ಬೆಳಕಿನ ಹಣತೆ
ಮನದ ದುಗುಡ ಕಳೆಯೋಣ
ಬಾಳ ಕತ್ತಲ ಗೆದ್ದು ನಿಲ್ಲೋಣ
ಎಣಿಕೆಗೆ ಸಿಗದ ದೀಪಾವಳಿಯ
ಹಣತೆಯಲಿ ಎಣ್ಣೆಯೊಡನೆ
ಬತ್ತಿಯಾಗುತ ಲೀನವಾಗೋಣ |
ಕಗ್ಗತ್ತಲಿನಿಂದ ಬೆಳಕಿನೆಡೆಗೆ
ಸಾಗುವ ಆಸೆಯ ಹೊತ್ತು
ಕಷ್ಟಗಳ ನಡುವೆ ಒಂದಷ್ಟು
ಬೆಳಕನರಸುವ ಭರವಸೆ ಹೊತ್ತು
ದೀಪದಿಂದ ದೀಪ ಹಚ್ಚೋಣ |
*ತಮಸೋಮಾ ಜ್ಯೋತಿರ್ಗಮಯಾ*
ಎನುತ ಸ್ನೇಹಮಮತೆಯ ಹಂಚುತ
ಒಲುಮೆಯ ಗೆಳೆಯರ ಕುಾಡುತ
ಬಂಧುಗಳ ಬಂಧನ ಬೆಸೆಯುತ
ಪ್ರೀತಿಯ ಹಣತೆ ಹಚ್ಚೋಣ |
ಹಣತೆಯಾರಿದ ಮೇಲೆ ಕತ್ತಲಲಿ
ಕೈ ಚಾಚಿ ತಡಕಾಡುವ ಮುನ್ನ
ಇರುವಷ್ಟು ಹೊತ್ತು ನಗುತ
ಕಾಲಕಳೆಯುವ ಮನಸ ಹೊತ್ತು
ಪ್ರೀತಿಯ ಸುಧೆಯ ಹಂಚೋಣ ||
– ಡಾ ಸುಧಾ ಜೋಶಿ
ಚಿತ್ರಕೃಪೆ:-ಲೀನಾಸಂದೇಶ್
ಬೆಳಕಿನ ಹಣತೆ ಹಾಸ್ಯವನ್ನೂ ಬೆಳಗಿದೆ.
ಧನ್ಯವಾದಗಳು
ಬದುಕಿಗೆ…ಭರವಸೆಯನ್ನು..ಬೆಳಕಿನ.. ಹಣತೆಯ…ಕವನದಲ್ಲಿ..
ಕಟ್ಟಿ ಕೊಟ್ಟಿರುವ…ನಿಮಗೆ… ಅಭಿನಂದನೆಗಳು.. ಮೇಡಂ…
ಧನ್ಯವಾದಗಳು,
ಬೆಳಕಿನ ಹಬ್ಬದ ಹಾರ್ದಿಕ ಶುಭಾಶಯಗಳು
ಸದಾಶಯದ ಸುಂದರ ಕವಿತೆ. ಅಭಿನಂದನೆಗಳು.
ಧನ್ಯವಾದಗಳು
ಹಬ್ಬದ ಹಾರ್ದಿಕ ಶುಭಾಶಯಗಳು
ಧನ್ಯವಾದಗಳು
ಹಬ್ಬದ ಶುಭಾಶಯಗಳು
ಉತ್ತಮ ಸಂದೇಶ ಹೊತ್ತ ಕವನ ಪ್ರಣತಿಯು ಬೆಳಕು ಬೀರಿದೆ.