ರಸ ಋಷಿಯೆಂಬ ‘ಕೃತ್ತಿಕೆ’
‘ಷೋಡಶಿ ‘ , ‘ಕೊಳಲ’ನೂದಿ
ಕರೆದಂತಾಗಿ
‘ಮಲೆಗಳಲಿ ಮದುಮಗಳಿ’ಗಾಗಿ
ಅಲೆದಾಡಿ
‘ಕಾನೂರು ಹೆಗ್ಗಡತಿ’ಯ
ಹುಡುಕಿ
‘ಕಲಾಸುಂದರಿ’, ‘ಚಿತ್ರಾಂಗದಾ’ಳ
‘ಹೊನ್ನ ಹೊತ್ತಾರೆ ‘ನೆನೆದು
‘ಕಾವ್ಯವಿಹಾರ’ದೇ
‘ಬಿರುಗಾಳಿ’ಎಬ್ಬಿಸಿ
‘ಪ್ರಾರ್ಥನಾ ಗೀತಾಂಜಲಿ’ಯ
ಅರ್ಪಿಸಿ
‘ಮಂತ್ರಾಕ್ಷತೆ’ಯನ್ನಿಟ್ಟು
‘ಪ್ರೇಮಕಾಶ್ಮೀರ ‘ಸುತ್ತುವಾ
‘ಪಕ್ಷಿಕಾಶಿ’ಯಲಿ ಹಾರಾಡಿ
‘ಮಹಾರಾತ್ರಿ’ಯಲೂ
‘ನವಿಲಾಗಿ ನರ್ತಿಸುವಾ’
‘ಜೇನಾಗುವ’…
‘ಸ್ಮಶಾನ ಕುರುಕ್ಷೇತ್ರ’ದ ವರೆಗೂ
‘ಶೂದ್ರತಪಸ್ವಿ’ಯಂತೆ
‘ಹಾಳೂರ’ಲ್ಲೂ ನಾನಿರುವೆ
‘ತಪೋನಂದನ’ಮಾಡು
‘ನನ್ನಮನೆ’ಯ ….
‘ಕಬ್ಬಿಗನ ಕೈಬುಟ್ಟಿ’ಯಲಿ
‘ಕನ್ನಡದ ಡಿಂಡಿಮ’ವ
ಬಾರಿಸುವ ‘ರಕ್ತಾಕ್ಷಿ’ಯಾಗಿ
‘ಚಂದ್ರಮಂಚಕೆ ಬಾ ಚಕೋರಿ’
ಎಂದುಲಿದಾ
‘ಪಾಂಚಜನ್ಯ’……
‘ನೆನಪಿನ ದೋಣಿ’ಯಲಿ
‘ಕೃತಿಕೆ’, ‘ಅಗ್ನಿಹಂಸ’ಗಳ
ಜೀವಂತವಿರಿಸಿ
‘ಚಂದ್ರಹಾಸ’, ‘ಬಲಿದಾನ’
‘ಕಾನೀನ’ ,’ಜಲಗಾರ’ನ ಕೊಟ್ಟು
‘ಯಮನಸೋಲಿ’ಸಿ
ಕನ್ನಡಿಗರೆದೆಯಲಿ
‘ನನ್ನ ದೇವರಾ’ಗಿ ನೆಲೆನಿಂತು
‘ಶ್ರೀ ರಾಮಾಯಣ ದರ್ಶನ’ವಿತ್ತು
‘ವಾಲ್ಮೀಕಿಯ ಭಾಗ್ಯ’ ಕರುಣಿಸಿದ
‘ಮೇರು ವಿಜ್ಞಾನಿ’….
‘ಬೊಮ್ಮನಹಳ್ಳಿಯ ಕಿಂದರಿಜೋಗಿ’ಯಲಿ
‘ಮನುಜಮತ ವಿಶ್ವಪಥ’ಸಾರಿ
‘ಮೇಘಪುರ’ದೇ
‘ವಿಚಾರ ಕ್ರಾಂತಿಗೆ ಆಹ್ವಾನ ‘ನೀಡಿ
‘ನರಿಗಳಿಗೇಕೆ ಕೋಡಿಲ್ಲ’ವೆಂದೇಳಿದ
‘ನನ್ನ ಗೋಪಾಲ’….
‘ಅಮಲನ ಕಥೆ’ಜೊತೆಗೆ
‘ಮೋಡಣ್ಣನ ತಮ್ಮ’ನಾಗಿ
‘ವಿಭೂತಿಪೂಜೆ’ನಡೆಸಿ
‘ದ್ರೌಪದಿಯ ಶ್ರೀಮುಡಿ’ಯ
ಶ್ರೇಷ್ಠತೆಯ ನೆನಸಿ
‘ರಸೋ ವೈ ಸ:’
ಉಣಿಸಿದ ‘ರಾಮಕೃಷ್ಣ ಪರಮಹಂಸ’ …
‘ಕಿಂಕಿಣಿ’ಯ ಕಟ್ಟಿ
‘ಅನಿಕೇತನ ‘ಬೇಡವೆಂದು
‘ಅನುತ್ತರ’ವನ್ನೇ
‘ಕುಟೀಚಕ’ವಾಗಿಸಿಕೊಂಡ
ವಿಶ್ವಮಾನವ…..
ನಿನಗಿದೋ ನನ್ನ ಸಾವಿರ ನಮನ.
-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ
ರಸಖುಷಿಗೆ ನಮನ..ಕವನ ಅರ್ಥಪೂರ್ಣವಾಗಿ ಬಂದಿದೆ..ಗೆಳತಿ ಭಾಗ್ಯ.. ಅಭಿನಂದನೆಗಳು.
ರಸ ಋಷಿ ಗೆ ಸಲ್ಲಿಸಿದ ನಮನ ಚೆಂದವಾಗಿದೆ
ಅರ್ಥಪೂರ್ಣ ಕವನ
ರಸ ಋಷಿಯ ಎಲ್ಲಾ ರಚನೆಗಳನ್ನೊಳಗೊಂಡು ರಚಿಸಿದ ಸೂಪರ್ ಕವನ.