ಕುಹೂ ಕುಹೂ – ಉಹೂ ಉಹೂ
ಆ ಹಕ್ಕಿ ಉಲಿಯೂ
ಕುಹೂ ಕುಹೂ ಕುಹೂ
ಈ ಹಕ್ಕಿಯದದೇ
ಕುಹೂ ಕುಹೂ ಕುಹೂ
ನನ್ನ ನಿನ್ನ ನಡುವೆ
ಏಕೆ ಉಹೂ ಉಹೂ
ಮೋಡ ಹನಿಯ ಒಡೆಯು
ವಲ್ಲಿ ಕುಹೂ ಕುಹೂ
ಗಾಳಿ ತಂಪು ತೀಡು
ವಲ್ಲಿ ಕುಹೂ ಕುಹೂ
ನನ್ನ ನಿನ್ನ ನಡುವೆ
ಏಕೆ ಉಹೂ ಉಹೂ
ಮೊಗ್ಗು ಬಿರಿದ ಹೊನ್ನೆ
ಯರಳು ಕುಹೂ ಕುಹೂ
ರಂಗಿನೊಡಲ ಬಾನ
ಬಿಲ್ಲು ಕುಹೂ ಕುಹೂ
ನನ್ನ ನಿನ್ನ ನಡುವೆ
ಏಕೆ ಉಹೂ ಉಹೂ
ಮಣ್ಣಿನೊಳಗೆ ಮೊಳೆವ
ಬೀಜ ಕುಹೂ ಕುಹೂ
ಕತ್ತಲೊಡನೆ ಬೆಳಕ
ಸೆಳಕು ಕುಹೂ ಕುಹೂ
ನನ್ನ ನಿನ್ನ ನಡುವೆ
ಏಕೆ ಉಹೂ ಉಹೂ
ಆ ಹಕ್ಕಿ ಉಲಿಯೂ
ಕುಹೂ ಕುಹೂ ಕುಹೂ
ಈ ಹಕ್ಕಿಯದದೇ
ಕುಹೂ ಕುಹೂ ಕುಹೂ
ನನ್ನ ನಿನ್ನ ನಡುವೆ
ಏಕೆ ಉಹೂ ಉಹೂ
-ಗಜಾನನ ಈಶ್ವರ ಹೆಗಡೆ
ಸೊಗಸಾದ ದಾಂಪತ್ಯ ಗೀತೆ….ಸಾರ್..ನಿಮ್ಮ ಅನ್ಯೊನ್ಯ ದಾಂಪತ್ಯ ಕ್ಕೆ ನನ್ನ ನಮನಗಳು ಸೂಪರ್..
ಚೆನ್ನಾಗಿದೆ
ಪ್ರಕೃತಿಯಲ್ಲಿ ಕಾಣುವ ಸಾಮರಸ್ಯತೆ ಮನುಷ್ಯರ ನಡುವೆ ಏಕೆ ಕಾಣುವುದಿಲ್ಲ ಎನ್ನುವುದನ್ನು ಗಮನಕ್ಕೆ ತರುವ ಕವಿತೆ ಚೆನ್ನಾಗಿದೆ
ಮುನಿದ ಮಡದಿಯ ಮನ ಒಲಿಸಲು ನಡೆಸಿದ ಪ್ರಯತ್ನ ಕವನದಲ್ಲಿ ಪಡಿಮೂಡಿದೆ.