ನನ್ನ ಕನಸಿನ ಭಾರತ ಹೀಗಿರಬೇಕು…

Share Button

ಹೆತ್ತ ಮಾತೆಗೆ ಸಮಾನಳಾದ ಓ ನನ್ನ ತಾಯಿ ಭಾರತೀ-ತಾಯಿ ಒಡಲಿನಿಂದ ಭೂಮಿಗೆ ಬಿದ್ದ ಕ್ಷಣದಿಂದ ಸಲಹುವ ತಾಯೇ ನಾನು ನಿನ್ನ ಕುವರಿ. ನಿನ್ನಲ್ಲಿ ಬೇಡಿಕೊಳ್ಳುವ ಅನಂತ ಆಶೀರ್ವಾದಗಳು.

ಭಾರತಮಾತೆಯ ಮಕ್ಕಳಾದ ನಾವು ನೂರಮೂವತ್ತು ಕೋಟಿಗಿಂತಲೂ ಅಧಿಕ ಜನರ ಮಹಾತಾಯಿ ನೀನು!.ಅಧಮ್ಯ ಚೇತನದ ಧರಣಿ!!.ಹುಲುಮಾನವರಲ್ಲಿ ಒಬ್ಬಳಾದ ನಾನು ನಿನ್ನ ನೂರಮೂವತ್ತು ಕೋಟಿ ರೋಮಗಳಲ್ಲಿ ಒಂದು ನಾನು, ಎಂದು ಭಾವಿಸುತ್ತೇನೆ. ಅದಕ್ಕಾಗಿ ಸಂತಸವಿದೆ.

ಲೋಕದ ಜನರಿಗೆ ಪ್ರಪಂಚವು ಮನೆಯಾದರೆ; ಭಾರತವು ದೇವರಕೋಣೆಯಾಗಬೇಕು ಎಂಬುದು ನನ್ನ ನಿಲುವು.
ಓ ತಾಯೀ ರಾಮನನ್ನು ಹೆತ್ತ ಕೌಸಲ್ಯೆ ನೀನು!. ಕೃಷ್ಣನನ್ನು ಹೊತ್ತು ಸಲಹಿದ ಯಶೋದೆ ನೀನು!. ಇಳೆಯೊಳಿತಿಗಾಗಿ ಬುದ್ಧ, ಶಂಕರಾಚಾರ್ಯರನ್ನು ನೀಡಿದ್ದಿ. ಬಸವೇಶ್ವರ , ಶ್ರೀರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ರವೀಂದ್ರನಾಥ ಟಾಕೂರ್, ಮಹಾಯೋಗಿ ಅರವಿಂದ ಮೊದಲಾದ ಮಹನೀಯರನ್ನ ಸೃಷ್ಟಿ ಸಿದ್ದಿ!. ನಮ್ಮೀ ಭೂಮಿ ಪರಕೀಯರ ದಾಸ್ಯ ಶೃಂಖಲೆಯಿಂದ ತಪ್ಪಿಸುವುದಕ್ಕೆ ಬ್ರಿಟಿಷರ ವಿರುದ್ಧ ಹೋರಾಡಲು ಝಾನ್ಸಿರಾಣಿ ಲಕ್ಷ್ಮೀಬಾಯಿಯಂತಹ ಅದೆಷ್ಟು ವೀರ ರಾಜ-ರಾಣಿಯರನ್ನು ಬೆಳೆಸಿದ್ದಿ. ಭಗತ್ಸಿಂಗರಂತಹ ಅದೆಷ್ಟು ವೀರರನ್ನು ಪಡೆದೆ!. ಸ್ವಾತಂತ್ರ್ಯ ಹೋರಾಟಕ್ಕೆ ಜೊತೆಗೂಡಲು ನೇತಾಜಿ, ಸುಭಾಷ್ಚಂದ್ರಭೋಸ್,ಬಾಲಗಂಗಾಧರತಿಲಕ,ಗೋಪಾಲಕೃಷ್ಣಗೋಖಲೆ ಮೊದಲಾದ ಮೇಧಾವಿಗಳನ್ನು ಹೊತ್ತುಬೆಳೆಸಿದ ನೀನೊಂದು ಸೃಷ್ಟಿ ಲೋಕದ ಆಗರ!.ಎಲ್ಲಾ ಜೀವಲೋಕಕ್ಕೂ ಅಮ್ಮನಾದ ದೊಡ್ಡಮ್ಮ ನೀನು.

ಭಾರತದ ಇತಿಹಾಸವನ್ನು ಅವಲೋಕಿಸಿದಾಗ ಅದರಲ್ಲಿ ಮೂರು ಹಂತಗಳನ್ನು ಕಾಣಬಹುದು. ಪ್ರಾಚೀನಯುಗ,ಮಧ್ಯಯುಗ ಹಾಗೂ ಆಧುನಿಕ ಯುಗ.ಪ್ರಾಚೀನಯುಗದಲ್ಲಿ ನೆಲವು ಪೂರ್ಣ ಹಿಂದೂ ಅರಸರ ಅಧೀನಕ್ಕೆ ಒಳಪಟ್ಟಿದ್ದನ್ನು ಕಂಡರೆ; ಮಧ್ಯಯುಗ, ಆಧುನಿಕ ಯುಗ ಐರೋಪ್ಯರ ಆಗಮನದಿಂದ ಭಾರತ ಮತ್ತೊಂದು ಸಂಕ್ರಮಣ ಕಾಲವನ್ನು ಕಾಣಬೇಕಾಯಿತು.

ಭಾರತದ ಸೊತ್ತನ್ನು ಲೂಟಿಮಾಡಿದವರು ಅದೆಷ್ಟೋ. ಈ‌ ನಿರಂತರ ದಬ್ಬಾಳಿಕೆ ಹಾಗೂ ನಮ್ಮ ಮೌಲ್ಯಗಳು ಸೂರೆ ಹೋಗುವದು ಕಂಡು ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ನಮಗೆ ಸ್ವಾತಂತ್ರ್ಯ ದೊರಕಿತು.

ಸ್ವಾತಂತ್ರ್ಯಾ ನಂತರವೂ ನಿಜವಾದ ಸ್ವಾತಂತ್ರ್ಯ ಇಲ್ಲವೇ ಇಲ್ಲ ಎನ್ನಬಹುದು. ಒಳ್ಳೆಯ ಆಡಳಿತ ಮಾಡುವ ದೇಶೋದ್ಧಾರಕರು ಬಂದರೆ ಅವರನ್ನು ಹಿಮ್ಮೆಟ್ಟಿಸಿ, ದೇಶ ಧೂಳೀಕರಣ ಮಾಡುವ ಮನುಜರೇ‌ ಅಸಂಖ್ಯಾತರು. ಊಟವನ್ನು ನಮ್ಮ ಉಸಿರಿರುವ ತನಕವೂ ಕೊಡುತ್ತಾ ಬರುವ ನಮ್ಮ ಸಿರಿಭೂಮಿ ಭಾರತಮಾತೆ; ನಿನ್ನ ಪಾಲನೆಯಲ್ಲಿ ಸುಖದ ಖನಿಯಿದೆ!.ಜೀವದೊಳಗೆ ‘ಅಮರ’ವನ್ನು ಪ್ರಕಟಪಡಿಸುವ ಶಕ್ತಿ ನಿನ್ನದು. ಆ ಶಕ್ತಿಯನ್ನು ಸ್ವೀಕರಿಸಿ ಕಾರ್ಯರೂಪಕ್ಕೆ ತಂದುಕೊಳ್ಳುವ ಸ್ವಂತಿಕೆ ನನ್ನಲ್ಲಿ ಬೆಳೆಸಮ್ಮ.

ವಿದ್ಯೆ,ಆರೋಗ್ಯ, ಆಹಾರ ಇವು ಮೂರು ಅಪೇಕ್ಷಿತರಿಗೆ ನ್ಯಾಯವಾಗಿ ಸಿಗದೆ ವ್ಯಾಪರೀಕರಣವಾಗಿದೆ. ಯಾವುದೇ ಕ್ಷೇತ್ರದಲ್ಲಿ ರಾಜಕೀಯವೇ ಅಧಿಕವಾಗಿ ಗೋಚರಿಸುತ್ತದೆ. ಅದು ತೊಲಗಿ ಕೇಂದ್ರದಲ್ಲಿ ಬಂದ ಆಡಳಿತವೇ ಪ್ರತಿ ಪ್ರಾಂತ್ಯದಲ್ಲೂ ಸಿಗಲಿ ಎಂದಾಶಿಸೋಣ.

-ವಿಜಯಾಸುಬ್ರಹ್ಮಣ್ಯ ಕುಂಬಳೆ

9 Responses

  1. Vijayasubrahmanya says:

    ಧನ್ಯವಾದಗಳು ಅಡ್ಮಿನ್ ಹೇಮಮಾಲಾ ಹಾಗೂ ಓದುಗ ಬಳಗಕ್ಕೆ.

  2. ಶಿವಮೂರ್ತಿ.ಹೆಚ್. says:

    ತುಂಬಾ ಅರ್ಥಪೂರ್ಣವಾಗಿದೆ

  3. ನನ್ನ ಕನಸಿನ ಭಾರತದ ಲೇಖನ ಚೆನ್ನಾಗಿ ಮೂಡಿಬಂದಿದೆ ನನ್ನ ಆಶಯವೂ ಅದೇ…ಆಗಲೆಂದು ಆಶಿಸೋಣ..ವಿಜಯಾಮೇಡಂ

  4. ಶಂಕರಿ ಶರ್ಮ says:

    ಎಲ್ಲಾ ಜೀವಲೋಕಗಳಿಗೆ ದೊಡ್ಡಮ್ಮನಾದ ಭಾರತಮಾತೆಯ ಮಕ್ಕಳಾದ ನಮಗೆಲ್ಲರಿಗೂ ಒಳಿತಾಗಲಿ ಎಂಬ ಹಿರಿದಾದ ಆಶಯ ಹೊತ್ತ ಲೇಖನ ಚೆನ್ನಾಗಿದೆ ವಿಜಯಕ್ಕ.

  5. ಸುಜಲಾ says:

    ಸೂಪರ್

  6. ನಮ್ಮೆಲ್ಲರ ಕನಸಿನ ಭಾರತದ ರೂಪುರೇಷೆಗಳನ್ನು ನೀಡಿರುವ ಲೇಖನ ಸೊಗಸಾಗಿದೆ ಮೇಡಂ

  7. ನಯನ ಬಜಕೂಡ್ಲು says:

    Very nice

  8. Padma Anand says:

    ಎಂತಹ ಸುಂದರ ಹೋಲಿಕೆ! ಕುವೆಂಪು ಅವರು ಕರ್ನಾಟಕವನ್ನು ಭಾರತ ಜನನಿಯ ತನುಜಾತೆ ಎಂದರೆ, ಜಗದ ಮನೆಗೆ ಭಾರತ ದೇವರಕೋಣೆಯಾಗಬೇಕು ಎಂಬುದು ನಿಮ್ಮ ಸದಾಶಯ.. ಚಂದದ ಭಾರತದ ಸುಂದರ ಕಲ್ಪನೆ .

  9. Anonymous says:

    ಎಲ್ಲಾ ಓದುಗ ಬಳಗಕ್ಕೆ ಅನಂತಾನಂತ ಧನ್ಯವಾದಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: