ಬೆಳಕು-ಬಳ್ಳಿ

ಅಧಿಕ ಅಧಿಕ

Share Button

ಅಧಿಕವೆಂದರೆ ಬಿಂದು
ಅಧಿಕವೆಂದರೆ ಸಿಂಧು
ಅಧಿಕವೆಂದರೆ ಕೂಡಿ
ಕಳೆಯದಾದಿ ಗೋವಿಂದ ||

ಅತ್ತಿತ್ತು ಹನ್ನೊಂದು
ಇತ್ತಿತ್ತು ಏಳೆಣಿಸೆ
ಕೂಡೆ ಹದಿನೆಂಟಿತ್ತು
ಆದ ಗೋವಿಂದನಧಿಕ ||

ಕೂಡಿ ಒಂದಾಗಿಲ್ಲ
ಕಳೆದು ಮಣ್ಣಾಗಿಲ್ಲ
ಕಡೆಯನಕ ಗೋವಿಂದ
ಅಧಿಕಾದಿ ಗೋವಿಂದ ||

ಗಿರಿಯ ಕೊನೆಯಲೊಬ್ಬ
ನದಿಯ ತಟದಲೊಬ್ಬ
ಇಟ್ಟಿಗೆಯ ಮೇಲಿಹನು
ಅಧಿಕ ಶೂನ್ಯ ಗೋವಿಂದ ||

ಕವನವೆಂದರಭಂಗ
ಭುವನ ಭಾಗ್ಯವದಯ್ಯ
ಬನ್ನಿ ಹೆಜ್ಜೆಯನೆತ್ತಿ
ಎಡೆಯಧಿಕ ಗೋವಿಂದ ||

ಹೆಜ್ಜೆಯೆತ್ತಿದ ಕ್ಷಣವೆ
ಗೋವಿಂದ ಅಡಿಯಾಳು
ಎತ್ತಿಕೊಳುವ ನಮ್ಮ
ಹೆಜ್ಜೆಯಧಿಕ ಗೋವಿಂದ ||

ಹೆಜ್ಜೆ ಹೆಜ್ಜೆಗೆ ಹೇಳಿರಿ
ಇಲ್ಲಿಲ್ಲ ಆಯಾಸ
ಇಲ್ಲಿಲ್ಲ ಹಸಿವಿನಿತು
ಕರುಣೆಯಧಿಕ ಗೋವಿಂದ ||

ಕಾದು ನಿಂತಿಹ ಗುಡ್ಡ
ದೊಡೆಯ ಕರುಣಿಸಲೆಂದು
ಹೆಜ್ಜೆ ಒಜ್ಜೆಯು ಅಲ್ಲ
ಕೊನೆಯಧಿಕ ಗೋವಿಂದ

-ಗಜಾನನ ಈಶ್ವರ ಹೆಗಡೆ, ಮೈಸೂರು

3 Comments on “ಅಧಿಕ ಅಧಿಕ

  1. ಸರಳ, ಸುಂದರ ಅರ್ಥಪೂರ್ಣ ಕವಿತೆ ಚೆನ್ನಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *