ಕಾವ್ಯ ಭಾಗವತ : ಅಂಧ ಧೃತರಾಷ್ರ್ಟ
6. ಪ್ರಥಮ ಸ್ಕಂದ – ಅಧ್ಯಾಯ-3
ಅಂಧ ಧೃತರಾಷ್ರ್ಟ
ಅಂಧ ಧೃತರಾಷ್ಟ್ರ
ಕೇವಲ ದೃಷ್ಟಿಹೀನನಾಗದೆ
ಮತಿಹೀನನೂ ಆಗಿ
ಮೋಹಿಯಾಗಿ
ವ್ಯಾಮೋಹಿಯಾಗಿ
ಸಕಲ ಕುರುಕುಲ
ನಾಶಕನಾಗಿ
ಕುರುಕ್ಷೇತ್ರದಿ
ಹದಿನೆಂಟು ಅಕ್ಷೋಹಿಣಿ ಸೈನ್ಯ
ಬಂಧು ಬಾಂಧವರೆಲ್ಲರ
ಹತ್ಯೆಯ ಪಾಪದ
ಋಣಭಾರ ಹೊತ್ತ
ಅಂಧ ಧೃತರಾಷ್ರ್ಟ
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು
ಪತಿಯ ಅಂದತ್ವವ
ತಾನೂ ಅನುಭವಿಸಿ
ಪತಿವ್ರೆತೆಯಾದನೆಂಬ
ಭ್ರಮೆಯಿಂದ
ಗಾಂಧಾರಿ
ಹೊರಬರದಿದ್ದುದೇ
ಮಹಾಭಾರತದ ದುರಂತವೇ?
ಕುರುಡೋ
ಜಾಣ ಕುರುಡೋ
ಪತಿಗೆ ಸರಿದಾರಿ ತೋರದ
ಸತಿ
ಪತಿವ್ರತೆ ಹ್ಯಾಗಾದಾಳು?
ಆದರೆ,
ಯಾರೇನು ಮಾಡ್ಯಾರು?
ಎಲ್ಲ ಆ ಕಳ್ಳನಾಟ
ಮತಿಹೀನ, ಧೃತಿಹೀನ
ಜ್ಞಾನಿ, ಅಜ್ಞಾನಿಗಳನ್ನೆಲ್ಲ
ನಿಯಂತ್ರಿಸಿ
ಕುಣಿಸಿ
ಕಾಯ್ವ ಕೃಷ್ಣನದೇ ಲೀಲೆ
ಈ ಕವನ ಸರಣಿಯ ಹಿಂದಿನ ಪುಟ ಇಲ್ಲಿದೆ ; https://www.surahonne.com/?p=40887
(ಮುಂದುವರಿಯುವುದು)
-ಎಂ. ಆರ್. ಆನಂದ, ಮೈಸೂರು
ಭಾಗವತದ ಕಾವ್ಯಧಾರೆ ಬಹಳ ಅರ್ಥಪೂರ್ಣ ವಾಗಿ..ಅನಾವರಣ ವಾಗುತ್ತಿದೆ..ಧನ್ಯವಾದಗಳು ಆನಂದ್ ಸರ್
Beautiful
ಪತಿವ್ರತೆಯ ವ್ಯಾಖ್ಯಾನ ಅರ್ಥಪೂರ್ಣ
ಸರಳ, ಸುಂದರ ಕಾವ್ಯಧಾರೆ!
ಪ್ರಕಟಿಸುತ್ತಿರುವ “ಸುರಹೊನ್ನೆ”ಗೂ, ಓದಿ ಮೆಚ್ಚಿದ, ಪ್ರತಿಕ್ರಿಯೆ ನೀಡುತ್ತಿರುವ ಸಹೃದಯ ಓದಗರಿಗೂ ಧನ್ಯವಾದಗಳು.