ಮುಕ್ತಕಗಳು

Share Button

ಸರಸತಿಯ ಪದತಲಕೆ ಬಾಗುತಲಿ ಪೊಡಮಡುವೆ
ಕರ ಪಿಡಿದು ನಡೆಸುತಲಿ ನೀ ಸಲಹು ತಾಯೆ
ಪೊರೆಯುತಲಿ ಸತತವೂ ಸುಮತಿಯನು ನೀ ನೀಡು
ಚರಣಕೆರಗುವೆ ನಿನಗೆ ಬನಶಂಕರಿ

ಮಗಳೆಂದು ಹೀನಾಯ ಮಾಡದೆಯೆ ಸಲಹಿದೊಡೆ
ಸಿಗದಿರದೆ ಬಿರಿದರಳಿ ನಗುತಿರುವ ಹೂವು
ಸೊಗಸಾಗಿ ವಿದ್ಯೆಯನು ಕಲಿಯುತ್ತ ಮುಂದಕ್ಕೆ
ಜಗವನ್ನೆ ಗೆಲ್ಲುವಳು ಬನಶಂಕರಿ

ಗಣರಾಜ್ಯ ಉತ್ಸವವ ಆಚರಿಸಿ ಸಂತಸದಿ
ಜನಮನವು ಬೀಗುತಿದೆ ಹೆಮ್ಮೆಯಲಿ ತಾನು
ಮನವಿರಿಸಿ ಸಾಗುತಿರೆ ನಿಯಮಗಳ ಪಥದಲ್ಲಿ
ಅನುದಿನವು ನವದಿನವು- ಬನಶಂಕರಿ

ತವರೂರ ನೆನಪಿನಲಿ ಮುದಗೊಂಡ ಮನದೊಳಗೆ
ಸವಿಗನಸ ಮೆರವಣಿಗೆ ನಡೆದಿಹುದು ನೋಡು
ನವಿರಾದ ಮಮತೆಯನು ಸುರಿಸುತಿಹ ಅಮ್ಮನಿರೆ
ತವರು ನೆಲ ನಾಕವದು ಬನಶಂಕರಿ

ವರಕವಿಯ ದುಗುಡಗಳು ಕವನಗಳ ರೂಪದಲಿ
ಸರಸತಿಯ ಲೋಕದಲಿ ಮಿನುಗುತಲಿ ನಿತ್ಯ
ಮೆರೆಯುತಲಿ ಬೆಳಗಿದರು ಮಿದುಮನದ ಕವಿಯಾಗಿ
ಚಿರಕಾಲ ಉಳಿಯುತಲಿ ಬನಶಂಕರಿ

-ಶಂಕರಿ ಶರ್ಮ, ಪುತ್ತೂರು.

7 Responses

  1. MANJURAJ H N says:

    ಸರಸತಿಗೆ ಪೊಡಮಡುವ ಪದ್ಯ ತುಂಬ ಸೊಗಸಾಗಿದೆ ಮೇಡಂ, ಐದು ಮಾತ್ರೆಯ ಗಣಗಳ ರಚನೆ ಕಷ್ಟಕರ.
    ಕೆ ಎಸ್‌ ನ ಅವರ ಸಿರಿಗೆರೆಯ ನೀರಿನಲಿ ಪದ್ಯಕೆ ಸ್ವರ ಸಂಯೋಜನೆ ಮಾಡುವಾಗ ದಿವಂಗತ ಅಶ್ವತ್ಥ್‌ ಅವರು
    ಹೇಳಿರುವ ಮಾತು ನೆನಪಾಯಿತು. ಧನ್ಯವಾದಗಳು. ಮತ್ತೆ ಮತ್ತೆ ಓದಿಕೊಳ್ಳುವಂತಿದೆ. ನಮ್ಮ ವಿದ್ಯಾರ್ಥಿಗಳಿಗೆ
    ಕಲಿಸುವೆ.

    • ಶಂಕರಿ ಶರ್ಮ says:

      ತಮ್ಮ ಮುಕ್ತ, ಪ್ರೋತ್ಸಾಹಕರ ಸ್ಪಂದನೆಗೆ ವಂದಿಸಿದೆ.

  2. ಮುಕ್ತಕಗಳು..ಮುಕ್ತವಾಗಿ ಯೇ..ಓದಿಸಿಕೊಂಡು ಹೋದವು..ಮೇಡಂ

  3. ನಯನ ಬಜಕೂಡ್ಲು says:

    ಸೊಗಸಾಗಿದೆ ಮೇಡಂ. ತವರೂರೆಂದರೆ ಸವಿ ನೆನಪೇ ಮೂಡುವುದು ಯಾವಾಗಲೂ

    • ಶಂಕರಿ ಶರ್ಮ says:

      ಸಹೃದಯ ಪ್ರತಿಕ್ರಿಯೆಗೆ ನಮನಗಳು…ನಯನಾ ಮೇಡಂ.

  4. ಶಂಕರಿ ಶರ್ಮ says:

    ಪ್ರೀತಿಯ ಸ್ಪಂದನೆಗೆ ವಂದನೆಗಳು…ನಾಗರತ್ನ ಮೇಡಂ.

  5. Padma Anand says:

    ಪ್ರಾಸಬದ್ಧವಾಗಿ, ಅರ್ಥಪೂರ್ಣವಾಗಿ ಮೂಡಿ ಬಂದಿದೆ ತಾಯಿ ಸರಸ್ವತಿಯ ಕರುಣೆಯ ವರ್ಣನೆ ಬನಶಂರಿಯ. ಅಂಕಿತದೊಂದಿಗೆ ಆತ್ಮೀಯ ಶಂಕರಿಯವರ ಲೇಖನಿಯಿಂದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: