ನಿವೇದನೆ….
ಸತಿಗೆ ಗಂಡನಾಗು
ಗಂಡನಂತೆ ನಟಿಸಬೇಡ
ಬದುಕಿಗೆ ನೆರಳಾಗು
ಸೋರುವ ಮಾಳಿಗೆಯಾಗಬೇಡ
ಬವಣೆಗೆ ಜೊತೆಯಾಗು
ಬಣವೆಯ ಹತ್ತಿಸಬೇಡ
ಮಾನಕ್ಕೆ ನಂಬಿಕೆಯಿಡು
ಅನುಮಾನದಿ ಬೇಯಿಸಬೇಡ
ಮಗುವಿಗೆ ತಂದೆಯಾಗು
ಬಾಲಿಶವ ಕಸಿಯಬೇಡ
ಮಕ್ಕಳಿಗೆ ಗುರುವಾಗು
ಆದರ್ಶವ ಕೊಂದುಕೊಳ್ಳಬೇಡ
ಸಮಾಜಮುಖಿಯಾಗು
ಅಹಮಿಕೆಯ ದಾಸನಾಗಬೇಡ
ಹೆಗಲಿಗೆ ನೊಗವಾಗು
ನಗುವವರ ಮುಂದೆ ಬೀಳಿಸಬೇಡ
ಸ್ವಚ್ಚಂದ ಹಕ್ಕಿಯಾಗು
ಸ್ವಾತಂತ್ರ ಸಿಕ್ಕಿತೆಂದು ತುಳಿಯಬೇಡ
ಆದರ್ಶ ಸತಿಪತಿಯಾಗಲು
ದಾರಿಯಾಗು
ದಾರಿಗೆ ಮುಳ್ಳಾಗಬೇಡ……
-ಸಿ.ಎನ್.ಭಾಗ್ಯಲಕ್ಷ್ಮಿನಾರಾಯಣ
ಸೊಗಸಾದ ಕವನ ನಿವೇದನೆ..ಅಭಿನಂದನೆಗಳು ಗೆಳತಿ ಭಾಗ್ಯ
ಸುಂದರ ಕವನ
ಚಂದದ ಕವನ
ಮನಮುಟ್ಟುವ ಕವನ.
ಆಪ್ತವಾಯಿತು