ನಿನ್ನದಾವ ನಗು…?
ಅರಿಯದೇ ಮೂಡಿದ್ದು
ಮುಗ್ಧ ನಗು
ಚಲಿಸದ ಭಾವಕ್ಕೆ
ಸ್ನಿಗ್ಧ ನಗು
ಬೇಡವಾಗಿದ್ದಾಗ ಬರುವುದು
ಕಳ್ಳ ನಗು
ಎಡವಿಬಿದ್ದಾಗ ಕೇಳುವುದು
ಕೆರಳಿಸೋ ನಗು
ಹಸಿವು ಇಂಗಿದ ಬಳಿಕ
ತೃಪ್ತಿಯ ನಗು
ಹೃದಯಕ್ಕೆ ನಾಟುವುದು
ಮುಗುಳು ನಗು
ಕುತಂತ್ರಕ್ಕೆ ಕೈಜೋಡಿಸುವುದು
ಕೆಣಕಿನ ನಗು
ತಪ್ಪುಮಾಡಿದಾಗ ನಟಿಸುವುದು
ಅರಿವಿಲ್ಲದ ನಗು
ಗೆಲುವು ಮೂಡಿದಾಗ
ಜಯದ ನಗು
ದೇವರು ಕೊಟ್ಟ ವರ
ಪ್ರಕೃತಿ ನಗು
ಒಪ್ಪಿಗೆಯ ಸಹಿಗೆ
ಸಮ್ಮತಿ ನಗು
ಸೋತಾಗ ಬರುವುದು
ಗಹಗಹಿಸುವ
ವ್ಯಂಗ್ಯದ ಪ್ರತೀಕ
ಕುಹಕ ನಗು
ಆನಂದ ಬಾಷ್ಪಕ್ಕೆ ಸುರಿದದು
ಹೃದಯದ ನಗು
ಬೇಡವಾದುದನ್ನು ಸ್ವೀಕರಿಸುವಾಗ
ಸಂಕೋಚದ ನಗು
ಪ್ರೀತಿಯ ಮೊದಲ ಮೆಟ್ಟಿಲು
ನಾಚಿಕೆ ನಗು
ಪ್ರಣಯದ ಭಾವ
ರಸಿಕ ನಗು
ಆಶ್ಚರ್ಯಕ್ಕೆ ಕಂಡದ್ದು
ಹೂನಗು
ನಾನೇ ಎನ್ನುವ ಅಹಂಕಾರಕ್ಕೆ
ಅಟ್ಟಹಾಸ ನಗು
ಅಗಲಿಕೆಯ ನೋವಿಗೆ
ವಿರಹದ ನಗು
ಎಲ್ಲ ಭಾವಗಳನ್ನೂ ಮೀರಿದ್ದು
ಕಣ್ಣಂಚಿನ ನಗು.
-ಸಿ ಎನ್ ಭಾಗ್ಯಲಕ್ಷ್ಮಿ ನಾರಾಯಣ
ಸರಳ ಸುಂದರ ಕವನ ಚೆನ್ನಾಗಿದೆ ಸೋದರಿ
Wow it’s so nice
Beautiful
ವಾಹ್…ನಗುವೊಂದರಲ್ಲೇ ಎಷ್ಟೊಂದು ಬಗೆ! ಸರಳ ಸುಂದರ ಕವನ ಚೆನ್ನಾಗಿದೆ…ಮನದಲ್ಲೇ ಮೆಚ್ಚುಗೆಯ ನಗುವೊಂದು ಮೂಡಿತು…
ನಗೆಬಗೆಯ ಕವನ ಸುಹಾಸವಾಗಿದೆ
ಬಗೆಬಗೆಯ ನಗುವನ್ನು ಕವನವನ್ನಾಗಿಸಿ ನಗೆ ಮೂಡಿಸಿದ ನಿಮಗೆ ಅಭಿನಂದನೆಗಳು. ಎಷ್ಟೊಂದು ನಗೆಯ ಪರಿಚಯ ಮಾಡಿಕೊಟ್ಟಿದ್ದೀರಿ!
ಎಷ್ಟೊಂದು ಬಗೆಯ ನಗುವಿನ ಚಿತ್ರ!
ಕೊನೆಯದು ಕಣ್ಣಂಚಿನ ನಗು – ಇದೇ ಕವಿತೆಯ ಸೃಷ್ಟಿ ಮತ್ತು ದೃಷ್ಟಿ
ಅರ್ಥವು ಪೂರಣವಾಗಿದೆ; ನಗುವೇ ಹೂರಣವಾಗಿದೆ.
ಅಭಿನಂದನೆ ನಿಮಗೆ