ಮನಕೆ ಮುದ ನೀಡುವ ಕಾವ್ಯ
ಸಹೋದರಿ ವಿಶಾಲಾ ಆರಾದ್ಯರವರ ನಾ.ನೀ ಅನ್ನುವ ಅಪರೂಪದ ಕಾವ್ಯಾನುಸಂದಾನದ ಪ್ರೇಮವನ್ನೆ ಉಸಿರಾಡಿರುವ ಅಪಾರವಾದ ಜೀವ ಪ್ರೀತಿಯ ಕಾವ್ಯ ಸೇಲೆಯೇ ನಾ ನೀ ಇಲ್ಲಿನ ಕವಿತೆಗಳು ಪ್ರೀತಿಯನ್ನು ಸ್ಪುರಿಸುವ ಸದಾ ಹದಗೊಂಡ ಹೃದಯಕ್ಕೆ ಮುದ ನೀಡುವ ಇವರ ಕಾವ್ಯದ ಪರಿ ಓದುಗನನ್ನು ಸದಾ ಸೆಳೆಯುತ್ತದೆ.
ಇಲ್ಲಿ ಪ್ರೀತಿ ಪ್ರೇಮದ ಒಳ ಹೊರಗಿನ ಕಾವ್ಯಗಳಾಗಿದ್ದರೆ ಓದಿ ಸುಮ್ಮನಾಗಬಹುದಿತ್ತು.ಆದರೆ ಇಲ್ಲಿರುವ ಕವಿತೆಗಳು ಧ್ಯಾನ ಮೌನ ಹೆಪ್ಪಿಟ್ಟ ಪ್ರೀತಿಯ ತುಡಿತದ ಭಾವನೆಗಳು ಸದಾ ನಮ್ಮನ್ನು ಸೆಳೆಯುತ್ತವೆ.ಪ್ರೇಮಾನು ಸಂಧಾನದ ಘಮ ಘಮಿಸುವ ಪರಿಮಳದ ವಾಸನೆಯ ಸುತ್ತ ಮನಸು ತಿರುಗಿ ಸದಾ ಧ್ಯಾನಸ್ಥತೆಯ ಒಳಗನ್ನು ತಲುಪಿ ಭಾವಲೋಕದ ಒಳಗೆ ವಿಹರಿಸಿ ಬರುತ್ತದೆ.
ಇಂತಹ ಕಾವ್ಯಕ್ಕೆ ಜೀವ ತುಂಬಿ ಬರೆದಿರುವ ವಿಶಾಲರವರು ಈ ಹಿಂದೆ ಎರಡು ಕವನ ಸಂಕಲನ ತರುವ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಇವರ ಪ್ರತಿ ಸಾಲುಗಳು ಪ್ರೇಮದ ಉಸಿರನ್ನೆ ಉಸಿರಾಡಿವೆ.ಇಲ್ಲಿನ ಒಂದೆರಡು ಸಾಲು ಗಮನಿಸಿದರೆ ಅದರ ಕೇದಿಗೆಯ ಪರಿಮಳ ನಾಸಿಕಕ್ಕೆ ತಾಗದೆ ಇರಲಾರದು.
ಅಂತಹ ಒಂದು ಸಾಲನ್ನು ಗಮನಿಸಬಹುದು
ನಿನಗಾಗಿ ಕಾಪಿಟ್ಟ
ಆಕಳ ಹಾಲದುವೆ
ಕೆನೆಗಟ್ಟಿ ಕರೆದಿದೆ ಬಂದು
ಕುಡಿದು ಬಿಡು.
ಎನ್ನುವ ಸಾಲು ಒಳಗಿನ ಪ್ರೇಮ ಹೆಪ್ಪುಗಟ್ಟಿ ಕೆನೆಯಾದುದರ ಬಗೆಯನ್ನು ಗಮನಾರ್ಹವಾಗಿ ಚಿತ್ರಿಸಿರುವುದು ಅವರ ಕಾವ್ಯ ರಚನೆಗೆ ದಕ್ಕಿದ ಹಿಡಿತವೆನ್ನಬಹುದು. ಕವಿಯಾದವ ತನ್ನ ವಿವೇಚನೆಯ ವಿಸ್ತಾರವನ್ನು ದಕ್ಕಿಸಿಕೊಂಡ ಪರಿ ನಿಜವಾಗಿಯೂ ಉತ್ತಮ ಎಂದು ಹೇಳಬಹುದು. ಆಧ್ಯಾತ್ಮದ ಒಳಗನ್ನು ತೆರೆದಿಡುವ ಇಲ್ಲಿನ ಕವಿತೆಯ ಸಾಲು ದೀಪ ಮತ್ತು ಬೆಳಕಿನ ನಡುವೆ ಇರುವ ಒಂದಿಷ್ಟು ಆಂತರ್ಯವನ್ನು ಹೀಗೆ ಹೇಳಿರುವುದು
ಬೆಳಗುತಿರು ನೀ ಗೆಳೆಯ ಎದೆಯ ಗುಡಿಯಲ್ಲಿ ನಿರತ
ದೀಪದಾರತಿ ಬೆಳಕು ಇರಲಿ ಅನವರತ
ಎಂದು ಹೃದಯದ ಗೂಡಿನಲ್ಲಿ ಪ್ರೇಮದ ಹಣತೆ
ಎಂದೂ ಕತ್ತಲೆಯನ್ನು ತಾರದಿರಲಿ ಅದು
ದಿವ್ಯ ಜ್ಯೋತಿಯಾಗಿ ಬೆಳಗುತಿರಲಿ.
ಎಂದಿರುವುದು ಪ್ರೇಮ ಸಾಮರಸ್ಯದ ಸಂಕೇತವೆ ಸರಿ.
ಸುರಿವ ಸೊನೆಗೆ ಮುಖವೂಡ್ಡಿ
ಎದುರು ಬದುರಾಗಿ ನಿಲ್ಲುವ ಬಾ
ಉದುರಿದ ಮಳೆ ಹನಿಗಳಲಿ ಕೊಟ್ಟ
ಮುತ್ತುಗಳ ಹುಡುಕೋಣ ಬಾ.
ಈ ಮೇಲಿನ ಸಾಲುಗಳು ಸೋನೆ ಮಳೆಯಲಿ ಮುತ್ತಿಟ್ಟ ಹನಿಗಳ ಹುಡುಕುವಿಕೆಯು ಓದುಗನಿಗೆ ಲಗ್ಗೆಯಿಟ್ಟು ಭಾವನೆಗಳ ಬುಗ್ಗೆಯನ್ನು ಚಿಮ್ಮಿಸಿಬಿಡುತ್ತವೆ.
ಇಲ್ಲಿ ಹಲವು ಕವಿತೆಗಳು ಪ್ರೀತಿ ಭೌತಿಕದ ನೆಲೆಯಿಂದ ಅನಂತತೆಯ ಕಡೆಗೆ ತನ್ನ ಬಾಹು ಚಾಚುವುದು ಕಾವ್ಯ ಗುಣದ ಅಂತಶಕ್ತಿ ಎನ್ನಬಹುದು.ಸದಾ ಪ್ರೀತಿಯ ಕನವರಿಕೆಯ ನಾ.ನೀ ಎನ್ನುವ ಈ ಸಂಕಲನದ ಒಳಗೆ ಪ್ರೀತಿಯನ್ನು ಉತ್ತಿ ಬಿತ್ತಿ ಬೆಳೆದದು ಹೊಸತನದ ಕಾವ್ಯ ಪ್ರಯೋಗ .
ಸದಾ ಹೊಸ ಪ್ರಯೋಗದ ತುಡಿತದಲ್ಲಿರುವ ವಿಶಾಲಆರಾಧ್ಯರವರು ಕಾವ್ಯ ಪ್ರೇಮವನ್ನು ಹಂಚುವ ಪರಿಚಾರಿಕೆಯನ್ನು ಮಾಡುತ್ತಿರುವುದು ಅವರ ಕ್ರೀಯಾಶೀಲತೆಗೆ ಹಿಡಿದ ಕನ್ನಡಿಯಾಗಿದೆ.
ನೀನೆಂದರೆ ಹರಿವ ತೊರೆಯು ತೆರೆಗಳಲಿ
ಬೆಳ್ಳನೆ ಏಳುವ ನೊರೆಸಾಲು ಘಮ್ಮನೆ ಕಾದು ಕಾದು ಕುದಿದಾರಿದ ಕೆನೆ ಹಾಲು.
ತೊರೆಯ ತರದಿ ಪುಟಿದೆಳುವ ಪ್ರೇಮದ ನೊರೆಯ ತೊರೆಯನು ಕಾವ್ಯದ ಘಮಲಿನ ಅಮಲಿನ ಪ್ರೀತಿಯನ್ನು ಹಂಚಿರುವುದು ಹಾಲಿನ ಕೆನೆಯಂತೆ ಕಾವ್ಯದ ಘಮಲಿನ ಅಮಲಿನ ಪ್ರೀತಿಯನ್ನು ಹಂಚಿರುವುದು ಹಾಲಿನ ಕೆನೆಯಂತೆ ಕಾವ್ಯ ಗಟ್ಟಿಯಾಗಿ ಬಂದಿರುವುದು ಧ್ಯಾನಸ್ಥ ಮನಸಿನ ದೇನಿಕೆ ಎಂದು ಹೇಳಬಹುದು ಇಲ್ಲಿ ಒಟ್ಟಾರೆ ಕವಿತೆಗಳು ಮನದ ಇಂಗಿತವನ್ನು ಹೃದ್ಯವಾಗಿ ಪದ್ಯವಾಗಿ ಮೂಡಿ ಬಂದಿರುವುದು ಕಾವ್ಯದ ಅಮಲು ಘಮಲು ನಮ್ಮನ್ನು ಆವರಿಸಿರುವುದು ಪ್ರಸ್ತುತ ಕಾಲಕ್ಕೆ ಕಾವ್ಯ ಆಸ್ವಾದಿಸುವ ಮನಸ್ಸುಗಳಿಗೆ ಆಸರೆಯಾಗಬಲ್ಲದು.ವಿಶಾಲ ಆರಾಧ್ಯರವರ ಪ್ರಯತ್ನ ಬಹಳ ಶಿಸ್ತು ಬದ್ಧತೆಯಿಂದ ಕೂಡಿದೆ ತಾವು ಕೊಂಡು ಓದುವ ಮೂಲಕ ಅದರ ರಸ ಸ್ವಾದವನ್ನು ಅನುಭವಿಸಿರೆಂದು ನನ್ನ ಮಾತು ಮುಗಿಸುವೆ.
-ಮರುಳಸಿದ್ದಪ್ಪ ದೊಡ್ಡಮನಿ, ಗದಗ
Nice
ಕೃತಿ ಪರಿಚಯ ಚೆನ್ನಾಗಿ ಬಂದಿದೆ.. ಸಾರ್
ಸೊಗಸಾದ ಕವನ ಸಂಕಲನವೊಂದರ ವಿಮರ್ಶಾತ್ಮಕ ಬರೆಹವು ಅಷ್ಟೇ ಚೆನ್ನಾಗಿ ಮೂಡಿಬಂದಿದೆ..
ಕೃತಿ ಪರಿಚಯ ಸೊಗಸಾಗಿದೆ. ಪರಿಚಯಿಸಿದ್ದಕೆ ಧನ್ಯವಾದ