ಖಾಲಿ ಆಗಸ
ನಭವೆಲ್ಲಾ ಏಕೋ ಖಾಲಿ
ಇತ್ತ ಸೂರ್ಯನೂ ಇಲ್ಲದ
ಅತ್ತ ಚಂದ್ರನೂ ಇಲ್ಲದ
ನಕ್ಷತ್ರ ತಾರೆಗಳೂ ಕಾಣದ
ಮುಸ್ಸಂಜೆಯ ಆಗಸವೆಲ್ಲಾ
ಬಣ ಬಣ,
ಹೃದಯ
ಮನಸನ್ನು ಅಣಕಿಸುವಂತೆ
ದೂರದಲೆಲ್ಲೋ ಹಾರಾಡುವ
ಹಕ್ಕಿಗಳೆರಡಷ್ಟೆ
ಕಾಣುತಿದೆ ಕಣ್ಣಳತೆಗೆ
ಯಾವದೋ ಹಳೆಯ
ಎರಡು ನೆನಪುಗಳಂತೆ
ರಾತ್ರಿಯಷ್ಟೇ ಚಂದ್ರಮನ
ಜೊತೆ ಜೊತೆಗೆ ಸುತ್ತಿ ಸುಳಿದ
ಚುಕ್ಕೆಗಳ ಗೊತ್ತುಗುರಿ
ಕಾಣುತ್ತಿಲ್ಲ
ಉರಿದು ಸುಡುತ್ತಿದ್ದ ರವಿ
ಮಂಕು ಕವಿದವನಂತೆ
ಇಲ್ಲವಾದ
ಜೊತೆಯಲ್ಲಿ ಆಡಿಕೊಂಡು
ಹೊಡೆದಾಡಿಕೊಂಡು
ಒಟ್ಟಿಗಿದ್ದ ಗೆಳೆಯರು,
ಜೊತೆಗೆ ಬೆಳೆದವರು
ಕೈಹಿಡಿದು ನಡೆದವರು
ಎಲ್ಲಾ ತಮ್ಮದೇ ದಾರಿಯಲ್ಲಿ
ಸಾಗಿದಂತೆ
ಮುಸ್ಸಂಜೆಯ ನಭ ಆಗಸ
ಮನಸ್ಸು ಹೃದಯ
ಏಕೋ ಖಾಲಿ ಖಾಲಿ
-ನಟೇಶ
ಅರ್ಥಪೂರ್ಣ ವಾದ…ಬದುಕಿನ.. ಕೊನೆಯ…ಪುಟಗಳ..ಅನಾವರಣ..ಸೊಗಸಾಗಿ… ಮೂಡಿಬಂದಿದೆ… ಅಭಿನಂದನೆಗಳು.. ಸಾರ್.
Very nice
ಸುಂದರ ಕವನ.