ವಿಳಾಸ
ಗೆಳೆಯಾ !
ನಿನ್ನ ವಿಳಾಸಕ್ಕಾಗಿ
ಗುಡಿಗೋಪುರಗಳೇ ಅಲ್ಲ
ಬೆಟ್ಟಗಳು ಕಣಿವೆಗಳನ್ನು
ಹುಡುಕುವ ಕೆಲಸವಿಲ್ಲ
ಒಬ್ಬಂಟಿಯಾಗಿರುವಾಗ
ನಿನ್ನ ಆತ್ಮವನ್ನು ಪ್ರಶ್ನಿಸು
ನಿನ್ನ ಮೊಮ್ಮಗಳ ತುಟಿಗಳಮೇಲಿನ
ನಿರ್ಮಲವಾದ ಮುಗುಳ್ನಗೆಯನ್ನು ಕೇಳು
ನಿನ್ನ ಮನೆಯ ಮುಂದಿರುವ
ಆರೋಗ್ಯ ಧಾಮ
ಆ ಬೇವಿನ ಮರವನ್ನು ವಿಚಾರಿಸು
ಸವಿಯೂಟದ ನಂತರ
ಕಸದ ಬುಟ್ಟಿಗೆ ಎಸೆದಿದ್ದ
ಊಟದ ಎಲೆಯಲ್ಲಿರುವ ಅನ್ನದ ಕಣವನ್ನು ಕೇಳು
ಶರೀರದಿಂದ ಜಾರಿ ಬೀಳುವ
ಶ್ರಮಾಮೃತ ಹನಿಗಳನ್ನು ಕೇಳು
ಎಲ್ಲಿಯೂ ಸಾಧ್ಯವಾಗದಿದ್ದರೆ
ನಿನ್ನ ಕಾಲು ಕೆಳಗಿನ
ಹಿಡಿ ಮಣ್ಣನ್ನು ಕೇಳು !
ತೆಲುಗು ಮೂಲ: ಈತಕೋಟ ಸುಬ್ಬಾರಾವು
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಚಂದದ ಕವನ ..ಸಾರ್ ಸರಳವಾಗಿದ್ದು ಅರ್ಥಪೂರ್ಣ ವಾಗಿದೆ..ಸಾರ್.
ಧನ್ಯವಾದಗಳು ಮೇಡಮ್
Congratulations sir
Thanks sir
ಚೆನ್ನಾಗಿದೆ ಕವನ
ಸುಂದರವಾದ ಕವನ
ವಂದನೆಗಳು
ಅರ್ಥಗರ್ಭಿತ ಸುಂದರ ಅನುವಾದಿತ ಕವನ.
ಅರ್ಥಗರ್ಭಿತ ಕವನದ ಸುಂದರ ಅನುವಾದ
ಬಹಳ ಚೆಂದಾದ ಪದ್ಯ!