ಬೆಳಕು-ಬಳ್ಳಿ

ಜಿಜ್ಞಾಸೆ………

Share Button

PC :Internet

ನಾ ಜೀವನದಲ್ಲಿ ಕಳೆದ ವಸಂತಗಳ ನೆನೆದಾಗ
ಮನವರಿಕೆಯಾಯಿತು ಎನಗೆ ಉಳಿದಿರುವ ದಿನಗಳು ಕೆಲವೇ ಕೆಲವೆಂದು

ಸಿಹಿ ತಿಂಡಿಗಳ ಗೆದ್ದು ಆಸೆಯಿಂದ ಗಬಗಬನೆ ತಿಂದು
ಉಳಿದ ತುಣುಕುಗಳ ರುಚಿಯ ಮನಸಾರೆ ಸವಿಯುವ

ಆಡುವ ಮಗುವಿನಂತಾಗಿದೆ ನನ್ನಯ ಪರಿಸ್ಥಿತಿ

ಅಂತಸ್ತುಗಳು ವಿವಿಧ ನಿಯಮಾವಳಿಗಳು ಆಂತರಿಕ ಗೊತ್ತುವಳಿಗಳು
ಇವುಗಳ ಬಗ್ಗೆ ಚರ್ಚಿಸುವ ದೀರ್ಘ ಸಭೆ ಕೂಟಗಳ ಮೇಲೆ ಎನಗೆ ವಿಶ್ವಾಸವಿಲ್ಲ

ವಯಸ್ಸಾಗಿದ್ದರೂ ಇನ್ನೂ ಬೆಳೆಯದಿರುವ
ಸಾಮಾನ್ಯ ಜ್ಞಾನವಿಲ್ಲದ ಜನರೊಂದಿಗೆ ಬೆರೆಯಲು ತಾಳ್ಮೆಯಿಲ್ಲ

ನನ್ನ ಕಾಲಾವಧಿ ಬಹು ಸೀಮಿತವಾಗಿದೆ
ನನ್ನ ಆತ್ಮ ಹೊರಡುವ ಅವಸರದಲ್ಲಿದೆ

ನನಗೆ ನಿಜಜೀವನದ ಸ್ವಾದ ಬೇಕಾಗಿದೆ
ಬಾಳ ಬುತ್ತಿಯಲಿ ಉಳಿದ ಸಿಹಿ ತುಣುಕುಗಳು ಕೆಲವೇ ಕೆಲವು

ಜವಾಬ್ದಾರಿಗಳಿಗೆ ಹೆಗಲು ಕೊಡುವ
ಸತ್ಯ ಪ್ರಾಮಾಣಿಕತೆಯೇ ಉಸಿರಾಗಿರುವ

ತಮ್ಮದೇ ತಪ್ಪುಗಳನ್ನು ಪರಿಹಾಸ್ಯ ಮಾಡಿ ನಗುವ
ವಾಸ್ತವ ಅರಿತ ಮನುಜರ ನಡುವೆ ಕೊನೆಗಾಲ ಕಳೆಯುವಾಸೆ

ಹೀಗೆ ಮಾನವೀಯ ‌ಮೌಲ್ಯಗಳ‌ ಎತ್ತಿ ಹಿಡಿಯುವಾಸೆ
ಜೀವನದಲ್ಲಿ ಕಡು ಕಷ್ಟಗಳನ್ನುಂಡರೂ ಇನ್ನೊಬ್ಬರ ನೋವಿಗೆ ಮಿಡಿಯುವ
ಹೃದಯವಂತರೊಡನೆ ಒಡಗೂಡುವಾಸೆ

ಕಹಿಯನ್ನುಂಡು ಸಿಹಿಯಾದ ಫಲವ ಕೊಡುವ ವೃಕ್ಷಗಳ ಆಶ್ರಯಿಸುವ ಪರಮಾಸೆ

ಹೌದು…. ನನಗೆ ಹೊರಡುವ ಕಡು ಅವಸರವಿದೆ
ಘನ ಉದ್ದೇಶದ ಬದುಕು ನನ್ನದಾಗಬೇಕೆಂಬ ಬಯಕೆಯಿದೆ

ಉಳಿದ ಅಮೂಲ್ಯ ದಿನಗಳ ಸಾರ್ಥಕತೆಯ
ಪಡೆಯಲು ನಿಜವಾದ ಪ್ರೌಢಿಮೆಯಿದೆ

ಇದುವರೆಗೂ ಸವಿದ ಸಿಹಿ ಖಾದ್ಯಗಳಿಗಿಂತ
ಮಿಕ್ಕಿರುವ ರಸಾಯನಗಳ ಸವಿ ಜಾಸ್ತಿ ಎಂಬುದ ನಾ ಬಲ್ಲೆ

ಪ್ರೀತಿಸಿದವರೊಡಗೂಡಿ ಶಾಂತಿ ನೆಮ್ಮದಿಯಿಂದ
ಬಾಳ ಅಂತಿಮ ಗುರಿಯ ತಲುಪುವಾಸೆ ಸ್ವ ಪ್ರಜ್ಞೆಯಿಂದ ಸಮಾಧಾನದಿಂದ

ಎಮ್ಮ ಪಾಲಿಗೆ ಎರಡೆರಡು ಜೀವನಗಳು
ಎರಡನೆಯದು ಪ್ರಾರಂಭವಾಗುವುದು
ನಮಗಿರುವುದು ಒಂದೇ ಒಂದು ಜೀವನ ಎಂದು ಅರಿವಾದಾಗ

(ಬ್ರೆಜಿಲ್ ಕವಿತೆಯ ಭಾವಾನುವಾದ)

-ಕೆ.ಎಂ ಶರಣಬಸವೇಶ

12 Comments on “ಜಿಜ್ಞಾಸೆ………

    1. ನೀವು ಈ ರೀತಿಯ ಪತ್ರಿಕೆ ಮಾಡಿ ನಮ್ಮ ಪುಟ್ಟ ಪ್ರಯತ್ನ ಎಲ್ಲರಿಗೂ ತಲುಪುವಂತೆ ಮಾಡಿದ್ದೀರಾ. ಅದಕ್ಕೆ ತಮಗೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಪ್ರೋತ್ಸಾಹದಿಂದ ಇದು ಸಾಧ್ಯವಾಯಿತು

  1. ಕವನ ಅರ್ಥ ಪೂರ್ಣವಾಗಿದೆ. ಈ ಸಲದ ಸುರಹೊನ್ನೆ ಸಂಚಿಕೆಯ‌ ಎಲ್ಲಾ ಲೇಖನಗಳೂ ಸೊಗಸಾಗಿವೆ.

  2. ಅನುವಾದಿತ ಭಾವಪೂರ್ಣ ಕವನವು ಭಾಷೆಯನ್ನು ಮೀರಿ ಮನಮುಟ್ಟುವಂತಿದೆ.

Leave a Reply to ಬಿ.ಆರ್.ನಾಗರತ್ನ Cancel reply

 Click this button or press Ctrl+G to toggle between Kannada and English

Your email address will not be published. Required fields are marked *