀತಿಯಗಂಟು
ಅವನ ನಿಯಮ ಮೀರಿ ನಡೆಯದಿಲ್ಲಿ ಯಾವುದೇ ನಂಟು
ಜೊತೆಗೆ ನಿಂತು ಗುಂಡಿ ತೋಡುವವರು ನಮ್ಮವರೇ
ಗೆದ್ದಾಗ ಗೆಲುವಿನ ಫಲ ಸವಿಯುವವರು ಇವರೇ
ನಮ್ಮ ಅವಶ್ಯಕತೆಗೆ ಜೊತೆ ಕೈಯನ್ನು ಜೋಡಿಸದವರು
ತಮಗೆ ಅವಶ್ಯಕತೆ ಬಿದ್ದಾಗೆಲ್ಲ
ಬಳಸಿಕೊಂಡು ದೂರಾಗುವರು
ಬದುಕು ಎಂದಿಗೂ ಎಲ್ಲರಿಗೂ ನಿತ್ಯ ನೂತನವಲ್ಲ
ಗೆದ್ದ ಗೆಲುವು ಕೈಲಿರುವ ಹಣ ಶಾಶ್ವತವಲ್ಲ
ನಾವು ನಡೆಯುವ ಹಾದಿ ತೋರುವುದು ಗುರಿಯ
ನಮ್ಮ ತಪ್ಪು ಹೆಜ್ಜೆಯಿಂದ ಕಳೆದುಕೊಳ್ಳುವೆವು ಸಿರಿಯ
–ನಾಗರಾಜ ಜಿ. ಎನ್. ಬಾಡ,
ಕುಮಟ, ಉತ್ತರ ಕನ್ನಡ.
ಸೊಗಸಾಗಿದೆ…
ವಾಸ್ತವಿಕ ದ ಅನಾವರಣ ಕವನ ಚೆನ್ನಾಗಿದೆ.. ಸಾರ್
ಬದುಕಿನ ಏರುಪೇರುಗಳು, ಅದನ್ನು ಎದುರಿಸುತ್ತಾ ಮುನ್ನುಗ್ಗಿ ನಡೆಯಬೇಕಾದ ಅನಿವಾರ್ಯತೆಯನ್ನು ಮನಮುಟ್ಟುವಂತೆ ಚಿತ್ರಿಸಿದ ಕವಿತೆ ತುಂಬಾ ಚೆನ್ನಾಗಿದೆ.
ಅರ್ಥ ಪೂರ್ಣವಾಗಿದೆ
ಚಂದದ ಅರ್ಥಪೂರ್ಣ ಕವಿತೆ.