ಆಯ್ಕೆ?

Share Button

 

Choice

ಅಪ್ಪವರ್ಷಕ್ಕೊಮ್ಮೆ

ಜಾತ್ರೆಗೆಂದು ತಂದ ಅಂಗಿ

ಅಮ್ಮನ ಹಳೆಯ

ಪಟ್ಟೆಸೀರೆಯ ಲಂಗ

ಯಾವುದೂ ಸೈಜ಼ಿಗೆ

ಅನುಗುಣವಾಗಿ ಇದ್ದಿದ್ದಿಲ್ಲ

ಅದನ್ನು ತೊಟ್ಟು ನಡೆದ

ಉತ್ಸಾಹದ ಆ ನಡೆ

ಇಂದು ಮಾಲ್ ಗಳಲ್ಲಿ

ತಾಸುಗಟ್ಟಲೇ ಟ್ರಯಲ್ ಮಾಡಿ

ತಂದ ನಮ್ಮ ಆಯ್ಕೆಯಲಿ ಯಾಕಿಲ್ಲ

ಆಯ್ಕೆಗಳು ಹೆಚ್ಚಾದ ಹಾಗೆ

ಬದುಕು ಉಮೇದು ಕಳಕೊಳ್ಳುತ್ತಿದೆಯೇ?

 

;

– ಅಂಬಿಕಾ ಹೆಗಡೆ

8 Responses

  1. Shruthi says:

    ನಿಜ! 🙂

  2. Hema says:

    ಸೊಗಸಾದ ಕವನ. ನನಗೂ ಹಲವು ಬಾರಿ ಹೀಗೆ ಅನಿಸಿದೆ!

  3. Mamatha Keelar says:

    satyada maatu..ayke jasti aadastu santhosha kadime….hosakuli jatre maja igina maal galalli ille..:)

  4. Gurunath boragi says:

    ನಿರೂಪಣೆ ಸರಳ ಎನಿಸಿದರೂ … ವಿಭಿನ್ನ ದೃಷ್ಟಿಕೋನ ಮತ್ತು ವಸ್ತು ವಿಶೇಷದಿಂದಾಗಿ ಕವಿತೆ ಇಷ್ಟವಾಗುತ್ತದೆ

  5. ku.sa.madhusudan says:

    ನಿಜಕ್ಕೂ ಸರಳವಾದ ಸುಂದರ ಕವಿತೆ. ಕಡಿಮೆ ಶಬ್ದಗಳಲ್ಲಿ ಬಹಳಷ್ಟು ಅರ್ಥ ನೀಡುವ ಪದ್ಯ.

  6. Prakash Hegde says:

    ಜೀವನ ಮೌಲ್ಯದ ಸರಳ ನಿರೂಪಣೆ …

  7. Kashyap says:

    ಬೇಸಗೆಯ ರಜೆಯಲ್ಲಿ
    ಹುಳು ಹಿಡಿದ ಗರ್ಜ್ಳಕಾಯಿ,
    ಉಪ್ಪಿನಕಾಯಿ-ಹಪ್ಪಳದಿಟ್ಟು
    ಕೋಡನ ಓಡಿಸಿ ಪಡೆದ ಹಲಸಿನ-ಸೊಳೆ
    ಹಿಡಿ ನೀರಿದ್ದ ಹೊಳೆ-ಗುಂಡಿ ..

    ಅಲ್ಲಿಂದ ಸಿಲಿಕನ್ ಸಿಟಿ
    ಕುಪ್ಪಿನಲಿ ಸವಿದದ್ದು ಪ್ಯಾರಫೈಟ್,
    ಕೈಯಲ್ಲಿ ಲ್ಯಾಪ್ಟಾಪ್, ಹಿ-ಟೆಕ್
    ಮೊಬೈಲ್, ಓಡಾಡಲು ಕಾರು
    ಬಣ್ಣ ಬಣ್ಣದ ಬದುಕು
    ಸುತ್ತಿದರೂ
    ಜಗವೆಲ್ಲ ..

    ಅದೇ ಹಳೆ ನೆನಪು
    ಮರಳಿ .. ಹಪ್ಪಳದಿಟ್ಟು , ಹೊಳೆಗುಂಡಿ
    ಕನಸು !!

    ನಿನ್ನ ಕವಿತೆಯ ಓದಿ ….
    – ಕಶ್ಯಪ

    Thanks for the wonderful writing , ಅಂಬಿಕ.

  8. sangeetha raviraj says:

    ಕವಿತೆ ಬಲು ಇಷ್ಟವಾಯ್ತು nanage

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: