ಅನೇಕ ಹಕ್ಕಿಗಳು ಕೆಲವು ಪಂಜರಗಳು
ರಾಜಾ ಬದಲಾದ
ಹಕ್ಕಿಗೆ ಸಿಕ್ಕಿತು ಚಿನ್ನದ ಪಂಜರದ ಭಾಗ್ಯ
ಹಿಡಿಅಷ್ಟು ಕೂಡ ಇಲ್ಲದ ಹಕ್ಕಿಯ ಹೃದಯ
ಹೆಮ್ಮೆಯಿಂದ ತುಂಬಿ ತುಳುಕಿತು
ಕೊಳೆತ ಹಸಿಯ ಪೇರಲದ ಬದಲು
ದಿನವೂ ಒಳ್ಳೆಯ ಹಣ್ಣು ಸಿಗುತ್ತಿತ್ತು.
ಪುಟ್ಟ ಹಕ್ಕಿಯ ಹೊಟ್ಟೆಯಲ್ಲಿ ನೆಮ್ಮದಿಯಿತ್ತು.
ಎಲ್ಲೋ ಸೂರುಗೇ ನೇತಾಡುತ್ತಿರುವ ಹಕ್ಕಿ
ರೇಖಾಚಿತ್ರದ ರೂಪದಲ್ಲಿ ಅತಿಥಿಗಳಿಗೆ
ಸಂತೋಷವನ್ನು ಹಂಚಿತು
ದೊರೆಯ ಪಕ್ಷಿಪ್ರೀತಿಯನ್ನು
ಹಲವು ರೀತಿಯಲ್ಲಿ ಹೊಗಳಲಾಯಿತು
ಕಬ್ಬಿಣ ಅಥವಾ ಚಿನ್ನ ಏನಾದರೂ ಪಂಜರ ಪಂಜರವೇ
ಎಂದು ಅರಿವಾದಾಗ ಅದರ ಜೀವನ ಕೊನೆಗೆ ತಲುಪಿತು
ಹಕ್ಕಿಯ ಹೆಣಗಾಟ, ರಾಜನಿಗೆ ಏಕೋ ಅಹಂಕಾರಕ್ಕೆ ಧಕ್ಕೆಯಾಯಿತು
ಮುದಿಯಾದ ಹಕ್ಕಿಯನ್ನು ಕ್ರೂರವಾಗಿ ಹೊರಗೆ ಬಿಟ್ಟ ರಾಜ
ರೆಕ್ಕೆಗಳಿದ್ದರೂ, ಹಾರಲು ತಿಳಿಯದ ಆ ಹಕ್ಕಿ
ಚಿನ್ನದ ಪಂಜರವನ್ನು ಹೊಗಳಲು ಹೊರಟಿತು
ಹಕ್ಕಿಯ ಭಾಷೆ ತಿಳಿಯದವರ
ಸವಿಯೂಟದಲ್ಲಿ ಅದು ನಿಧನಹೊಂದಿತು
ಆದರೆ ಹಕ್ಕಿಯ ಭಾಷೆ ಬಲ್ಲವರು ಅದರ ಅಮರತ್ವದ ಬಗ್ಗೆ
ವಿಶಿಷ್ಟ ಹಾಡುಗಳನ್ನು ಹಾಡಿ, ಅದನ್ನು ರಾಜನಿಗೆ ಅರ್ಪಿಸಿ
ಚಿನ್ನದ ಪಂಜರದ ಸುತ್ತಲೂ ಆಶಾದಾಯಕವಾಗಿ
ಪಲ್ಟಿ ಹೊಡೆಯಲು ಶುರು ಮಾಡಿದರು
ತೆಲುಗು ಮೂಲ: ದೇಶರಾಜು
ಕನ್ನಡ ಅನುವಾದ: ಕೊಡೀಹಳ್ಳಿ ಮುರಳೀಮೋಹನ್
ಕವಿತೆ ತುಂಬಾ ಚೆನ್ನಾಗಿದೆ. ಅವಕಾಶವಾದಿಗಳೇ ತುಂಬಿದ ಈ ಸಮಾಜದಲ್ಲಿ ಹಕ್ಕಿಯಂತಹ ಅಮಾಯಕರು ಬಲಿಯಾಗುತ್ತಲೇ ಇರುತ್ತಾರೆ .ಒಳ್ಳೆಯ ಸಂದೇಶದ ಈ ಕವಿತೆ ಅದ್ಭುತವಾಗಿದೆ.
ಕವಿತೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅವಕಾಶವಾದಿಗಳೇ ತುಂಬಿದ ಈ ಸಮಾಜದಲ್ಲಿ ಹಕ್ಕಿಯಂತಹ ಅಮಾಯಕರು ಬಲಿಯಾಗುತ್ತಲೇ ಇರುತ್ತಾರೆ. ಒಳ್ಳೆಯ ಸಂದೇಶದ ಈ ಕವಿತೆ ಅದ್ಭುತವಾಗಿದೆ.
ಧನ್ಯವಾದಗಳು
Tnq
Welcoome
ಅರ್ಥಪೂರ್ಣ ವಾದ ಕವಿತೆ…ಒಳ್ಳೆಯ ಸಂದೇಶವನ್ನು ಸಾರಿದೆ…ಧನ್ಯವಾದಗಳು ಸಾರ್
ಧನ್ಯವಾದಗಳು
ಚೆನ್ನಾಗಿದೆ
ಧನ್ಯವಾದಗಳು
ಉತ್ತಮ ಸಂದೇಶ ಹೊತ್ತ ಅನುವಾದಿತ ಕವಿತೆ ಬಹಳ ಚೆನ್ನಾಗಿದೆ.
ಧನ್ಯವಾದಗಳು
ಧನ್ಯವಾದಗಳು
ಬಂಗಾರದದ್ದಾರೂ ಪಂಜರ, ಪಂಜರವೇ ಎಂಬ ಮಾರ್ಮಿಕ ಸತ್ಯವನ್ನು ಅಭಿವ್ಯಕ್ತಿಸುವ ಸುಂದರ ಕವನ. ಅಭಿನಂದನೆಗಳು.