ನಕ್ಕ ನಗುವೊಳು
ನಕ್ಕ ನಗುವೊಳು
ಬಿಂಬ ಸಂಬಂಧ
ಮಾತಿನಷ್ಟೇ ಆಪ್ತ
ನಗುವ ಅನುಬಂಧ
ಸಣ್ಣ ಪರಿಚಯ
ಮುಗ್ಧ ಹೃದಯಕ್ಕೆ
ಪಾತ್ರ ಪರಿಭಾಷೆ
ಮನದ ಮೌನಕ್ಕೆ
ಉಳಿವ ಸ್ವಾನುಭವ
ಪ್ರಖರ ಬೆಳಕು
ನಗುವ ಅಲೆಗಳ
ಕುಣಿತ ಚುರುಕು
ನೋವಿಗೂ ಸಾಂತ್ವಾನ
ನಲಿವಿಗೆ ಆಹ್ವಾನ
ಬದುಕು ನೂತನ
ಭವದ ಬಾಳು ಚಿಂತನ
ಗೆಲುವ ಮುನ್ನುಡಿ
ಒಲವ ಕನ್ನಡಿ
ಚೆಲುವು ಗೆದ್ದ ಅಡಿ
ಹೃದಯ ಭಾವದ ಗುಡಿ
-ನಾಗರಾಜ ಬಿ.ನಾಯ್ಕ. ಕುಮಟಾ
ಸರಳ ಸುಂದರ ಕವನ…ಸಾರ್ ಚೆನ್ನಾಗಿದೆ..
ಧನ್ಯವಾದಗಳು ತಮ್ಮ ಓದಿಗೆ
ಚೆನ್ನಾಗಿದೆ ಕವನ
ಧನ್ಯವಾದಗಳು…….
ಆಪ್ತತೆ ಜರಿಯಾಗಿ ಹರಿದ ಪರಿ ಹೃದಯಕ್ಕಾಗಿ.
ರಾಮಮೂರ್ತಿ ನಾಯಕ
ಧನ್ಯವಾದಗಳು ತಮ್ಮ ಆಪ್ತತೆಗೆ
ನಕ್ಕ ನಗುವೊಳು ಮನಸ್ಸು ಅರಳುವುದು.. ನಗು ಮನವ ಬೆಸೆಯುವುದು ಎಷ್ಟೇ ನೋವಿದ್ದರೂ ನಗು ಎಲ್ಲವನ್ನ ಮರೆಸುವುದು. ಎರಡು ಮನಗಳ ಬಂದವನು ಬಿಗಿಯಾಗಿಸುವುದು. ನಗು ಮತ್ತು ಮಾತಿನ ಅಲೆಗಳ ನಡುವೆ ಮೌನವು ಚಂದ. ಮನವ ಬೆಸೆಯುವ.. ನೋವ ಕಳೆಯುವ .. ಗೆಲ್ಲುವ ಭಾವವ ಮೂಡಿಸುವ ನಗು… ನಕ್ಕು ಹಗುರಾದರೇನೆ ಚೆಂದ. ಮುತ್ತುಗಳ ಪೋಣಿಸಿ ಹಣೆದಂತ ಮುತ್ತಿನ ಹಾರದಂತಿದೆ ಈ ಸುಂದರ ಕವಿತೆ.. ಮನದ ತುಂಬ ನಗುವ ಅಲೆಯ ಮೂಡಿಸಿದೆ
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಚೆಂದದ ಅವಲೋಕನದ ಸಾಲುಗಳಿಗೆ. ಕವಿತೆ ಹೃದಯದ ಭಾವ. ಭಾವದ ಪ್ರಸ್ತಾವನೆ ನಮ್ಮ ನಗು,ಮಾತು, ಕತೆ ಎಲ್ಲವೂ. ಇವು ಜೊತೆಗೆ ಇದ್ದಷ್ಟು ದಿನ ಹಗುರ. ನಿಮ್ಮ ಆಪ್ತ ಯೋಚನೆಗೆ ತುಂಬಾ ಧನ್ಯವಾದಗಳು……..
ಚೆನ್ನಾಗಿದೆ.
ಧನ್ಯವಾದಗಳು ತಮ್ಮ ಓದಿಗೆ
ಗೆಲುವ ಮುನ್ನುಡಿ, ಒಲವ ಕನ್ನಡಿ, ಹೃದಯ ಭಾವದ ಗುಡಿ, ಎಂತಹ ಒಳ್ಳೆಯ ಪರಿಕಲಪನೆ. ಚಂದದ ಸಾಲುಗಳ ಸುದಂದರ ಕವಿತೆ. ಅಭಿನಂದನೆಗಳು.
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ
ಸೊಗಸಾದ ಭಾವಪೂರ್ಣ ಕವನ
ಧನ್ಯವಾದಗಳು ತಮ್ಮ ಓದಿಗೆ
ಚಂದವಾಧ ಕವನ
ಧನ್ಯವಾದಗಳು ತಮ್ಮ ಓದಿಗೆ ಹಾಗೂ ಪ್ರತಿಕ್ರಿಯೆಗೆ