ಕಾವ್ಯ ಭಾಗವತ :ಹಿರಣ್ಯಾಕ್ಷ
12. ತೃತೀಯ ಸ್ಕಂದ
ಅಧ್ಯಾಯ – ೩
ಹಿರಣ್ಯಾಕ್ಷ
ಶಾಪಗ್ರಸ್ಥ
ಜಯ ವಿಜಯರ
ಹರಿ ಸಾನಿಧ್ಯಾಕಾಂಕ್ಷೆ
ಅಪರಿಮಿತ.
ಹರಿಯ ಭಕ್ತರಾಗಿ
ಏಳೇಳು ಜನ್ಮಗಳ
ಭೂಲೋಕದಲಿ
ಸವಿಸಲಿಚ್ಚಿಸದೆ
ಹರಿದ್ವೇಷಿಯಾಗಿ,
ಅವನಿಂದಲೇ ಹತರಾಗಿ
ವೈಕುಂಠವ ಸೇರುವ
ಅವರ ಹರಿಭಕ್ತಿ ಅಪಾರ
ಅವರೇ
ಹಿರಣ್ಯಾಕ್ಷ, ಹಿರಣ್ಯಕಶಪರು
ದಕ್ಷಬ್ರಹ್ಮ ಪುತ್ರಿ
ಕಶ್ಯಪ ಮುನಿಯ ಪತ್ನಿ
ʼದಿತಿʼ
ಮತಿಹೀನಳಾಗಿ
ಸಂಭೋಗ ಸಮಾಗಮಕೆ
ಸೂಕ್ತವಲ್ಲದ
ಸಂಧ್ಯಾಕಾಲದಿ
ಕಾಮಪೀಡಿತಳಾಗಿ
ಕಶ್ಯಪನ ತೇಜಸ್ವೀ ವೀರ್ಯವ
ಗರ್ಭದಲಿ ಧರಿಸಿ
ನೂರ ವರುಷಗಳ ಕಾಲ
ಅದ ಬೆಳಸಿ
ಪ್ರಸವಿಸಿದ
ಅವಳಿಗಳೇ
ಹಿರಣ್ಯಾಕ್ಷ, ಹಿರಣ್ಯಕಶಪರು
ಹಿರಣ್ಯಾಕ್ಷ, ಭೂಲೋಕ
ದೇವಲೋಕಗಳನ್ನೆಲ್ಲ
ಗೆದ್ದು, ಪಾತಾಳಲೋಕವ
ಹೊಕ್ಕು
ವರಾಹರೂಪದ ಹರಿಯನ್ನೆದುರಿಸಿ
ಸಾಗರದ ತಳದಿ ಅಡಗಿದ್ದ
ಭೂಗೋಳವ ರಕ್ಷಿಸಿದ
ವರಾಹ ರೂಪದ ಹರಿಯನ್ನೆದುರಿಸಿ
ಹತನಾಗಿ ತನ್ನೊಂದು ಜನ್ಮದ
ಋಣ ತೀರಿಸಿ
ಧನ್ಯನಾದ ಹಿರಣ್ಯಾಕ್ಷ
ಕಾವ್ಯ ಭಾಗವತ ಸರಣಿಯ ಹಿಂದಿನ ಪುಟ ಇಲ್ಲಿದೆ : https://www.surahonne.com/?p=41073
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತದ ಕಾವ್ಯಾನುಸಂಧಾನ ಚೆನ್ನಾಗಿ ಮೂಡಿಬರುವಂತೆ ಮಾಡುತ್ತಿರುವ ನಿಮ್ಮ ಪ್ರಯತ್ನ ಕ್ಕೆ ನನ್ನ ಧನ್ಯವಾದಗಳು ಸಾರ್
Very nice
ಹಿರಣ್ಯಾಕ್ಷನ ಕಥಾಭಾಗ ಚೆನ್ನಾಗಿ ಮೂಡಿಬಂದಿದೆ ಸರ್.
ಹಿರಣ್ಯಾಕ್ಷನ ಪ್ರಸಂಗ ಕಾವ್ಯಾತ್ಮಕ ರೂಪದಲ್ಲಿ ಚಂದದಿಂದ ಮೂಡಿಬಂದಿದೆ
ಹಿರಣ್ಯಾಕ್ಷ ಮತಿಹೀನನಾಗಿ ವಿಷ್ಣುವನ್ನು ಸಂಹರಿಸಲು ಪ್ರಯತ್ನಿಸಿದುದಕ್ಕೆ ಕಾರಣವನ್ನು ಗಮನಿಸುವ ಭಾಗವತ ಕಥಾನುಸಂಧಾನ ಚೆನ್ನಾಗಿದೆ