ಮಳೆಯೆಂದರೆ…….
ಮಳೆಯೆಂದರೆ ಹಾಗೆ
ಬಚ್ಚಿಟ್ಟುಕೊಳ್ಳುವ ಮನಸು
ಹನಿ ಹನಿಯಾಗಿ ಬಿದ್ದು
ಇಳೆ ತುಂಬುವ ಕನಸು
ಓಡುವಾ ಮೋಡದಲ್ಲಿ
ನೀರ ಹನಿಗಳ ತಕದಿಮಿತ
ತಂಗಾಳಿ ಅಲೆಯಲ್ಲಿ
ತುಂತುರು ಮಳೆ ಕುಣಿತ
ಹಸಿರೊಡೆವ ಹಸಿರಲಿ ತಂಪು
ಸೂಸುವ ತಳಿರು
ಕಾನನದ ಎಡೆಯಲ್ಲಿ ಕಂಪು
ತುಂಬಿದ ಉಸಿರು
ಮಣ್ಣ ಕಣ ಕಣದಿ
ನವಿರು ಭಾವದ ತನನ
ಗಾಳಿ ಗಂಧದ ನೆಲದಿ
ನಗುವ ಮೊಗದ ನಯನ
ಜೀವಜಾಲದ ನೆರವಿಗೆ
ಮಳೆ ಹನಿಗಳ ಹಾಡು
ಜೀವ ಹಸಿರಿನ ಉಳಿವಿಗೆ
ಹರಿವ ನೀರಿನ ಜಾಡು.
-ನಾಗರಾಜ ಬಿ. ನಾಯ್ಕ, ಕುಮಟಾ.
ಒಂದು ಸನಿಗೂ ಬರೆವ ಹುಮ್ಮಸ ಉಕ್ಕಿಸುವ ಚಿಲುಮೆ ಈ ಕವನ .
ಧನ್ಯವಾದಗಳು ತಮ್ಮ ಆಪ್ತ ಓದಿಗೆ
ತುಂಬಾ ಚೆನ್ನಾಗಿದೆ….. ಮಳೆಯ ಹಾಡು
ಧನ್ಯವಾದಗಳು ತಮ್ಮ ಆಪ್ತ ಓದಿಗೆ
ಮಳೆ ಕುರಿತಾದ ಭಾವ ತುಂಬಾ ಸೊಗಸಾಗಿದೆ.
ಧನ್ಯವಾದಗಳು ತಮ್ಮ ಆಪ್ತ ಪ್ರತಿಕ್ರಿಯೆಗೆ
ಚೆನ್ನಾಗಿದೆ ಕಲ್ಪನೆ ತುಂಬಾ ಅದ್ಭುತ
ಧನ್ಯವಾದಗಳು ತಮ್ಮ ಓದಿಗೆ
ಮಳೆಹಾಡು ಸೊಗಸಾಗಿದೆ. ನೀರ ಹನಿಗಳ ತಕದಿಮಿತ……..ಗೀತಕಲ್ಪನೆ-ಗೆ ಅಭಿನಂದನೆ.
ಧನ್ಯವಾದಗಳು ತಮ್ಮ ಆಪ್ತ ಓದಿಗೆ ಹಾಗೂ ಪ್ರತಿಕ್ರಿಯೆಗೆ….
ಸರಳ ಸುಂದರ ಸಾದರ್ಬಿಕ ಕವನ ಚೆನ್ನಾಗಿದೆ ಸಾರ್
ಚೆನ್ನಾಗಿದೆ ಚಿನ್ನಾರಿ…ಪ್ರಭುದ್ಧತೆಯತ್ತ…ಹೂಮನಸು…
ಧನ್ಯವಾದಗಳು ತಮ್ಮ ಆಪ್ತ ಓದಿಗೆ
ಬಹಳ ಸುಂದರವಾಗಿದೆ ಕವನ
ಧನ್ಯವಾದಗಳು ತಮ್ಮ ಆಪ್ತ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಚೆನ್ನಾಗಿದೆ.. ಮಳೆಯ ಹನಿಯಂತೆ ಓದುವ ಮನವ ತಂಪಾಗಿಸಿದೆ.. ಮಳೆ ಹನಿಯ ಹಾಡು ಸೆಳೆಯುವುದು ನೋಡು
ಧನ್ಯವಾದಗಳು ತಮ್ಮ ಓದಿಗೆ
ಕವಿತೆ ಬಹಳ ಸೊಗಸಾಗಿ ಮೂಡಿಬಂದಿದೆ , ನಿಮ್ಮ ಕವಿತೆಗಳು ಸಂದರ್ಭಗಳಿಗೆ ಅನುಸಾರವಾಗಿ ಬಿಂಬಿತವಾಗುತ್ತಿದೆ,
ಅಭಿನಂದನೆಗಳು ಸರ್
ಧನ್ಯವಾದಗಳು ತಮ್ಮ ಓದಿಗೆ
ಸುಂದರ ಸಾಂದರ್ಭಿಕ ಕವನ.
ಧನ್ಯವಾದಗಳು ತಮ್ಮ ಓದಿಗೆ
ಭಾವಪೂರ್ಣ ಕವಿತೆ..
@ ಫಾಲ್ಗುಣ ಗೌಡ ಅಚವೆ
ಧನ್ಯವಾದಗಳು ಸರ್ ತಮ್ಮ ಓದಿಗೆ
ಭಾವಪೂರ್ಣ ಕವಿತೆ