ದೀಪಾವಳಿ
ಅನನ್ಯ ಭಕ್ತಿಯಿ಼ದ ಮಾಲಿಂಗನ ಬಳ್ಳಿಯಿಂದ
ಅಲಂಕರಿಸಿದ ಗಂಗೆಯನು ಪೂಜಿಸಿ,
ಮನೆಗೆ ತಳಿರು ತೋರಣ ರಂಗೋಲಿಗಳ ಮೆರಗು ತಂದು
ಹಬ್ಬದ ವಾತಾವರಣ ಮೂಡಿಸಿ
ಅಮ್ಮ/ಅಜ್ಜಿಯರ
ಅಮೃತ ಹಸ್ತದಿಂದ ಎಣ್ಣೆಶಾಸ್ತ್ರ ಮುಗಿಸಿ
ಆರತಿ ಮಾಡಿಸಿಕೊಂಡು
ಆರತಿ ತಟ್ಟೆಯಲಿ
ಆರತಿ ಮಾಡಿದವರಿಗೆ ಯಥಾಶಕ್ತಿ ಹೊಸ ನೋಟುಹಾಕಿ
ಆಯುಷ್ಯವಂತನಾಗು/ಳಾಗು
ಭಾಗ್ಯವಂತನಾಗು/ಳಾಗು ಎಂಬ
ಆಶೀರ್ವಚನದೊಂದಿಗೆ
ಅಭ್ಯಂಜನ ಸ್ನಾನ ಮುಗಿಸಿಕೊಂಡು
ಆಕಾಶಬುಟ್ಟಿ ತೂಗಿಹಾಕಿ ದೀಪ /ಹಣತೆ ಬೆಳಗಿ
ಅಚ್ಚುಕಟ್ಟಾಗಿ ಹೊಚ್ಚುಹೊಸ ಬಟ್ಟೆ ಹಾಕಿಕೊಂಡು
ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡಿ
ಅಂಗಡಿಗಳ ಲಕ್ಷ್ಮೀಪೂಜೆ ನೋಡಲು ಅಡ್ಡಾಡಿ
ಅಳಿಯತನ(ಹೊಸದಾಗಿ ಮಗಳ ಮದುವೆಯಾಗಿದ್ದರೆ),
ಅಕ್ಕನತದಿಗಿ,ಭಾವಬಿದಿಗಿ,ಅಮ್ಮನ ಚೌತಿ ಮಾಡಿ, ಪಗಡೆ ಆಡಿ
ಆಚರಿಸೋಣ ಬಂಧು ಬಾಂಧವರೊಡಗೂಡಿ
“ದೀಪಾವಳಿ” ಹಬ್ಬವ ಸಂಭ್ರಮ ಸಡಗರದಿಂದ…
ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
-ಮಾಲತೇಶ ಹುಬ್ಬಳ್ಳಿ
ದೀಪಾವಳಿ… ಕವಿತೆಯ…ಮೂಲಕ.. ಶುಭಹಾರೈಕೆಗಳು..ಚೆನ್ನಾಗಿ… ಮೂಡಿ..ಬಂದಿದೆ.. ಅಭಿನಂದನೆಗಳು… ಸಾರ್
ಧನ್ಯವಾದಗಳು
ಹಬ್ಬದ ಆಚರಣೆಯ ವರ್ಣನೆ ಚಂದಿದೆ. ಅಭಿನಂದನೆಗಳು.
ಧನ್ಯವಾದಗಳು
ದೀಪಾವಳಿ ಆಚರಣೆಯ ಸದ್ವಿಚಾರವನ್ನು ಬಿತ್ತರಿಸುವ ಸೊಗಸಾದ ಕವನ.
ಚಂದದ ಕವನ…ನಮ್ಮ ತವರು ಮನೆಯಲ್ಲಿ ಮುಳ್ಳುಸೌತೆಯ ಬಳ್ಳಿ ಸುತ್ತುತ್ತಿದ್ದರು
ಧನ್ಯವಾದಗಳು
ಸಡಗರದ ದೀಪಾವಳಿಯ ಚಿತ್ರ ಚೆನ್ನಾಗಿದೆ.