ಜೀವನ ರಾಗ
”ಇಳಿ ಸಂಜೆ ಸರಿಯುವ ಹೊತ್ತು ಮೆಲ್ಲ,
ಕಗ್ಗಂಟಾಗಿಸಿ ಸವೆಸದಿರು ಬಾಳ,
ಯಾವತ್ತೂ ಒಂದೇ ಸಮನಿರದು ಕಾಲ,
ಇದ್ದ ಪ್ರತಿಕ್ಷಣವ ಬದುಕು ನೀ ಸವಿದಂತೆ ಬೇವು ಬೆಲ್ಲ”.
“ಒಮ್ಮೆ ನಗುವಿದೆ
ಮತ್ತೊಮ್ಮೆ ಅಳು,
ಇದೇ ಅಲ್ಲವೇ ನಿಜವಾದ
ಬಾಳು?,
ಬದುಕು ಎಂದ ಮೇಲೆ
ಯಾರಿಗಿಲ್ಲ ಗೋಳು?
ಹಾಗೆಂದು ಗೋಳಾಡಿ ಮಾಡಿಕೊಳ್ಳದಿರು
ಈ ಬದುಕ ಹಾಳು “.
“ನೋವಲ್ಲೂ ನಗುವುದ ಕಲಿತಾಗ,
ಹುಟ್ಟುವುದು ಹೊಸ ಜೀವನ
ರಾಗ,
ಎಲ್ಲವೂ ಇಲ್ಲಿ ಪೂರ್ವನಿರ್ಧರಿತ
ಅವರವರ ಯೋಗ,
ಸವಿಯುವುದ ಕಲಿಯಬೇಕಿಲ್ಲಿ
ಪ್ರತಿ ಕ್ಷಣದ ಸೊಬಗ “.
“ಈಗೊಂದು ನಗುವಿದೆ
ಮನಬಿಚ್ಚಿ ನಕ್ಕು ಬಿಡು,
ಮನದಲ್ಲೊಂದು ಲಹರಿ ಮೂಡಿದೆ
ಮೈ ಮರೆತು ಹಾಡು,
ಮತ್ತೊಂದು ಕ್ಷಣ ನೋವಿದೆ
ಮೌನವಾಗಿ ಇದ್ದು ಬಿಡು,
ಇವಿಷ್ಟೇ ಸೂತ್ರ ಸವಿಯಲು
ಈ ಬದುಕೆಂಬ ಸೊಗಡು “.
– ನಯನ ಬಜಕೂಡ್ಲು
ಸರಳವಾದ, ಸೊಗಸಾದ ಬದುಕಿನ ಸೂತ್ರ !
ಧನ್ಯವಾದಗಳು ಮೇಡಂ
ಬದುಕಿನಲ್ಲಿ ಅಳವಡಿಸಿ ಕೊಳ್ಳಬಹುದಾದ ಸೂತ್ರವನ್ನು ಕವನದಲ್ಲಿ ಅಡಗಿಸಿ ಅನಾವರಣ ಗೊಳಿಸಿರುವ ರೀತಿ ಮುದ ತಂದಿತು..ನಯನಾ ಮೇಡಂ..
ಧನ್ಯವಾದಗಳು ಮೇಡಂ
ಜೀವನ ಮೌಲ್ಯವನ್ನು ಎತ್ತಿ ಹಿಡಿದಿದೆ… ಈ ಸುಂದರ ಕವನ.
ಧನ್ಯವಾದಗಳು ಮೇಡಂ
ನಿತ್ಯ ಸತ್ಯವನ್ನು ಅನಾವರಣಗೊಳಿಸುವ ಕವನ ತುಂಬಾ ಚೆನ್ನಾಗಿದೆ ನಯನ ಮೇಡಂ
ಧನ್ಯವಾದಗಳು ಸರ್
Good message congrats
Thank you