ಬೆಳಕು-ಬಳ್ಳಿ

ಕನ್ನಡ ಪದಗಳು

Share Button

ಮನದಲ್ಲಿ ಮೂಡಿ ಬಂದ ಚಿಂತನೆ
ಕರಗಿ ಹೋಗದಿರಲಿ

ಹೇಳುವ ದಾರಿಗಾಣದೆ
ಕೊರಗಿ ಸಾಯದಿರಲಿ

ಕನ್ನಡವೊಂದು ಅದ್ಭುತ ಆಟವು
ಆಡುವ ಛಲವಿರಬೇಕು
ಕಟ್ಟುವ ಲಯವಿರಬೇಕು

ಪಳ್ಳನೆ ಮಿಂಚಿನಂತೆ
ಕಂಡು ಬಂದ ಭಾವನೆಗೆ
ಪದಗಳ ಹೊಸೆಯಬೇಕು
ಸಂಬಂಧ ಬೆಸೆಯಬೇಕು

ಬಳಸಿದ ನುಡಿಗಳಲ್ಲಿ ಸ್ಪಷ್ಟತೆ ತರಬೇಕು
ಗಳಿಸಿದ ಆಲೋಚನೆಗಳಲ್ಲಿ ನೈಜತೆ ಕಾಣಬೇಕು

ಶಿಲ್ಪಿಯ ಕುಸುರಿ ಕೆತ್ತನೆಯಂತೆ
ಜೀವಕಳೆ ತುಂಬಿದ ಮೂರ್ತಿಯಂತೆ

ಎಂದೂ ಕೇಳದ ಭೃಂಗದ ಸಂಗೀತದಂತೆ
ಮತ್ತೆಂದೂ ಮರೆಯದ ಪಿಸುಗುಟ್ಟುವ ಮಾತಿನಂತೆ

ಶಬ್ದಗಳೋ ಭಾವನೆಗಳ ಅಸನ ವಸನಗಳು
ಎದೆಯ ತೋಟದಲ್ಲಿ ಬಿರಿದ ಸುಂದರ ‌ಕುಸುಮಗಳು

ಕೌತುಕದ ಕಣ್ಣುಗಳ ಹಿಂದೆ ಬಂಧಿಯಾಗಿದೆ ವಿಷಯ ಮಂದೆ
ಮುಕ್ತಗೊಳಿಸ ಬಂದರು ನೋಡಿ
ಪದಗಳೆಂಬ ವೀರ ಯೋಧರು

ಅನುಭವದ ಮೂರ್ತರೂಪ ‌ನುಡಿಗಳಾಗಿ ಮೈದಳೆದಿದೆ
ಕೈಗೆಟುಕದ ಹೊಸ ಭಾವ ಪದ್ಯವಾಗಿ ಹೊರ ಹೊಮ್ಮಿದೆ

-ಕೆ.ಎಂ ಶರಣಬಸವೇಶ.

7 Comments on “ಕನ್ನಡ ಪದಗಳು

  1. Nice Sharani ,as usual excellent composition and comprising words/sentences in a such blending form will definitely leads to a form excellent architecture of poetry.Always God blessed my friend.sharani.

  2. ಹೃದಯದಲ್ಲಿ ಬಂದಿಯಾದ ಭಾವನೆಗಳಿಗೆ ರೂಪ ಕೊಡುವ ಕನ್ನಡ ಪದಗಳ ಮೋಡಿ ನೋಡಿ ಮೂಕಳಾದೆ

Leave a Reply to PRAKASH K N Cancel reply

 Click this button or press Ctrl+G to toggle between Kannada and English

Your email address will not be published. Required fields are marked *