ಕನ್ನಡ
ಕನ್ನಡವೆಂದರೆ ಬರೀ ನುಡಿಯಲ್ಲ
ನಮ್ಮೀ ಬದುಕಿನ ಮಿಡಿತ
ಮೊದಲ ತೊದಲು ನಿನ್ನದೆ
ಅಮ್ಮನಂತೆ ಹತ್ತಿರ, ಆರ್ದತೆ
ನೋವು ನಲಿವಿಗೆ ಧ್ವನಿ
ನನ್ನರಿವಿನ ಆಡಂಬೊಲವ ಹಿಗ್ಗಿಸಿದ ಹೆತ್ತವ್ವ
ನಿನ್ನಿಂದಲೆ ಬಾಳ್ವೆ-ಬೆಳಕು
ರಕ್ತಗತವಾಗಿದೆ ಪುಣ್ಯಕೋಟಿಯ ಕಥನ
ಅಂತರ್ಗತವಾಗಿದೆ ವಚನಗಳ ಕಾಣ್ಕೆ
ಅನ್ನಕೊಡುವ ಭಾಷೆಯಲ್ಲವೆಂಬ ದೂರು
ಆದರೂ ಅಂತರಾಳಕ್ಕಿಳಿದ ಮೂಲಬೇರು
ನಿನಗಿಲ್ಲ ನಿನ್ನ ಮನೆಯಲ್ಲೆ ಆದರ
ಸಿಕ್ಕಿದ್ದು ಬರೀ ಸದರ!
ಬದುಕಲು ಬೇಕು ನಿನ್ನ ನೆಲ ಜಲ
ನೀನು ಮಾತ್ರ ಕೇವಲ
ಮಾತಿನ ಮಲ್ಲರ ಬಡಾಯಿಗೆ
ವಸೂಲಿಗಾರರ ಬಂಡವಾಳವಾಗಿ ಬಡವಾದೆ
ಕಳೆದುಕೊಂಡೆಯಮ್ಮ ಕಾಸರಗೋಡು
ಬಿಡಬಹುದು ಬೆಳಗಾಂ ಅಚ್ಚರಿಯಿಲ್ಲ!
ನಿನ್ನ ನೆಲದಲ್ಲೆ ನಿನಗೊಂದು ಕಾವಲುಸಮಿತಿ
ಎಂತಹ ದುರ್ಗತಿ!
ಅಭಿಮಾನ ಬೆಳೆಯಲಿ ಕನ್ನಡ ಮಣ್ಣಲಿ
ಫಲಿಸಲಿ ಮನೆ ಮನಗಳಲಿ
–ಎಂ.ಆರ್. ಅನಸೂಯ
ಸೂಪರ್ ಕವನಗಳ ಸಾಲುಗಳು
ಕನ್ನಡ ಭಾಷೆಯ ಬಗ್ಗೆ ಅಭಿಮಾನ…ಆ ನೆಲದಲ್ಲಿ ವಾಸಿಸುವರ ಖರ್ತವ್ಯ..ಹಾಗೂ ಎಚ್ಚರಿಕೆ…ಒಳಗೊಂಡ ಕವನ ಚೆನ್ನಾಗಿ ದೆ.. ಮೇಡಂ.
ಚೆನ್ನಾಗಿದೆ ಕವನ
ಕನ್ನಡ ಭಾಷೆಯ ಸದ್ಯದ ಪರಿಸ್ಥಿತಿಯ ಮೇಲೆ ಬೆಳಕು ಬೀರುವ ಚಂದದ ಕವನ.
ಸುಂದರವಾದ ವಸ್ತುನಿಷ್ಠ ಕವನ