ಪುಟ್ಟನ ಪುಟ್ಟಕಥೆಗಳು
1) ಗಣಪತಿ ಹೊಟ್ಟೆ
ಒಂದು ಬೆಳಗ್ಗೆ ತಿಂಡಿಗೆ ಅಕ್ಜಿರೊಟ್ಟಿ ಮಾಡಿದ್ದೆ. ಪುಟ್ಟನ ಅಪ್ಪನಿಗೆ ಅಕ್ಕಿರೊಟ್ಟಿ ಬಡಿಸಲು ಹೋದಾಗ, ಬೇಡ, ಹೊಟ್ಟೆ ತುಂಬಿದೆ ಸಾಕು ಎಂದ. ಇನ್ನು ಒಂದು ತಿನ್ನಬಹುದು ಎಂದಾಗ, ಬೇಡ, ಅಜ್ಜಿ ಬಡಿಸಬೇಡ, ಜಾಸ್ತಿಯಾದರೆ ಮತ್ತೆ ಗಣಪತಿ ಹೊಟ್ಟೆಯಂತಾದರೆ ಕಷ್ಟ ಎಂದ ಪುಟ್ಟ. ಗಣಪತಿ ಕಥೆ ಕೇಳಿದ ಪ್ರಭಾವ ಜೋರಾಗಿಯೇ ನಾಟಿದೆ!
2) ಕಾಟಂಕೋಟಿ
ನಾವೆಲ್ಲ ನಮ್ಮ ಬಂಧುಗಳ ಮನೆಗೆ ಒಂದುದಿನ ಸಂಜೆ ಹೋಗಿದ್ದೆವು. ಪುಟ್ಟನೂ ಜೊತೆಗಿದ್ದ. ಅವರ ಮನೆಯ ಮಗುವಿನ ಆಟದ ಸಾಮಾನು ಒಂದಷ್ಟು ಹರಡಿದ್ದರು. ಅದರಲ್ಲಿ ಆಟ ಆಡುತ್ತಲಿದ್ದ. ನಾವು ನಮ್ಮ ಪಾಡಿಗೆ ಮಾತಾಡುತ್ತಲಿದ್ದೆವು. ನಮಗೆಲ್ಲ ಚಹಾ ಕೊಟ್ಟರು. ಪುಟ್ಡ, ಹಾಲು ಬೇಡ ಎಂದ. ಆಟ ಆಡಿ ಸಾಕಾಗಿ, ಏನಾದರೂ ಕಾಟಂಕೋಟಿ ಇದ್ದರೆ ಕೊಡಿ ಎಂದ. ಹಾಗಂದರೆ ಏನು ಎಂದು ಮನೆಯೊಡತಿ ಕೇಳಿದರು. ಬಿಸ್ಕೆಟ್, ಚಿಪ್ಸ್, ಬಜ್ಜಿ ಹೀಗೆ ಕಸಂಪಟೆ ತಿನ್ನಲು ಒಳ್ಳೆಯದಾಗುತ್ತದೆ ಎಂದ!
3) ಜೊತೆಗೂಡಿ
ಪುಟ್ಟನಿಗೆ ಕಾರುಗಳೆಂದರೆ ಬಹಳ ಪ್ರೀತಿ. ಯಾವುದೇ ಕಂಪನಿಯ ಕಾರುಗಳಾದರೂ ಇಂಥದೇ ಎಂದು ಗುರುತಿಸಿ ಹೇಳುವನು. ದೊಡ್ಡವನಾದ ಮೇಲೆ ಮಹೀಂದ್ರ ಥಾರ್ ಜೀಪ್ ತೆಗೆಯುವ ಕನಸು ಈಗ ನಾಲ್ಕರ ಪೋರನಿಗೆ . ಆಫೀಸಿಗೆ (ಅವನಪ್ಪ ಹೋಗುವ ಅದೇ ಆಫೀಸ್!) ಹೋಗುವಾಗ ಥಾರ್ ಜೀಪಲ್ಲೇ ಹೋಗುವುದು ಎಂದ. ಅಷ್ಟು ದೊಡ್ಡ ವಾಹನ ಬೇಡ. ನೀನೊಬ್ಬ ಹೋಗಲು ಬೈಕ್ ಸಾಕು ಎಂದೆ. ಅಜ್ಜಿ, ನಾನೊಬ್ಬನೇ ಹೋಗುವುದಲ್ಲ ಎಂದು ನುಡಿದು ಅವನ ತರಗತಿಯ ನಾಲ್ಕು ಮಂದಿಯ ಹೆಸರೇಳಿ,ನಾವು ಐದು ಮಂದಿ ಒಟ್ಟಿಗೇ ಹೋಗುವುದು ಎಂದ!
-ರುಕ್ಮಿಣಿಮಾಲಾ ಮೈಸೂರು
ಹಹಾ
ಧನ್ಯವಾದ
ಪುಟ್ಟ ಕಥೆಗಳನ್ನು ಓದಿದ ಮನ..ಮಕ್ಕಳಂತಾಯತು…ಆ ಲೋಕಕ್ಕೆ ಕರೆದೊಯ್ದು ನಿಮಗೆ ಧನ್ಯವಾದಗಳು
ಧನ್ಯವಾದ
ಚೆನ್ನಾಗಿ ಬರೆದಿರುವಿರಿ
ಪುಟ್ಟನ ಪುಟ್ಟ ಕಥೆಗಳು ಅವನಷ್ಟೇ ಚೆನ್ನಾಗಿವೆ.
ಧನ್ಯವಾದ
ಧನ್ಯವಾದ
ಚೆನ್ನಾಗಿವೆ ಪುಟ್ಟ ಕಥೆಗಳು
ಧನ್ಯವಾದ
ಧನ್ಯವಾದ
ಮುದ ನೀಡಿದ ಪುಟ್ಟನ ಪುಟ್ಟ ಕಥೆಗಳು.