ರಕ್ತದಾನ ಬೇಕಾಗಿದೆ…

Share Button

ಅಗೋ ಅಲ್ಲಿ, ಇಬ್ಬರು ಯುವಕರು ಹೆಲೈಟ್ ಹಾಕಿಕೊಳ್ಳದೇ, ಬೆಂಗಳೂರು ಮೈಸೂರು ರಸ್ತೇಲಿ ವೇಗವಾಗಿ ಹೋಗ್ತಿದಾರೆ. ಲಾರೀನ overtake ಮಾಡಹೋಗಿ, ಎದುರಿಗೆ ಬಂದ ಬಸ್‌ಗೆ ಡಿಕ್ಕಿ ಹೊಡೆದು, ಹಾರಿ ಬಿದ್ದು, ರಕ್ತದ ಮಡುವಿನಲ್ಲಿ ಮುಳುಗಿದರು. ಇಲ್ಲಿ ಒಬ್ಬ, ತನ್ನ ಹಿಂದೆ ಹುಡುಗೀನ ಕೂರಿಸಿಕೊಂಡು style ಆಗಿ ಸಂಚಾರಿ ಯಮ ಅನುಸರಿಸದೇ, ಅತಿವೇಗದ ಚಟದಿಂದ ನೇರ ಚಟ್ಟ ಹತ್ತಿದ. ಹುಡುಗಿ ರಕ್ತಸಿಕ್ತವಾಗಿ ರಸ್ತೇಲಿ ಬಿದ್ದಿದ್ದಾಳೆ . ಈ ಆಸ್ಪತ್ರೇಲಿ ದೊಡ್ಡ ಸಂಕೀರ್ಣ ಶಸ್ತ್ರಚಿಕಿತ್ಸೆಗೆ O ನೆಗೆಟಿವ್ ರಕ್ತ ಬೇಕಾಗಿ, ಆಪರೇಷನ್ ಮಾಡೋಕಾಗ್ತಿಲ್ಲ. ಈ ಆಸ್ಪತ್ರೆ ಹೆರಿಗೆ, ಅಪಾರ ರಕ್ತಸ್ರಾವ ಆಗ್ತಿದೆ. ರಕ್ತ ಕೊಡಲೇಬೇಕು. ಈ ಎಲ್ಲ ಸಂದರ್ಭಗಳಲ್ಲಿ ಆಸರೆಗೆ ಬರೋದು ರಕ್ತ, ಕೃತಕ ರಕ್ತ ಲಭ್ಯ ಇಲ್ಲದೇ, ಜೀವಂತ ವ್ಯಕ್ತಿಗಳೇ, ಆಯಾ ರಕ್ತದ ಗುಂಪಿನ ಅನುಸಾರ ತಮ್ಮ ರಕ್ತದಾನ ಮಾಡಬೇಕಾಗಿದೆ. ರಕ್ತದಾನಿಗಳಿಲ್ಲದೇ ರಕ್ತದಾನವಿಲ್ಲ. ಅದರಲ್ಲೂ ಸೋಂಕಿಲ್ಲದ, ಶುದ್ಧ ಒಳ್ಳೆ ರಕ್ತ, ಸ್ವಯಂಪ್ರೇರಿತ ರಕ್ತದಾನದಿಂದ ಮಾತ್ರ ಸಿಗುತ್ತೆ.

ಈ ಹಿನ್ನೆಲೇಲಿ, ಪ್ರತೀ ವರ್ಷ ಜೂನ್ 14 ರಂದು, ವಿಶ್ವ ರಕ್ತದಾನಿಗಳ ದಿನಾಚರಣೆ ಆಚರಿಸ್ತಿದಾರೆ. 2004 ರಿಂದ ಆರಂಭವಾದ ಈ ದಿನಾಚರಣೆ, ಸುರಕ್ಷಿತ ರಕ್ತ ಹಾಗೂ ರಕ್ತದ ಅಂಶಗಳ ಆವಶ್ಯಕತೆ ಬಗೆಗೆ, ಅರಿವು ಮೂಡಿಸುವ ಹಾಗೂ ರಕ್ತದಿಂದ ಜೀವ ಕಾಣಿಕೆ ನೀಡುತ್ತಿರುವ ರಕ್ತದಾನಿಗಳಿಗೆ ಧನ್ಯವಾದ ಹೇಳುವುದೇ ಆಗಿದೆ. ಜೂನ್ 14 ರಂದೇ, ಈ ದಿನದ ಆಚರಣೆಗೆ ಕಾರಣ ಗೊತ್ತೇ? ರಕ್ತದಲ್ಲಿಯ A,B,O ಗುಂಪು ವ್ಯವಸ್ಥೆ ಸೃಷ್ಟಿಸಿದ ಕಾಲ್‌ಲ್ಯಾಂಡ್ ಸೈನರ್ ಹುಟ್ಟಿದ ದಿನ ಇದು. WBDD ಅಂದರೆ ವಿಶ್ವ ರಕ್ತದಾನಿಗಳ ದಿನಾಚರಣೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ 193 ಸದಸ್ಯ ರಾಷ್ಟ್ರಗಳು, 186 ರಾಷ್ಟ್ರೀಯ ರೆಡ್ ಕ್ರಾಸ್ ಹಾಗೂ ರೆಡ್ ಕ್ರೆಸೆಂಟ್ ಸೊಸೈಟಿಗಳು, 60 ರಕ್ತದಾನ ಸಂಘಗಳು, ಹಾಗೂ 3000 ರಕ್ತ ವರ್ಗಾವಣೆ ತಜ್ಞರು ಪ್ರತಿಧಿಸುತ್ತಿದ್ದಾರೆ. ಮಾನವ ಶರೀರದಲ್ಲಿ ಒಟ್ಟೂ ರಕ್ತದ ಪ್ರಮಾಣ, ವಯಸ್ಸು, ಲಿಂಗ, ಆರೋಗ್ಯ ಸ್ಥಿತಿ, ದೇಹದ ವೈವಿಧ್ಯತೆ, ಆಧರಿಸಿದೆ. ಸರಾಸರಿ ವಯಸ್ಸಿನ ದೇಹದಲ್ಲಿ ದೇಹದ ತೂಕದ ಪ್ರತಿಶತ 7-8 ರಷ್ಟು ಪ್ರಮಾಣದ ರಕ್ತ ಇರುತ್ತದೆ. ಅದು 5 ರಿಂದ 6 ಲೀಟರ್ ಇರಬಹುದು. ಪ್ರತೀವರ್ಷ ರಕ್ತ ಹಾಗೂ ರಕ್ತದ ಅಂಶಗಳನ್ನು ರಕ್ತದಾನದ ಮೂಲಕ ಆವಶ್ಯಕ ರೋಗಿಗಳಿಗೆ ಪೂರೈಸುವ ರಕ್ತವರ್ಗಾವಣೆಯಿಂದ ಪ್ರತೀವರ್ಷ ಎಷ್ಟೋ ದಶಲಕ್ಷ ಜೀವಗಳು ಉಳಿಯುತ್ತಿವೆ. ಜೀವ ಭಯ ಸಂದರ್ಭಗಳನ್ನು ಎದುರಿಸುತ್ತಿರುವ ರೋಗಿಗಳಿಗೆ, ಹೆಚ್ಚು ಕಾಲ ಜೀವಿಸಲು, ಉತ್ತಮ ಗುಣಮಟ್ಟದ ಜೀವನ ನಡೆಸಲು, ಸಂಕೀರ್ಣ ವೈದ್ಯಕೀಯ ಹಾಗೂ ಶಸ್ತ್ರಚಿಕಿತ್ಸಾ ವಿಧಿಗಳಲ್ಲಿ, ರಕ್ತದಾನದ ಬೆಂಬಲ ಅಪಾರ. ತಾಯಿ ಹಾಗ ಬಸುರಿ ಕಾಳಜಿಯಲ್ಲಿ ಜೀವರಕ್ಷಕವಾಗಿದೆ ಇದು. ಹೆರಿಗೆ ಹಾಗೂ ಪ್ರಸವದ ನಂತರ ಅಪಾರ ರಕ್ತಸ್ರಾವದಿಂದ ಆಗುವ ಸಾವು, ಹಾಗೂ ಅಂಗವಿಕಲತೆಯನ್ನು, ಸುರಕ್ಷಿತ ಹಾಗೂ ಸಾಕಷ್ಟು ರಕ್ತದ ಲಭ್ಯತೆ ಕಡಿಮೆ ಮಾಡುತ್ತದೆ. ಅನೇಕ ದೇಶಗಳಲ್ಲಿ ಸಾಕಷ್ಟು ಸುರಕ್ಷಿತ ರಕ್ತದ ಲಭ್ಯತೆ ಇಲ್ಲ. ಹಣಕ್ಕಾಗಿ ಮಾರಿಕೊಳ್ಳದ, ಸ್ವಯಂಪ್ರೇರಿತ ರಕ್ತದಾಗಳ ರಂತರ ರಕ್ತದಾನದಿಂದ, ಒಳ್ಳೆಯ ರಕ್ತ ಪೂರೈಕೆ ಸಾಧ್ಯ.


2014 ರ ಅಂಕಿ ಅಂಶಗಳ ಪ್ರಕಾರ 60 ದೇಶಗಳ ರಾಷ್ಟ್ರೀಯ ರಕ್ತ ಪೂರೈಕೆಯ, ಶೇಕಡ 99 ರಿಂದ 100 ರಷ್ಟು, ಸ್ವಯಂಪ್ರೇರಿತ ರಕ್ತದಾಗಳಿಂದಾದರೆ, 73 ದೇಶಗಳಲ್ಲಿ ಇನ್ನೂ ಕುಟುಂಬ ಹಾಗೂ ಹಣ ಪಡೆದು ರಕ್ತ ಕೊಡುವ ದಾನಿಗಳಿಂದ ರಕ್ತ ಪೂರೈಕೆ ಆಗುತ್ತಿದೆ. 2014 ರ ಧೈಯವಾಕ್ಯ ತಾಯಂದಿರನ್ನು ಉಳಿಸಲು ಸುರಕ್ಷಿತ ರಕ್ತ ಎಂಬುದಾಗಿತ್ತು. ರಕ್ತದಾನದಿಂದ ಜೀವ ಉಳಿಸಿಕೊಂಡವರ ಕಥೆಗಳನ್ನು ಪ್ರಚಾರ ಮಾಡಲು, ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೂ ಕರೆ ಕೊಟ್ಟಿದೆ. ಈಗಾಗಲೇ ರಕ್ತದಾನ ಮಾಡುತ್ತಿರುವವರನ್ನು ಪ್ರೇರೇಪಿಸಿ, ಅವರು ರಕ್ತದಾನ ಮುಂದುವರೆಸುವಂತೆ ಹಾಗೂ ಇದುವರೆಗೆ ಒಳ್ಳೆಯ ಆರೋಗ್ಯ ಹೊಂದಿದ್ದೂ, ರಕ್ತದಾನ ಕೊಟ್ಟಿರದವರು, ವಿಶೇಷವಾಗಿ, ಯುವಜನರಿಗೆ ಪ್ರೇರೇಪಣೆ ಕೊಡುವ ಉದ್ದೇಶ ಇಲ್ಲಿದೆ. 2016 ರ ವಿಶ್ವ ರಕ್ತದಾನಿಗಳ ದಿನಾಚರಣೆಯ ಧೈಯವಾಕ್ಯ – ನನ್ನ ಜೀವ ಉಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು. ಜೂನ್ 14 ರಂದು ಈ ದಿನಾಚರಣೆ ಸಂದರ್ಭದಲ್ಲಿ, ಫುಟ್‌ಬಾಲ್ ಪಂದ್ಯಗಳು, ಸಂಗೀತ ಕಛೇರಿಗಳು, ಮೊಬೈಲ್, ರಕ್ತದಾನ ಚಿಕಿತ್ಸಾಲಯಗಳು ಮುಂತಾದ ಚಟುವಟಿಕೆಗಳು ನಡೆಯಲಿವೆ. ಈ ವರ್ಷ ಈ ಚಟುವಟಿಕೆ ಆಯೋಜಿಸಿರುವ ದೇಶ ಚೀನಾ. ಶಾಂಘಾಯ್‌ನ ಶಾಂಘಾಯ್ ರಕ್ತ ಕೇಂದ್ರದಲ್ಲಿ, ಮುಖ್ಯ ಕಾರ್ಯಕ್ರಮ ಜರುಗಲಿದೆ. ಈ ವಿಶ್ವ ಚಟುವಟಿಕೆಯನ್ನು ಸಂಯುಕ್ತವಾಗಿ ಸಂಘಟಿಸುತ್ತಿರುವ ಸಂಸ್ಥೆಗಳು, ವಿಶ್ವ ಆರೋಗ್ಯ ಸಂಸ್ಥೆ, ಅಂತರರಾಷ್ಟ್ರೀಯ ರೆಡ್‌ಕ್ರಾಸ್ ಒಕ್ಕೂಟ, ಅಂತರರಾಷ್ಟ್ರೀಯ ರಕ್ತದಾಗಳ ಸಂಘಗಳ ಒಕ್ಕೂಟ ಹಾಗೂ ಅಂತರರಾಷ್ಟ್ರೀಯ ರಕ್ತ ವರ್ಗಾವಣೆ ಸಮಾಜ.

ಈ ವಿಶೇಷ ಸಂದರ್ಭ ರಕ್ತ ವರ್ಗಾವಣೆಯಲ್ಲಿ ಮೂರು ಮುಖ್ಯ ನೀತಿಗಳನ್ನು ಅಳವಡಿಸುವುದಾಗಿದೆ.
1. ಸ್ವಾವಲಂಬನೆಯ ಗುರಿಮುಟ್ಟುವ ಸಾಧನೆ.
2. ರಕ್ತದಾನಿಗಳು / ಆರೋಗ್ಯ ರಕ್ಷಣೆ ಹಾಗೂ ರಕ್ತ ಪಡೆಯುವವರ ಆರೋಗ್ಯ ರಕ್ಷಣೆ
3. ಮಾನವ ಮೂಲದ ದ್ರವಗಳ ವ್ಯಾಪಾರೀಕರಣವಾಗದಂತೆ ಮಾಡುವುದು

ಇವೆಲ್ಲದರ ಅಡಿಪಾಯ ಸ್ವಯಂಪ್ರೇರಿತ ಹಣ ಪಡೆಯದ ರಕ್ತದಾನ, ರಕ್ತದಾನದ ನಂತರ ಪೂರ್ಣ ರಕ್ತ, ದುರಂತ ರಕ್ತಸ್ರಾವದ ಸಂದರ್ಭದಲ್ಲಿ ಮಾತ್ರ ಬೇಕಾಗುತ್ತದೆ. ಉಳಿದ ಸಂದರ್ಭಗಳಲ್ಲಿ, ಈ ರಕ್ತವನ್ನು ವಿವಿಧ ಅಂಶಗಳಾಗಿ ಬೇರ್ಪಡಿಸಲಾಗುತ್ತದೆ. ರಕ್ತದ ವಿವಿಧ ಅಂಶಗಳು 1. ಕೆಂಪು ರಕ್ತ ಕಣಗಳು 2. ಬಿಳಿಯ ರಕ್ತಕಣಗಳು 3. ಕಿರುಬಿಲ್ಲೆಗಳು (ಪ್ಲೇಟ್ ಲೆಟ್ಸ್) 4. ಪ್ಲಾಸ್ಮಾ (ರಕ್ತದ ಬಣ್ಣವಿಲ್ಲದ ಹೆಪ್ಪುಗಟ್ಟುವ ಭಾಗ) 5. ಹೆಮೋಗ್ಲೋಬಿನ್ ರಕ್ತದ ಗುಂಪು. ಎಲ್ಲರಲ್ಲಿರುವ ರಕ್ತವನ್ನು A,B,O, ಹಾಗೂ AB ಗುಂಪಾಗಿ ವಿಂಗಡಿಸಲಾಗಿದೆ. Rh ಗುಂಪಿನಲ್ಲಿ ವ್ಯಕ್ತಿ Positive ಅಥವಾ Negative ಇರುತ್ತಾನೆ/ಳೆ.

ರಕ್ತ ಶೇಖರಣೆ
ರಕ್ತವನ್ನು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಶೇಖರಿಸುತ್ತಾರೆ.ಈ ಚೀಲದಲ್ಲಿರುವ ಒಂದು ದ್ರವವು ರಕ್ತವನ್ನು ಹೆಪ್ಪುಗಟ್ಟದಂತೆ ತಡೆಯುತ್ತದೆ. ರಕ್ತಬ್ಯಾಂಕಿನಲ್ಲಾದರೆ ರಕ್ತದಾನಿಗಳಿಂದ 450 ಮಿ.ಲೀ ರಕ್ತ.

-ಎನ್.ವ್ಹಿ.ರಮೇಶ್

5 Responses

  1. ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ ಸಾರ್

  2. ನಯನ ಬಜಕೂಡ್ಲು says:

    ಉತ್ತಮ ಮಾಹಿತಿ

  3. ಲೇಖನ ಮಾಹಿತಿದಾಯಕವಾಗಿದೆ. ರಕ್ತದಾನದ ಮಹತ್ವ ಸಾರಿದೆ. ಅಭಿನಂದನೆಗಳು, ಸರ್.

  4. ಶಂಕರಿ ಶರ್ಮ says:

    ಮಹಾದಾನವಾದ ರಕ್ತದಾನದ ಮಹತ್ವವನ್ನು ಸಾರಿ ಹೇಳುತ್ತಾ; ಅದನ್ನು ಸಂಗ್ರಹಿಸುವ ವಿಧಾನ ಹಾಗೂ ಇತರ ಉಪಯುಕ್ತ ಮಾಹಿತಿಗಳನ್ನು ಹೊತ್ತ ಸಕಾಲಿಕ ಲೇಖನ ಚೆನ್ನಾಗಿದೆ.

  5. Padmini Hegde says:

    ಸಕಾಲಿಕ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: