ಕಲಿಯಬೇಕಿದೆ…
ಬಂದವರೊಡನೆ ಜೊತೆಯಾಗಿ
ಬರದಿರುವವರನ್ನು ಬಿಟ್ಹಾಕಿ
ಬದುಕಿನ ಪಯಣ ಸಾಗಬೇಕಿದೆ.
ನಂಬಿದವರಿಗೆ ಇಂಬುನಿಟ್ಟು
ನಂಬದವರಿಗೆ ಚೊಂಬು ಕೊಟ್ಟು
ಜೀವನ ಬಂಡಿಯ ಹತ್ತಬೇಕಿದೆ.
ಬೇಕೆಂದು ಬಂದವರೊಡನೆ ಬೆರೆತು
ಬೇಡವೆಂದು ಹೋದವರ ಮರೆತು
ಬಾಳಿನ ರಸದೂಟ ಸವಿಯಬೇಕಿದೆ.
ನಮ್ಮನ್ನು ಅರಿತವರೊಡನೆ ಕೂಡಿ
ನಮ್ಮನ್ನು ದೂರಿದವರ ದೂಡಿ
ಬದುಕಿನ ವ್ಯಾಪಾರವ ಮಾಡಬೇಕಿದೆ.
ಒಳಿತರಲ್ಲಿ ಕೆಡುಕುಗಳ ಹುಡುಕದೇ
ಕೆಡುಕುಗಳಲ್ಲಿ ಒಳಿತುಗಳ ನೋಡದೇ
ಜೀವನ ಲೆಕ್ಕಾಚಾರ ಹಾಕಬೇಕಿದೆ.
ಹಿರಿಯರ ಅನುಭವ ಮಾರ್ಗದರ್ಶನದಿ
ಕಿರಿಯರ ಸರಿ ತಪ್ಪುಗಳ ತಿದ್ದಿ ತೀಡಿ
ಬಾಳಿನ ಪಾಠವನ್ನು ಕಲಿಯಬೇಕಿದೆ.
–ಶಿವಮೂರ್ತಿ.ಹೆಚ್. ದಾವಣಗೆರೆ
ಬದುಕಿನ ವಾಸ್ತವದ ಚಿತ್ರಣ ಚೆನ್ನಾಗಿ ಮೂಡಿ ಬಂದಿದೆ
ಧನ್ಯವಾದಗಳು ಮೇಡಂ
ಅರ್ಥಪೂರ್ಣ ವಾದ ಕವನ..
ಅಭಿನಂದನೆಗಳು ಸಾರ್.
ಧನ್ಯವಾದಗಳು ಮೇಡಂ
ಒಟ್ಟಿನಲ್ಲಿ ಇಲ್ಲಿ ಹೊಂದಿಕೊಂಡು ಸಾಗಬೇಕಿದೆ. ಚೆನ್ನಾಗಿದೆ ಕವನ.
ಧನ್ಯವಾದಗಳು ಮೇಡಂ
ಹೌದು…ಬದುಕಿನ ಪಾಠ ಕಲಿಯಬೇಕಿದೆ..
ಉತ್ತಮ ಸಂದೇಶ ಹೊತ್ತು ತಂದ ಕವನ ಚೆನ್ನಾಗಿದೆ.
ಧನ್ಯವಾದಗಳು ಹಿರಿಯರೇ