ಮುದ್ದು ಕಂದ
ಬೆಣ್ಣೆ ಮುದ್ದೆಯಂತಹ ದೇಹ
ಗಾಜಿನಂತಹ ಕಣ್ಣುಗಳು
ಗುಲಾಬಿ ದಳಗಳಂತಹ ಕೆನ್ನೆಗಳು
ಹೊರಟು ನಿಂತ ಅಪ್ಪನ ತಡೆದು ನಿಲ್ಲಿಸುವ ನೋಟಗಳು
ಕಾಲವೇ ನೀ ಮೆಲ್ಲಗೆ ಹರಿಯುತ್ತಿರು
ಸರಿದು ಹೋಗದಿರಲಿ ಈ ಕ್ಷಣಗಳು
ಜಾರಿ ಸಾಗದಿರಲಿ ಈ ದೃಶ್ಯಗಳು
ಕುಲಾವಿ ಕಟ್ಟಿದ ಸುಂದರ ಕುಸುಮವಿಂದು ತಲೆ ಎತ್ತಿ ನಿಂತಿದೆ
ಹಣೆಯ ಮಧ್ಯೆ ಹೊರಬಂದ ಕೂದಲಿನ ಹೊದಿಕೆ ಕಳೆಗಟ್ಟಿದೆ
ಕಣ್ಣಕನ್ನಡಿಯಲಿ ಜಗತ್ತನ್ನೇ ಮರೆಸುವ ಮೋಹಕತೆ ತುಂಬಿದೆ
ನಿದ್ರೆಯಿಲ್ಲದಿದ್ದರೂ ಊಟ ತಿಂಡಿ ಸೇರದಿದ್ದರೂ
ನಿನ್ನ ಕಂಡ ಮನವು ಕುಣಿದು ಕುಪ್ಪಳಿಸುವಂತಿದೆ
ಎನ್ನ ಮಡಿಲಲಿ ಕಾಲೊಡಿಯುತಾ ಆಡುವ ನಿನ್ನ ಕಂಡು ದಣಿವು ಮಾಯವಾಗಿದೆ
ದೈವವೇ ಮಗುವಿನ ರೂಪ ತಾಳಿ ಬಂದು ಮುದವ ನೀಡುತಿದೆ
ಹೆತ್ತೊಡಲು ತಾಯ್ತನದ ಖುಷಿಯಿಂದ ತುಂಬಿದೆ
ನವಮಾಸದ ತಪಸ್ಸಿಗೆ ಅಮೂಲ್ಯ ವರವಿಂದು ದೊರೆತಿದೆ
– ಕೆ.ಎಂ ಶರಣಬಸವೇಶ
ಸರಳ ಸುಂದರ ಕವನ ಮನಕ್ಕೆ, ಮುದ ತಂದಿತು ಸಾರ್
ಮನಕ್ಕೆ ಮುದ ನೀಡುವ ಕವನ. ಸುಂದರವಾಗಿ ಮೂಡಿಬಂದಿದೆ
ಮುದ್ದು ಕಂದನ ಆಗಮನವು ಮನವನ್ನು ಉಲ್ಲಸಿತಗೊಳಿಸಿದ ಪರಿ, ಕವನದಲ್ಲಿ ಸೊಗಸಾಗಿ ಮೂಡಿಬಂದಿದೆ.
ಚಂದದ ಕವನ