“ಜೈವಿಕ ವೈವಿಧ್ಯತೆ”ಎನ್ನುವ ವಿಸ್ಮಯ ಪ್ರಪಂಚ!.
ಈ ಭೂಮಿಯ ಮೇಲೆ ಕೋಟ್ಯಾನು ಕೋಟಿ ಜೀವರಾಶಿಗಳು ಇವೆ. ಅವುಗಳಲ್ಲಿ ಬೇರೆ ಬೇರೆ ಪ್ರಬೇಧಗಳಾಗಿ ಕೂಡ ವಿಂಗಡಿಸಲಾಗಿದೆ. ಪಾಣಿ, ಪಕ್ಷಿ, ಕ್ರಿಮಿಕೀಟ, ಸಸ್ಯಗಳು ಮುಂತಾದವುಗಳು ಇಲ್ಲಿ ಅಡಕವಾಗಿವೆ. ಮನುಷ್ಯ ಬುದ್ಧಿವಂತ ಪ್ರಾಣಿ ಎಂದು ಕರೆಯಲಾಗಿದೆ. ಜೀವವಿರುವ ಜೀವರಾಶಿಗಳು ಈ ಭೂಮಿಯ ಮೇಲೆ ಮಾತ್ರ ಲಭ್ಯ. ಬೇರೆ ಯಾವ ಗ್ರಹಗಳಲ್ಲೂ ಕೂಡ ಈ ರೀತಿಯ ಪ್ರಭೇದಗಳನ್ನು ನಾವು ಕಾಣಲು ಆಗುವುದಿಲ್ಲ.ಜೈವಿಕ ವೈವಿಧ್ಯತೆಯ ಬಗ್ಗೆ ತಿಳಿದುಕೊಳ್ಳುತ್ತಾ ಹೋದರೆ ಒಂದು ವಿಸ್ಮಯ ಪ್ರಪಂಚ ನಮ್ಮ ಕಣ್ಣೆದುರು ತೆರೆದುಕೊಳ್ಳುತ್ತಾ ಹೋಗುತ್ತದೆ. ಜೈವಿಕ ವೈವಿಧ್ಯತೆಯ ಅಂತರಾಷ್ಟ್ರೀಯ ದಿನವನ್ನು ಕೂಡ ಆಚರಿಸಲಾಗುತ್ತಾ ಬರುತ್ತಿದೆ. ಅದರ ಇತಿಹಾಸ ಅದರ ಪ್ರಾಮುಖ್ಯತೆ ಪ್ರಸ್ತುತ ಆಗುತ್ತಿರುವ ಸಮಸ್ಯೆಗಳು ಇವೆಲ್ಲದರ ಬಗ್ಗೆ ಚಿಕ್ಕದಾಗಿ ತಿಳಿದುಕೊಳ್ಳೋಣ.
ಈ ಪ್ರಕೃತಿಗೂ, ಮಾನವನ ಜೀವನಕ್ಕೂ ಅವಿನಾಭಾವ ಸಂಬಂಧವಿದೆ. ನಮ್ಮ ಆಹಾರ ಮತ್ತು ಆರೋಗ್ಯಕ್ಕಾಗಿ ನಾವು ಆರೋಗ್ಯಕರ, ನೈಸರ್ಗಿಕ ವ್ಯವಸ್ಥೆಗಳ ಮೇಲೆ ಅವಲಂಬಿತರಾಗಿದ್ದೇವೆ. ಆದ್ದರಿಂದ, ಹಲವಾರು ಜೀವವೈವಿಧ್ಯದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮೇ- 22 ರಂದು ಅಂತರರಾಷ್ಟ್ರೀಯ ಜೀವವೈವಿಧ್ಯದ ದಿನವನ್ನು ಆಚರಿಸಲಾಗುತ್ತದೆ.ನಾವು ವಾಸ್ತವವಾಗಿ, ಪ್ರಕೃತಿ ಪ್ರಯೋಜನಗಳನ್ನು ಪಡೆಯುತ್ತೇವೆ. ಆದರೆ ಹೆಚ್ಚಾಗಿ ನಾವು ಅದನ್ನು ಲಘುವಾಗಿ ತೆಗೆದುಕೊಳ್ಳುತ್ತೇವೆ. IPBES ಮಾಸಿಕ ವರದಿಯು “ನಮ್ಮನ್ನು ನಾವು ಉಳಿಸಿಕೊಳ್ಳಲು ಪ್ರಕೃತಿಯನ್ನು ಸಂರಕ್ಷಿಸುವುದು ಅವಶ್ಯಕ”- ಎಂದು ಹೇಳುತ್ತದೆ. ನಿಜಕ್ಕೂ ಇದು ಅರ್ಥಪೂರ್ಣ ಮಾತು ಜೊತೆಗೆ ತೀರ ಅನಿವಾರ್ಯವಾಗಿದೆ. ಅಲ್ಲದೇ ಇದು ತುರ್ತು ಅವಶ್ಯಕತೆಯಾಗಿದೆ.ಈ ದಿನ ಪ್ರಕೃತಿಗೆ ಧನ್ಯವಾದ ಹೇಳಲೇಬೇಕು.
ಜೀವವೈವಿಧ್ಯ ಎಂದರೆ ಜೀವವೈವಿಧ್ಯವು “ಜೈವಿಕ” ಮತ್ತು “ವೈವಿಧ್ಯತೆ” ಎಂಬ ಎರಡು ಪದಗಳಿಂದ ಉತ್ಪತ್ತಿಯಾಗುತ್ತದೆ. ಇದು ಭೂಮಿಯಂತಹ ಸಸ್ಯಗಳು, ಪ್ರಾಣಿಗಳು, ಪ್ರಾಣಿಗಳು ಮತ್ತು ಸೂಕ್ಷ್ಮ ಜೀವಿಗಳ ಮೇಲೆ ಇರುವ ಎಲ್ಲಾ ಪ್ರಾಣಿಗಳನ್ನು ಸೂಚಿಸುತ್ತದೆ. ಜೊತೆಗೆ, ಇದು ಅವರು ರೂಪಿಸುವ ಸಮುದಾಯಗಳು ಮತ್ತು ಅವರು ವಾಸಿಸುವ ಆವಾಸಸ್ಥಾನಗಳನ್ನು ಸೂಚಿಸುತ್ತದೆ. ಜೈವಿಕ ವೈವಿಧ್ಯತೆಯ ಸಮಾವೇಶದ ದಲ್ಲಿ ಜೈವಿಕ ವೈವಿಧ್ಯತೆಯ ಔಪಚಾರಿಕ ವ್ಯಾಖ್ಯಾನವನ್ನು ಉಲ್ಲೇಖಿಸಲಾಗಿದೆ: ಇದರರ್ಥ ಅಂತರ್ ಅಲಿಯಾ, ಟೆರೆಸ್ಟ್ರಿಯಲ್, ಸಾಗರ ಮತ್ತು ಇತರ ಜಲಚರ ಪರಿಸರ ವ್ಯವಸ್ಥೆಗಳು ಮತ್ತು ಅವು ಭಾಗ ಪರಿಸರ ಸಂಕೀರ್ಣಗಳು ಸೇರಿದಂತೆ ಎಲ್ಲಾ ಮೂಲಗಳಿಂದ ಜೀವಿಗಳ ನಡುವಿನ ವ್ಯತ್ಯಾಸ. ಇದು ಜಾತಿಯೊಳಗೆ, ಜಾತಿಗಳು ಮತ್ತು ಪರಿಸರ ವ್ಯವಸ್ಥೆಗಳ ನಡುವಿನ ವೈವಿಧ್ಯತೆಯನ್ನು ಒಳಗೊಂಡಿದೆ.
ಮಾನವ ಇಂದು ಏನೆಲ್ಲಾ ಸಾಧನೆ ಮಾಡಿದ್ದಾರೆ. ಆದರೆ ಪ್ರಕೃತಿ ಮುಂದೆ ಕುಬ್ಜನಾಗಿದ್ದಾನೆ. ತಂತ್ರಜ್ಞಾನದ ಬೆಳವಣಿಗೆಗಳು ವಿಶ್ವದ ಇಡೀ ಸಮುದಾಯವು ನಮ್ಮ ಆರೋಗ್ಯ, ನೀರು, ಆಹಾರ, ಔಷಧಗಳು, ಬಟ್ಟೆ, ಇಂಧನ ಇತ್ಯಾದಿಗಳಿಗೆ ಆರೋಗ್ಯಕರ ಪರಿಸರ ವ್ಯವಸ್ಥೆಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ…. ಆಹಾರ, ವ್ಯವಸ್ಥೆ, ಪೋಷಣೆ, ಜೀವವೈವಿಧ್ಯದ ಮೇಲೆ ಆರೋಗ್ಯ ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಳ ಅವಲಂಬನೆಯ ಬಗ್ಗೆ ಜ್ಞಾನ ಮತ್ತು ಜಾಗೃತಿಯನ್ನು ಹರಡಲು ಕೇಂದ್ರೀಕರಿಸುತ್ತದೆ.
ಮಾನವ ಇಂದು ವೇಗದ ಜಗತ್ತಿನಲ್ಲಿ ಕೊಳ್ಳು -ಬಾಕ ಸಂಸ್ಕೃತಿಯೊಂದಿಗೆ ಐಷಾರಾಮಿ ಜೀವನ ನಡೆಸುತ್ತಾ, ಪ್ರಕೃತಿಯೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಾ ಬರುತ್ತಿದ್ದಾನೆ.ಅದರಿಂದಾಗಿ ಅನೇಕ ಪಾಠಗಳನ್ನು ಪ್ರಕೃತಿ ನಮಗೆ ನೀಡಿದೆ. ಆದರೂ ಕೂಡ ಇನ್ನೂ ಎಚ್ಚರ ಗೊಂಡಿಲ್ಲ.ಜೀವವೈವಿಧ್ಯದ ಸಂರಕ್ಷಣೆಗಾಗಿ ನಾವು ವರ್ಷದಿಂದ ವರ್ಷಕ್ಕೆ ಕೆಲವಾರು ಯೋಜನೆಗಳನ್ನು ಹಾಕಿಕೊಂಡು, ಅದರ ಸಂರಕ್ಷಣೆಗೆ ಕ್ರಮವಹಿಸಲೇಬೇಕು.
ಆಹಾರದ ತುಣುಕುಗಳನ್ನು ಕಾಂಪೋಸ್ಟ್ ಮಾಡಿ ಮರುಬಳಕೆ ಮಾಡಬಹುದಾದ ಚೀಲಗಳನ್ನು ಬಳಸಿ, ಆಹಾರದ ಪ್ಯಾಕೇಜಿಂಗ್ ಅನ್ನು ಕಡಿಮೆ ಮಾಡಿ ಅಥವಾ ಗಾಜಿನ ಜಾಡಿಗಳನ್ನು ಅಥವಾ ಪಾತ್ರೆಗಳನ್ನು ಮರುಬಳಕೆ ಮಾಡಿ. ಪ್ಲಾಸ್ಟಿಕ್ ಒಣಹುಲ್ಲಿನ, ಕಾಫಿ ಕಪ್‌ಗಳು, ಗ್ಲಾಸ್‌ಗಳು, ನೀರಿನ ಬಾಟಲಿಗಳು ಇತ್ಯಾದಿಗಳಂತಹ ಪ್ಲಾಸ್ಟಿಕ್‌ಗಳನ್ನು ಬಳಸುವುದನ್ನು ತಪ್ಪಿಸಬೇಕು.
ಜೈವಿಕ ವೈವಿಧ್ಯತೆಯ ಅಂತರರಾಷ್ಟ್ರೀಯ ದಿನವನ್ನು ವರ್ಷ ವರ್ಷವೂ ಕೂಡ ಒಂದೊಂದು ಥೀಮ್ ನೊಂದಿಗೆ ಆಚರಿಸಲಾಗುವುದು. ಆ ವರ್ಷ ವಿಶೇಷವಾಗಿ ಎಲ್ಲೆಡೆ ಈ ಜೀವ ವೈವಿಧ್ಯತೆಯ ಬಗ್ಗೆ ಪ್ರಚುರ ಪಡಿಸುವುದು ಆಗಿದೆ. ಕಳೆದ ವರ್ಷ 2023-“ಒಪ್ಪಂದದಿಂದ ಕ್ರಿಯೆಗೆ: ಜೀವವೈವಿಧ್ಯವನ್ನು ಮರಳಿ ನಿರ್ಮಿಸಿ”. ಎಂಬುದಾಗಿತ್ತು. ಈ ವರ್ಷ 2024-“ಯೋಜನೆಯ ಭಾಗವಾಗಿರಿ” ಎನ್ನುವುದರೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಥೀಮ್ ಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಜೀವ ವೈವಿಧ್ಯತೆ ಅಗಾಧತೆಯ ಬಗ್ಗೆ ಅರಿವಾಗುತ್ತದೆ. ಜೊತೆಗೆ ಅದನ್ನು ಉಳಿಸಿ ಬೆಳೆಸುವಲ್ಲಿ ನಾವು ಏನೆಲ್ಲಾ ಕ್ರಮ ವಹಿಸಬೇಕು ಎನ್ನುವ ಒಂದು ಸಂದೇಶದ ಜೊತೆಗೆ ಮುನ್ನೆಚ್ಚರಿಕೆಯನ್ನು ಕೂಡ ನೀಡುವಂತಹದ್ದು.ಏಕೆಂದರೆ ಈ ಸುಂದರ ಭೂಮಿ ಮನುಷ್ಯನೊಬ್ಬನಿಗಷ್ಟೇ ಮೀಸಲಾಗಿಲ್ಲ. ಸಕಲ ಜೀವಕೋಟಿ ರಾಶಿಗಳಿಗೂ ಕೂಡ ಸೇರಿದ್ದು. ನಾವು ಬದುಕಿ, ಇತರ ಜೀವಿಗಳನ್ನು ಬದುಕಿಸಿ ಅವು ಮುಂದಿನ ಪೀಳಿಗೆಗೂ ಕೂಡ ಇರುವಂತೆ ನೋಡಿಕೊಳ್ಳಬೇಕು.
ಹಲವು ಕಡೆ ಅನೇಕ ಜೀವಸಂಕುಲಯಗಳು ಒಂದಲ್ಲ ಒಂದು ರೀತಿಯಲ್ಲಿ ಮಾನವನ ಅಭಿವೃದ್ಧಿಯ ನೆಪದಲ್ಲಿ ಅವನತಿಯ ಹಾದಿಯನ್ನು ಹಿಡಿದಿವೆ. ಇಂತಹ ಸಂದರ್ಭದಲ್ಲಿ ನಾವು ಜೀವ ಪ್ರಭೇದಗಳ ಬಗ್ಗೆ ಕೇವಲ ತಿಳಿದುಕೊಂಡರಷ್ಟೇ ಸಾಲದು, ಅವುಗಳ ಜೀವನಕ್ರಮ, ಭೂಮಿಯ ಮೇಲಿನ ಅವುಗಳ ವಿಸ್ಮಯ ಇವೆಲ್ಲವನ್ನೂ ನಾವು ಅಧ್ಯಯನದ ಮೂಲಕ ತಿಳಿದುಕೊಳ್ಳಲೇಬೇಕು.ಈಗಾಗಲೇ ಅನೇಕ ಜೀವ ಪ್ರಭೇದಗಳ ಬಗ್ಗೆ ಶಾಲಾ ಕಾಲೇಜು ಪಠ್ಯ ವಿಷಯಗಳಲ್ಲಿ ಅಳವಡಿಸಲಾಗಿದೆ. ಅವುಗಳನ್ನು ಪೀಠಿಕೆಯೊಂದಿಗೆ ಸುದೀರ್ಘವಾಗಿ ಅಧ್ಯಯನ ಮಾಡಲಾಗುತ್ತಿದೆ. ಕೇವಲ ಅಧ್ಯಯನ ಮಾಡಿ ಅಂಕಗಳಿಕೆ ಮಾಡಿದರೆ ಅಷ್ಟೇ ಸಾಲದು. ನಾವುಗಳು ವಾಸಿಸುವ ಸುತ್ತಮುತ್ತ ಇರುವ ಅನೇಕ ಪ್ರಭೇದಗಳನ್ನು ನಾವು ಗುರುತಿಸಬೇಕು. ಅದು ಸಸ್ಯ ಸಂಕುಲವೇ ಆಗಿರಬಹುದು, ಪ್ರಾಣಿ ಸಂಕುಲವೇ ಆಗಿರಬಹುದು, ಇನ್ನಿತರ ಕ್ರಿಮಿಕೀಟಗಳು ಆಗಿರಬಹುದು.
ಜೀವವೈವಿಧ್ಯದ ಪ್ರಾಮುಖ್ಯತೆ ಮತ್ತು ಭವಿಷ್ಯಕ್ಕಾಗಿ ಅದು ಯಾವ ಪಾತ್ರವನ್ನು ವಹಿಸುತ್ತದೆ, ಜನರಿಗೆ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಹಲವಾರು ರಾಷ್ಟ್ರೀಯ ಸರ್ಕಾರಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಸಹ ಆಚರಣೆಗಳಲ್ಲಿ ಭಾಗವಹಿಸುತ್ತವೆ. ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಂಪರ್ಕ ಮಾಧ್ಯಮಗಳಾದ ದಿನಪತ್ರಿಕೆಗಳು, ರೇಡಿಯೋ ಮತ್ತು ದೂರದರ್ಶನದ ಮೂಲಕ ಜೀವವೈವಿಧ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ನುರಿತ ತಜ್ಞರೊಂದಿಗೆ ಕಾರ್ಯಕ್ರಮ ಪ್ರಸಾರ ಮಾಡುತ್ತಿವೆ. ಪರಿಸರ ಸಮಸ್ಯೆಗಳ ಮೇಲಿನ ಚಲನಚಿತ್ರಗಳನ್ನು ಸಹ ತೋರಿಸಲಾಗಿದೆ . ವಿದ್ಯಾರ್ಥಿಗಳು, ವೃತ್ತಿಪರರು ಮತ್ತು ಸಾರ್ವಜನಿಕರಿಗಾಗಿ ಪ್ರದರ್ಶನಗಳು ಮತ್ತು ಸೆಮಿನಾರ್‌ಗಳನ್ನು ಸಹ ನಡೆಸಲಾಗುತ್ತದೆ. ಅಳಿವಿನಂಚಿನಲ್ಲಿರುವ ಜಾತಿಗಳು ಅಥವಾ ಆವಾಸಸ್ಥಾನಗಳನ್ನು ಹೇಗೆ ಸಂರಕ್ಷಿಸುವ ಜನರ ಮೇಲೆ ಕೇಂದ್ರೀಕರಿಸುವ ಹಲವಾರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಾಗಿದೆ. ಸವೆತವನ್ನು ತಡೆಗಟ್ಟಲು ಸಹಾಯ ಮಾಡುವ ಹಲವಾರು ಸ್ಥಳಗಳಲ್ಲಿ ಮರಗಳು ಮತ್ತು ಇತರ ಸಸ್ಯಗಳನ್ನು ನೆಡುವುದು ಆಗಿವೆ. ಪ್ರಕೃತಿಗೆ ಸಂಬಂಧಿಸಿದಂತೆ ಅನೇಕ ಛಾಯಾಚಿತ್ರ ಸ್ಪರ್ಧೆ, ಪ್ರಬಂಧ, ಲೇಖನ, ಕವನ, ಕಥೆ ಎಲ್ಲವುಗಳ ಮೂಲಕ ಜಾಗೃತಗೊಳಿಸಲಾಗುತ್ತಿದೆ. ಪರಿಸರ ಕಲಾಕೃತಿಗಳನ್ನು ರಚಿಸಲು ಸಹ ಪ್ರದರ್ಶನಗಳು ಅಲ್ಲಲ್ಲಿ ನಡೆಯುತ್ತವೆ.
ಈ ಜೀವವೈವಿಧ್ಯತೆಯು ಪರಿಸರವನ್ನು ಉತ್ತೇಜಿಸುತ್ತದೆ, ಅಲ್ಲಿ ಎಲ್ಲಾ ಜಾತಿಯು ದೊಡ್ಡದಾಗಿದೆ ಅಥವಾ ಚಿಕ್ಕದಾಗಿದೆ, ಎಲ್ಲಾ ಪ್ರಮುಖ ಪಾತ್ರಗಳನ್ನು ವಹಿಸುತ್ತದೆ. ಹೆಚ್ಚಿನ ಸಂಖ್ಯೆಯ ಸಸ್ಯ ಪ್ರಭೇದಗಳು ಹೆಚ್ಚಿನ ಪ್ರಮಾಣದಲ್ಲಿ ಬೆಳೆದಂತೆ, ಹೆಚ್ಚಿನ ಜಾತಿಯ ವೈವಿಧ್ಯತೆಯು ಎಲ್ಲಾ ಜೀವ ರೂಪಗಳಿಗೆ ನೈಸರ್ಗಿಕ ಸುಸ್ಥಿರತೆಯನ್ನು ಖಾತ್ರಿಗೊಳಿಸುತ್ತದೆ. ಜೊತೆಗೆ ಆರೋಗ್ಯಕರ ಪರಿಸರ ವ್ಯವಸ್ಥೆಯು ವಿವಿಧ ವಿಪತ್ತುಗಳನ್ನು ತಡೆಗಟ್ಟುತ್ತದೆ ಮತ್ತು ಚೇತರಿಸಿಕೊಳ್ಳುತ್ತದೆ.ಕೃಷಿ ಭೂಮಿಗೆ ಯೋಗ್ಯವಾದ ಪರಿಸರ ಈಗ ನಿರ್ಮಾಣವಾಗುತ್ತಿಲ್ಲ. ಮಣ್ಣಿನ ರಚನೆ ಮತ್ತು ರಕ್ಷಣೆ – ಜಲ ಸಂಪನ್ಮೂಲಗಳ ರಕ್ಷಣೆ – ಮಾಲಿನ್ಯ ಮತ್ತು ಮರುಬಳಕೆ – ಹವಾಮಾನ ಸ್ಥಿರತೆಗೆ ಕೊಡುಗೆ – ಪರಿಸರ ವ್ಯವಸ್ಥೆಗಳ ನಿರ್ವಹಣೆ. ಎಲ್ಲವೂ ಕೂಡ ಜರೂರಾಗಿ ಆಗಬೇಕು.
ಈ ಜೀವವೈವಿಧ್ಯದ ಇನ್ನೊಂದು ಮುಖವು ಮರುಭೂಮಿಗಳು, ಕಾಡುಗಳು, ಜೌಗು ಪ್ರದೇಶಗಳು, ಪರ್ವತಗಳು, ಸರೋವರಗಳು, ನದಿಗಳು ಮತ್ತು ಕೃಷಿ ಭೂದೃಶ್ಯಗಳಲ್ಲಿ ಕಂಡುಬರುವ ವೈವಿಧ್ಯಮಯ ಪರಿಸರ ವ್ಯವಸ್ಥೆಗಳಲ್ಲಿದೆ. ಪ್ರತಿ ಪರಿಸರ ವ್ಯವಸ್ಥೆಯೊಳಗೆ, ಮಾನವರು ಸೇರಿದಂತೆ ಜೀವಂತ ಜೀವಿಗಳ ಸಮುದಾಯವು ಸಹಬಾಳ್ವೆ ನಡೆಸುತ್ತದೆ, ಪರಸ್ಪರ ಮತ್ತು ಸುತ್ತಮುತ್ತಲಿನ ಗಾಳಿ, ನೀರು ಮತ್ತು ಮಣ್ಣಿನೊಂದಿಗೆ ಸಂವಹನ ನಡೆಸುತ್ತಲೆ ಇರುತ್ತವೆ.ಮುಂದುವರೆದು ಇದರೊಂದಿಗೆ ಜೈವಿಕ ಸಂಪನ್ಮೂಲಗಳಾದ ಆಹಾರ, ಮರದ ಉತ್ಪನ್ನಗಳು, ಅಲಂಕಾರಿಕ ಸಸ್ಯಗಳು, ತಳಿ ದಾಸ್ತಾನುಗಳು, ಜನಸಂಖ್ಯೆಯ ಜಲಾಶಯಗಳು, ಜೀನ್‌ಗಳಲ್ಲಿ ವೈವಿಧ್ಯತೆ, ಜಾತಿಗಳು ಮತ್ತು ಪರಿಸರ ವ್ಯವಸ್ಥೆಗಳು. ಸಂಶೋಧನೆ, ಶಿಕ್ಷಣ, ಮೇಲ್ವಿಚಾರಣೆ, ಮನರಂಜನೆ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಮೌಲ್ಯಗಳಂತಹ ಸಾಮಾಜಿಕ ಪ್ರಯೋಜನಗಳು.
ಇವೆಲ್ಲ ಒಂದು ದಿನಕ್ಕೆ ಮಾತ್ರ ಮೀಸಲಾಗದೆ ವರ್ಷಪೂರ್ತಿ ನಡೆದರೆ ಮಾತ್ರ ನಾವು ಜೈವಿಕ ವೈವಿಧ್ಯತೆಯ ಜೊತೆ ಜೊತೆಯಲಿ ಸಾಗಿ ಅವು ಬದುಕಿ, ನಾವು ಬದುಕುತ್ತೇವೆ. ಈ ಜೈವಿಕ ವೈವಿಧ್ಯತೆಯ ಆಗರಕ್ಕೆ ಪಂಚಭೂತಗಳೇ ಆಧಾರ. ಇದನ್ನು ನಾವು ಎಂದೂ ಮರೆಯಬಾರದು. ಎಲ್ಲವೂ ಸರಿಯಾಗಿ ನಮ್ಮೊಟ್ಟಿಗೆ ಇದ್ದರೆ ಮಾತ್ರ ನಾವು ಉಳಿಯಬಹುದು. ಇಲ್ಲದಿದ್ದರೆ ಈ ಪರಿಸರವೇ ಕೆಡುತ್ತದೆ. ಮಾನವ ಇತ್ತೀಚಿನ ದಿನಗಳಲ್ಲಿ ಈ ಪಂಚಭೂತಗಳನ್ನು ಮಲಿನ ಮಾಡುತ್ತಿದ್ದಾನೆ. ತಾನೊಬ್ಬ ಬದುಕಿದರೆ ಸಾಕು ಎನ್ನುವ ಸ್ವಾರ್ಥ ಮನೋಭಾವ ತುಂಬಿ ತುಳುಕುತ್ತಿದೆ. ಇದರ ಫಲವಾಗಿ ಪ್ರಕೃತಿ ತನ್ನ ಮುನಿಸು ತೋರಿಸುತ್ತಿದೆ. ಯಾರೋ ಮಾಡಿದ ತಪ್ಪಿಗೆ ಬೇರ್ಯಾರೋ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.
ನಾವು ಭೂಮಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಕೃಷಿ ಭೂಮಿ ಈಗ ಕಾಂಕ್ರೀಟ್ ಕಾಡಿಗೆ ವೇದಿಕೆಯಾಗುತ್ತಿದೆ. ಬೆಳೆ ಬೆಳೆಯಬೇಕಾದ ಭೂಮಿಯೆಲ್ಲಾ ಸೈಟುಗಳಾಗಿ ಪರಿವರ್ತನೆಯಾಗುತ್ತಿವೆ. ನಮ್ಮ ಮನೆಯ ಸುತ್ತಮುತ್ತ ಇದ್ದ ಸಂಕುಲ ಕೂಡ ಕಡಿಮೆಯಾಗುತ್ತಿವೆ. ಮಳೆಯ ನೀರು ಭೂಮಿಯಲ್ಲಿ ಇಂಗುತಿಲ್ಲ. ಸರಾಗವಾಗಿ ಸಮುದ್ರದ ಪಾಲಾಗುತ್ತಿದೆ. ಅನೇಕ ಪ್ಲಾಸ್ಟಿಕ್ ಇನ್ನಿತರ ಕೊಳಚೆ ನೀರನ್ನು ಸಮುದ್ರಕ್ಕೆ ವ್ಯರ್ಥವಾಗಿ ಬಿಡುತ್ತಿದ್ದೇವೆ. ಇಲ್ಲಿ ಮಲಿನ ವಿಂಗಡಣೆಯಾಗುತ್ತಿಲ್ಲ.
ನಾವು ಮೊದಲು ನಮ್ಮ ಮನೆಯಿಂದ ನಮ್ಮ ಪರಿಸರದ ಸ್ವಚ್ಛತೆಯ ಬಗ್ಗೆ ಪೀಠಿಕೆಯಾಗಿ ಕ್ರಮ ಕೈಗೊಳ್ಳಲೇಬೇಕಾದ ಅನಿವಾರ್ಯ ಇಂದು ಬಂದಿದೆ. ಈ ಜೈವಿಕ ವೈವಿಧ್ಯತೆಯ ತಾಣದಲ್ಲಿ ನಾವು ನೆಮ್ಮದಿಯಿಂದ ಇರಬೇಕಾದರೆ ನಾವು ಪರಿಸರದೊಂದಿಗೆ ಜೀವಿಗಳೊಂದಿಗೆ ನಡೆಸುತ್ತಿರುವ ದೌರ್ಜನ್ಯವನ್ನು ಕಡಿಮೆ ಮಾಡಬೇಕಾಗಿದೆ. ಜೊತೆಗೆ ನಮ್ಮ ಮುಂದಿನ ಜನಾಂಗದ ಸಂಪರ್ಕ ಸೇತುವಾದ ಯುವ ಜನತೆಗೆ ಈ ರೀತಿಯ ಎಲ್ಲಾ ಸಮಸ್ಯೆಗಳನ್ನು ತಿಳಿಸಬೇಕಾಗಿದೆ. ಕೇವಲ ತಿಳಿಸಿದರೆ ಅಷ್ಟೇ ಸಾಲದು ಅವರು ಕಾರ್ಯನ್ಮುಖವಾಗಲು ನೆರವಾಗಬೇಕು. ಹೆಚ್ಚೆಚ್ಚು ಗಿಡಗಳನ್ನು ನೆಡಬೇಕು. ನಮ್ಮ ಸುತ್ತಮುತ್ತ ಇರುವ ಕೆರೆ, ಕಟ್ಟೆಗಳಲ್ಲಿ ನೀರು ಸದಾ ಇರುವಂತೆ ನೋಡಿಕೊಳ್ಳಬೇಕು ಆಗ ಮಾತ್ರ ಅಲ್ಲಿ ಒಂದೊಂದು ವಿಶಿಷ್ಟ ರೀತಿಯ ಜೀವಸಂಕುಲಗಳು ಉಳಿಯುತ್ತವೆ. ನಮ್ಮ ಸುತ್ತಮುತ್ತ ಹರಿಯುವ ನದಿಗಳಿಗೆ ಮಲಿನ ನೀರು ಬಿಡದಂತೆ ನೋಡಿಕೊಳ್ಳಬೇಕು. ನೀರನ್ನು ಮಿತವ್ಯಯವಾಗಿ ಬಳಸಬೇಕು. ವಿಜ್ಞಾನಿಗಳೊಂದಿಗೆ ನಮ್ಮ ಸುತ್ತಮುತ್ತ ನಡೆಯುವ ವಾತಾವರಣದ ಮಲಿನತೆಯ ಬಗ್ಗೆ, ಅದರ ಉಳಿವಿಗಾಗಿ ಚರ್ಚೆ ಮಾಡಬೇಕು.ಈ ನಮ್ಮ ಪರಿಸರ ಇಂದು ಪ್ರಸ್ತುತವಾಗಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಕೂಡ ಎಲ್ಲರಲ್ಲೂ ಜಾಗೃತಿ ಮೂಡಿಸಿ, ಸಮಸ್ಯೆಗೆ ಪರಿಹಾರ ಸಿಗುವಂತೆ ನೋಡಿಕೊಳ್ಳಬೇಕು.
ಹೀಗೆ ಈ ಒಂದು ಜೈವಿಕ ವೈವಿಧ್ಯತೆಯ ಬಗ್ಗೆ ಬರೆಯುತ್ತ ಹೋದರೆ ಪದಗಳು ಸಾಲದು. ಅಂತಿಮವಾಗಿ ಒಂದು ಮಾತು……. ಈ ಜೈವಿಕ ವೈವಿಧ್ಯತೆ ಮನುಷ್ಯನ ಉಳಿವಿಗೂ ಕೂಡ ಭದ್ರಬುನಾದಿಯಾಗಿದೆ. ಅವೆಲ್ಲ ಇದ್ದರೆ ನಾವು. ಬನ್ನಿ ಇವತ್ತಿನಿಂದಾದರೂ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು ಪ್ರೀತಿಸೋಣ. ಅದು ನೀಡುವ ಸೊಗಸನ್ನು ಅನುಭವಿಸೋಣ.
ಎಲ್ಲರಿಗೂ “ಜೈವಿಕ ವೈವಿಧ್ಯತೆಯ ಅಂತರಾಷ್ಟ್ರೀಯ ದಿನದ” ಹಾರ್ದಿಕ ಶುಭಾಶಯಗಳು.
-ಕಾಳಿಹುಂಡಿ ಶಿವಕುಮಾರ್, ಮೈಸೂರು.
ಸಾಂದರ್ಬಿಕ..ಲೇಖನ ಚೆನ್ನಾಗಿ ದೆ ಸಾರ್
ಸಾಕಷ್ಟು ಮಾಹಿತಿಗಳನ್ನೊಳಗೊಂಡ ಲೇಖನ.
ಪ್ರಪಂಚದ ಜೀವ ವೈವಿಧ್ಯಗಳನ್ನು ರಕ್ಷಿಸಿ ಉಳಿಸುವ ಕಾಳಜಿ ತುಂಬಿದ ಸಾಂದರ್ಭಿಕ ಲೇಖನ ಸತ್ವಪೂರ್ಣವಾಗಿದೆ.
ಪರಿಸರ ಕಾಳಜಿಯುಳ್ಳ ಲೇಖನ ಸೊಗಸಾಗಿದೆ, ಮಾನವ ಸದಾ ಜಾಗೃತಿಯಿಂದ ಪರಿಸರ ಪಾಠ ಕಲಿಯುತ, ನಲಿಯುತಾ ಹಾಗೂ ಬೆಳೆಯುತ ಇದ್ದು, ನಮ್ಮ ಮುಂದಿನ ಪೀಳಿಗೆಗೆ ಮಾದರಿಯಾಗಿರುವಂತೆ ಜೀವನ ಶೈಲಿ ರೂಢಿಸಿಕೊಂಡು ಬದುಕಿನ ಸಂತಸ ಅನುಭವಿಸಬೇಕು.