ಫೋಬಿಯಾಗಳ ಸುತ್ತ

Share Button

ಫೋಬಿಯಾ ಎಂದರೆ ಭೀತಿ ಅಥವಾ ಭಯ. ಯಾವುದೋ ಒಂದು ನಿರ್ಧಿಷ್ಟ ವಸ್ತು ಅಥವಾ ಸಂದರ್ಭಗಳ ಬಗ್ಗೆ ವಾಸ್ತವಕ್ಕಿಂತಲೂ ಮೀರಿದ ಅತಿಶಯವಾದ ಭಯವನ್ನು ಫೋಬಿಯಾ ಎಂಬ ಅವ್ಯವಸ್ಥೆಗೆ (Disorder) ಕಾರಣವಾಗುತ್ತದೆ. ಕೆಲವು ಸಾಮಾನ್ಯ, ವಿಚಿತ್ರ ಹಾಗೂ ವಿರಳವಾದ ಈ ಅವ್ಯವಸ್ಥೆಗಳನ್ನು ಪರಿಶೀಲಿಸೋಣ.

ಕೆಲವರಿಗೆ ವಿಮಾನ ಪ್ರಯಾಣವೆಂದರೆ ಭಯ. ಅವರೆಂದೂ ವಿಮಾನದಲ್ಲಿ ಪ್ರಯಾಣ ಮಾಡರು. ಖ್ಯಾತ ನಟಿ ವಿಷ್ಣುವರ್ಧನ್ ಇದಕ್ಕೆ ಉತ್ತಮ ಉದಾಹರಣೆ. ಕೆಲವರಿಗೆ ನೀರೆಂದರೆ ಭಯ ಇದಕ್ಕೆ ಜಲಭಯ ರೋಗ ಎಂದು ಹೆಸರು. ಇಂಥವರು ನೀರಿದ್ದ ಕಡೆ ಅಪ್ಪಿತಪ್ಪಿಯೂ ಹೋಗುವುದಿಲ್ಲ. ಕೆಲವರಿಗೆ ತಮ್ಮನ್ನು ಸಜೀವ ಸಮಾಧಿ ಮಾಡಬಹುದು ಎಂಬ ಶಂಕೆ ಭಯ. ಇದಕ್ಕೆ ಟಾಫೋ ಫೋಬಿಯಾ (Tapnophobia) ಎನ್ನುತ್ತಾರೆ. ಇದು ಪಾಶ್ಚಾತ್ಯದಲ್ಲಿ ಕಾಣುವ ಒಂದು ವಿಚಿತ್ರ ಫೋಬಿಯಾ. ಇನ್ನು ಕೆಲವರಿಗೆ ಕನ್ನಡಿ ಕಂಡರೆ ಭಯ. ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಸ್ವಲ್ಪವೂ ಇಷ್ಟವಿಲ್ಲ, ಭಯ. ಇದಕ್ಕೆ ಐಸೋಪ್ಟ್ರೊ ಫೋಬಿಯ (Eisoptrophobia) ಎನ್ನುತ್ತಾರೆ. ಕೆಲವರಿಗೆ ಮಳೆ ಎಂದರೆ ಭಯ. ಜೋರಾದ ಮಳೆ ಪ್ರವಾಹ ಹಾಗೂ ಬಲವಾದ ಗಾಳಿ ಬೀಸಬಹುದು ಎಂಬ ಭಯ ಇದಕ್ಕೆ ಓಂಬ್ರೊಫೋಬಿಯ (Ombrophobia) ಎನ್ನುತ್ತಾರೆ. ಇನ್ನು ಕೆಲವರಿಗೆ ಶಬ್ದ ಕಂಡರೆ ಭಯ. ಧ್ವನಿವರ್ಧಕ, ಟಿ.ವಿ. ರೇಡಿಯೋ ಶಬ್ಧಗಳಿಗೆ ವಿಚಲಿತರಾಗುತ್ತಾರೆ. ಇನ್ನು ಕೆಲವರು ಹಾವು, ಚೇಳುಗಳಿಗೆ ಹೆದರುವುದಿಲ್ಲ. ಆದರೆ ಇರುವೆಗಳನ್ನು ಕಂಡರೆ ಬೆಚ್ಚಿ ಬೀಳುತ್ತಾರೆ. ಇದನ್ನು ಮೈಮಿಕೋ ಫೋಬಿಯ (Mymecophobia) ಎನ್ನುತ್ತಾರೆ. ಇನ್ನು ಕೆಲವರು ಗಾಳಿ ವಿಷಪೂರಿತವಾಗಿದೆ ಎಂದು ಭಯ ಪಡುತ್ತಾರೆ. ಇದನ್ನು ಏರೋಫೋಬಿಯ ಎನ್ನುತ್ತಾರೆ (Aero Phobia) ಇನ್ನು ಕೆಲವರು ಧೂಳನ್ನು ಕಂಡು ಭಯ ಪಡುತ್ತಾರೆ. ಇದನ್ನು ಅಮಥೋ ಫೋಬಿಯ (Amatho Phobia) ಅನ್ನುತ್ತಾರೆ. ಇಂಥವರು ಕಿಟಕಿ, ಬಾಗಿಲುಗಳನ್ನು ಯಾವಾಗಲೂ ಭದ್ರವಾಗಿ ಮುಚ್ಚಿಡುತ್ತಾರೆ.

ಅರಚಿ ಬುಲೈ ರೊ ಫೋಬಿಯಾ (Arachi Butyro Phobia) ಇಂಥವರಿಗೆ ಬಾಯಿಯ ಮೇಲ್ಭಾಗದಲ್ಲಿ ಯಾವಾಗಲೂ ಬಟಾಣಿ ಕಾಳಿನಂತಿರುವ ಬೆಣ್ಣೆ ಅಂಟಿರುವ ಬಗ್ಗೆ ಭಯ ಭೀತಿ. ಇಂಥವರು ಅಂಟಿರುವ ಯಾವುದೇ ಪದಾರ್ಥಗಳನ್ನು ತಿನ್ನುವುದಿಲ್ಲ. ನೋಡಿದರೆ ಭಯ ಪಡುತ್ತಾರೆ.

ಕೆಲವರಿಗೆ ಬಾಳೆಹಣ್ಣು ಕಂಡರೆ ಭಯ. ಅದರ ವಾಸನೆಗೆ ವಾಕರಿಸುತ್ತಾರೆ. ಇದು ಒಂಥರದ ಫೋಬಿಯ. ಕೆಲವರು ಬಲೂನ್‌ಗಳ ಬಗೆ ಭಯ ಪಡುತ್ತಾರೆ. ಹೆಚ್ಚಿನವರಿಗೆ ಅದರ ಸ್ಫೋಟದಿಂದ ಉಂಟಾಗುವ ಶಬ್ದ ಇನ್ನೂ ಭಯ. ಇದನ್ನು ಗ್ಲೋಭೋ ಫೋಬಿಯ (Glbo Phobia) ಎನ್ನುತ್ತಾರೆ. ಚಿಯಟೋ ಫೋಬಿಯ (Chiyato Phobia) ಒಂದು ವಿಚಿತ್ರವಾದ ಭಯ. ಈ ತರದ ವ್ಯಕ್ತಿಗಳು ತಮ್ಮ ಕೂದಲನ್ನು ತೊಳೆಯಲು ಕತ್ತರಿಸಲು ಹೆದರಿಸುತ್ತಾರೆ. ಕೂದಲು ಜಾಸ್ತಿ ಇರುವ ಪ್ರಾಣಿಗಳು ಕರಡಿ, ಸಿಂಹ ಇವುಗಳನ್ನು ನೋಡಲು ಇಷ್ಟಪಡುವುದಿಲ್ಲ. ಬದಲಿಗೆ ಹೆದರುತ್ತಾರೆ. ಟಾಯ್ಲೆಟ್ ಫೋಬಿಯ ಒಂದು ವಿಚಿತ್ರವಾದ ಭಯ. ಇದಕ್ಕೆ ಒಳಗಾದವರು ಶೌಚಾಲಯಕ್ಕೆ ಹೋಗಲು ಹೆದರುತ್ತಾರೆ. ತಮ್ಮನ್ನು ಯಾರೋ ನೋಡುತ್ತಿದ್ದಾರೆ ಎಬ ಭಯ ಆವರಿಸಿರುತ್ತದೆ. ವೆಸ್ಟಿಫೋಬಿಯ (Vesti Phobia) ಎಂಬುದು ಬಟ್ಟೆಗಳಿಗೆ ಸಂಬಂಧಿಸುವುದು. ಇಂಥವರು ನಿರ್ಧಿಷ್ಟವಾದ ಬಟ್ಟೆಗಳನ್ನು ಕಂಡರೆ, ಉದಾಹರಣೆಗೆ ಬಿಗಿ ಉಡುಗೆ, ವಿಚಿತ್ರ ಉಡುಗೆ ಕಂಡರೆ ಭಯ ಭೀತರಾಗುತ್ತಾರೆ. ಓಂಫಲೋ ಫೋಬಿಯ (Omphalo Phobia) ಒಂದು ವಿಚಿತ್ರವಾದ ಭಯ. ಈ ರೀತಿಯವರು ಬೇರೆಯವರ ಹೊಕ್ಕುಳ ಭಾಗ ನೋಡಿದರೆ ಭಯ ಪಡುತ್ತಾರೆ. ಅಂಥವರಲ್ಲಿ ಆರೋಗ್ಯದಲ್ಲಿ ತಕ್ಷಣ ಏರುಪೇರಾಗುತ್ತದೆ. (Phobophobia) ಫೋಬಿಯಾದ ಬಗ್ಗೆ ಭೀತಿ. ಇಂಥವರು ಆಗಾಗ್ಗೆ ಉಸಿರಾಟದ ಸಮಸ್ಯೆ ಎದೆ ಹೊಡೆತದಂಥಹ ಸಮಸ್ಯೆಗೆ ಗುರಿಯಾಗುತ್ತಾರೆ.

ಇನ್ನೊಂದು ಬಹಳ ಸಾಧಾರಣವಾಗಿ ನೋಡುವ ‘ಜೈಗರ್ನಿಕ್ ಪರಿಣಾಮ’ ಬ್ಲೂಮಾ ವುಲ್ಫೋ ಜೈಗರ್ನಿಕ್ ಎಂಬ ಮಹಿಳೆ ಮೊದಲಬಾರಿಗೆ ಇದನ್ನು ನೋಡಿ ಅದರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾಳೆ. ಈಕೆ ಮನೋರೋಗ ವೈದ್ಯೆ ಹಾಗೂ ಮನೋವಿಜ್ಞಾನಿ. ಇದರ ಪರಿಣಾಮ ಒಂದು ಉದಾಹರಣೆಯ ಮೂಲಕ ತಿಳಿಸಬಹುದು. ರೆಸ್ಟೋರೆಂಟ್‌ಗಳಲ್ಲಿ ವೇಟರ್ ಅಷ್ಟೂ ಜನರೂ ಇದ್ದರೂ ಎಲ್ಲರಿಗೂ ಅವರವರಿಗೆ ಸಂಬಂಧಪಟ್ಟ ಖಾದ್ಯಗಳನ್ನು ನೀಡುತ್ತಾರೆ. ಅವರೆಲ್ಲ ಹೊರಹೋದ ಮೇಲೆ ಎಲ್ಲವನ್ನೂ ಮರೆಯುತ್ತಾರೆ. ಹೊಸ ಗಿರಾಕಿಗಳತ್ತ ಗಮನ ಹರಿಸುತ್ತಾರೆ. ಮೊದಲು ಹೋದವರು ತಕ್ಷಣ ತಿರುಗಿ ಬಂದು ಏನಾದರೂ ಕೇಳಿದರೆ ನೀವು ಯಾರು? ಎನ್ನುತ್ತಾರೆ. ಇದೇ ರೀತಿಯ ಪರಿಣಾಮಗಳನ್ನು ಬಸ್‌ಕಂಡಕ್ಟರ್, ಪೇಪರ್ ಹಾಕುವ ಹುಡುಗರು ಇತ್ಯಾದಿ. ಇದರಿಂದ ಉಪಯೋಗಗಳೂ ಇಲ್ಲವೆಂದಲ್ಲ. ಇದನ್ನು ಆಸಕ್ತಿಕರ ಘಟನೆಗಳತ್ತ ಜನರ ಗಮನ ಸೆಳೆಯುವುದು, ಜನ ಭಾಗವಹಿಸುವ ಹಾಗೆ ಮಾಡುವುದು, ಅಕಾಲಿಕ ತಡೆಹಾಕಿ (ಧಾರವಾಹಿಗಳಂತೆ) ಮುಂದೆ ಆಸಕ್ತಿ ಬರುವಂತೆ ಸಂದರ್ಭ ಸೃಷ್ಟಿಸುವುದು, ಸಿನಿಮಾ ಮಾಧ್ಯಮದಲ್ಲಿ ಆಸಕ್ತಿ ಮೂಡಿಸುವ ಟ್ರೆöÊಲರ್ ಮೂಡಿಸುವುದು, ದೃಶ್ಯ ಮಾಧ್ಯಮದಲ್ಲಿ ಕುತೂಹಲ ಮೂಡಿಸಿ ಟಿ.ಆರ್.ಪಿ. ಹೆಚ್ಚಿಸುವುದು, ಮಾರಾಟಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುವುದು ಇತ್ಯಾದಿ. ಮಾನಸಿಕ ಆರೋಗ್ಯದ ಮೇಲೆ ಜೈಗರ್ನಿಕ್ ಪರಿಣಾಮ ಪ್ರಮುಖ ಪಾತ್ರ ವಹಿಸಬಹುದು.
ಜೈಗರ್ನಿಕ್ ಪರಿಣಾಮದ ಸಕಾರಾತ್ಮಕ ಬೆಳವಣಿಗೆಯೂ ಇರಬಹುದು. ವ್ಯಕ್ತಿ ತಾನು ಹಿಡಿದ ಕೆಲಸವನ್ನು ಸಕಾಲದಲ್ಲಿ ಮುಗಿಸುವ ಪ್ರೇರೇಪಣೆ, ಆತನ ಉತ್ತಮ ಹವ್ಯಾಸಗಳನ್ನು ಅಧಿಕಗೊಳಿಸಿ ಕಾರ್ಯಪ್ರವೃತ್ತನಾಗಬಹುದು.

ಇನ್ನೊಂದು ವಿಚಿತ್ರವಾದ ಫೋಬಿಯ ‘ಟ್ರಿಸ್ಕೆಡರ್ ಫೋಬಿಯ’ ಪಾಶ್ಚಾತ್ಯ ದೇಶಗಳಲ್ಲಿ ಹದಿಮೂರನೇ ಸಂಖ್ಯೆ ಅನಿಷ್ಟಕಾರಕ ಎಂಬ ಒಂದು ಬಲವಾದ ನಂಬಿಕೆ ಇದೆ. ಆದ್ದರಿಂದ ಅವರಾರೂ ಹದಿಮೂರನೇ ಸಂಖ್ಯೆಯನ್ನು ಇಷ್ಟಪಡುವುದಿಲ್ಲ. ಹಾಗೂ ಆ ಆಸನವಾಗಲೀ ಕೊಕೆಯಾಗಲೀ ತೆಗೆದುಕೊಳ್ಳಿಲ್ಲ. ಆದ್ದರಿಂದ ಸುಮಾರು ಎಲ್ಲಾ ದೊಡ್ಡ ಹೋಟೆಲ್‌ಗಳು, ವಿಮಾನಗಳಲ್ಲೂ 13 ನೇ ಮಹಡಿಯಾಗಲೀ ಅಥವಾ ಸೀಟುಗಳು ಇರುವುದಿಲ್ಲ. ಇದನ್ನು ನಾವೂ ಕೂಡ ನಮ್ಮ ವಿಯೆಟ್ನಾಂನ ಪ್ರವಾಸದಲ್ಲಿ ಅನುಭವಿಸಿದ್ದೀವಿ. ಇಂಥ ಮೂಢನಂಬಿಕೆಗಳಿಗೆ ಟ್ರಿಸ್ಕೆಡರ್ ಫೋಬಿಯ ಎಂದು ನಾಮಕರಣ ಮಾಡಿದ್ದಾರೆ.

ಟ್ರೈಫೋಫೋಬಿಯ (Triphophobia) ಒಂದು ವಿಚಿತ್ರವಾದ ಭಯ. ಇವುಗಳನ್ನು ಹೊಂದಿದವರು ಗೋಲಗಳ ಬಗ್ಗೆ ಭಯಪಡುತ್ತಾರೆ. ಜೇನುಗೂಡು, ಗುಳ್ಳೆಗಳು, ಗೋಲಾಕಾರದ ಬೀಜಗಳು ಏಕತಲ ಕಿಂಡಿಯಿರುವ ಬಾಗಿಲುಗಳು ಕಂಡರೆ ವಿಪರೀತ ಭಯ ಬೀಳುತ್ತಾರೆ.

ಇನ್ನು ಫೋಬಿಯಾಗಳು ಏಕೆ ಬರುತ್ತವೆ ಎಂಬ ಪ್ರಶ್ನೆ ಸಾಮಾನ್ಯ. ಈ ಫೋಬಿಯ ಗಳು ಬಲ್ಯದಲ್ಲಿ ಒಂದು ನಿರ್ಧಿಷ್ಟ ಘಟನೆ ಕಾರಣವಾಗಬಲ್ಲುದು. ಅಲ್ಲದೆ ಬೇರೆಯವರ ಅನುಭವಿಸಿದ, ಟಿ.ವಿ. ಮಾಧ್ಯಮಗಳನ್ನು ನೋಡಿದ ಮೇಲೆ ಬರುವ ಒಂದು ಭಯ, ಆತಂಕವಿರಬಹುದು. ಉದಾಹರಣೆಗೆ ತಾಯಿ ಮಗುವಿಗೆ ಸಮುದ್ರದ ಬಗ್ಗೆ ಭಯಾನಕ ವಿವರಣೆ ಕೊಟ್ಟಾಗ, ಮಗ ಟೈಟಾನಿಕ್ ಎಂಬ ಸಿನಿಮಾ ನೋಡಿದಾಗ ಸ್ಪಷ್ಟವಾಗಿ ಭಯ ಪ್ರಾರಂಭವಾಗುತ್ತದೆ. ಅಲ್ಲದೆ ಇವುಗಳಿಗೆ ವಂಶಪಾರಂಪರ್ಯದ ಹಿನ್ನೆಲೆ ಕೂಡ ಇರಬಹುದು. ಇದಕ್ಕೆ ಪರಿಹಾರ ಏನು ಎಂಬ ಕುತೂಹಲ ಸಹಜ. ಇಂಥಹ ಭಯವಿರುವವರಿಗೆ ಆ ವಸ್ತುಗಳನ್ನು ಪದೇ ಪದೇ ತೋರಿಸುವುದು, ಮುಖಾಮುಖಿಯಾಗುವುದು ಒಂದು ಪರಿಹಾರ. ಇದಕ್ಕೆ (Exposure) ‘ಎಕ್ಸ್ಫೋಶರ್ ಥೆರಪಿ’ ಎನ್ನುತ್ತಾರೆ. ಇದರಿಂದ ಬಹಳಷ್ಟು ಭಯ ನಿವಾರಣೆಯಾಗಲಿದೆ.

ಹೀಗೆ ಹತ್ತಾರು ಫೋಬಿಯಗಳು ಜನಮಾನಸರನ್ನು ಆಗಾಗ್ಗೆ ಕಾಡುತ್ತವೆ. ಇದರಿಂದ ಪರಿಹಾರ ಹುಡುಕುವುದು ಜಾಣತನ. ಸಮಯಕ್ಕೆ ಸರಿಯಾಗಿ ಮನಃಶಾಸ್ತ್ರಜ್ಞರನ್ನು ಭೇಲಿ ಮಾಡಿದರೆ ಇದರ ಸಮಸ್ಯೆ ಪರಿಹಾರವಾಗುವುದರಲ್ಲಿ ಯಾವ ಸಂಶಯವೂ ಇಲ್ಲ. ನೀವೇನಂತೀರಿ?

ಕೆ.ರಮೇಶ್ , ಮೈಸೂರು

8 Responses

  1. ಉತ್ತಮ ಮಾಹಿತಿಯನ್ನು ಒಳಗೊಂಡ ಲೇಖನ ಚೆನ್ನಾಗಿ ದೆ ಸಾರ್..

  2. ನಯನ ಬಜಕೂಡ್ಲು says:

    ಮಾಹಿತಿಪೂರ್ಣ ಲೇಖನ

  3. ಕೆ.ರಮೇಶ್ says:

    ಧನ್ಯವಾದಗಳು ಮೇಡಂ

  4. ಉತ್ತಮ ಮಾಹಿತಿ

  5. ಶಂಕರಿ ಶರ್ಮ says:

    ಅಬ್ಬಾ…ವಿಚಿತ್ರವಾದ ಫೋಬಿಯಾಗಳ ಪಟ್ಟಿ ನೋಡಿಯೇ ನನಗೆ ಹೆದರಿಕೆಯ ಹೆದರಿಕೆ ಸುರುವಾಯ್ತು ನೋಡಿ! ಬಹಳಷ್ಟು ಮಾಹಿತಿಗಳನ್ನು ಒಳಗೊಂಡ ಕುತೂಹಲಕಾರಿಯಾದ ನಿಮ್ಮ ಲೇಖನ ಚೆನ್ನಾಗಿದೆ ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: