ಸ್ನೇಹ
ಸ್ನೇಹವೆಂದರೆ
ಎಂದೂ ಜೊತೆಗೇ
ಇರಬೇಕಾದ
ಸಂಬಂಧವೇನಲ್ಲ
ಎಂದಿಗೂ ಮರೆಯದ
ಮನದಲುಳಿವ
ಅನುಬಂಧ
ಕಷ್ಟಸುಖಗಳಲಿ
ಜೊತೆಯೇನು ಬೇಕಿಲ್ಲ
ಜೊತೆಯಲಿರುವಾಗ
ಮಾತನಾಡೆ ಮೈಮನ
ಹಗುರವಾಗುವುದಲ್ಲ
ಸ್ನೇಹದಲ್ಲಿ
ಪ್ರತಿದಿನ ನೆನೆಯುವ
ಪ್ರಮೇಯವೇನಿಲ್ಲ
ನಿಜಸ್ನೇಹದಲಿ
ಮರೆಯುವ ಮಾತೇ ಇಲ್ಲ
ಸ್ನೇಹಕ್ಕೆ ಸಿರಿತನ
ಬಡತನ ಬೇಕಿಲ್ಲ
ಸ್ನೇಹಸಿರಿಗಿಂತ
ಹೆಚ್ಚಿನದಾವುದೂ ಇಲ್ಲ
ಇತಿಮಿತಿ ಎಂಬುದು
ಸ್ನೇಹದಲ್ಲೇನಿಲ್ಲ
ವಿಶಾಲವಾದ ಸ್ನೇಹ
ಇದಕ್ಕೆ ಎಲ್ಲೆಯೆಂಬುದಿಲ್ಲ
–ನಟೇಶ
ಹೌದು.. ಸ್ನೇಹದ ಬಗ್ಗೆ ..ಕವನದ ಮೂಲಕ ಪಡಿಮೂಡಿಸಿರುವ…ಅಭಿಪ್ರಾಯ.. ಸತ್ಯಸ್ತ ಸತ್ಯ ..ಹಾಗೇ ಸ್ನೇಹ ನಮ್ಮ ಬದುಕಿನ ಆಯ್ಕೆಮಾಡಿಕೊಳ್ಳಲು..ಇರುವ..ಸ್ವತಂತ್ರ.. ಭಾಗ..ಸಾರ್..ಧನ್ಯವಾದಗಳು.
ಸ್ನೇಹವೆಂದು ಬೆಲೆ ಕಟ್ಟಲಾಗದ ಅನರ್ಘ್ಯ ರತ್ನ… ಪಡೆದವರು ಭಾಗ್ಯವಂತರು! ಕವನ ಚೆನ್ನಾಗಿದೆ.
ಸ್ನೇಹದ ಸಿಂಚನವನ್ನು ಸವಿ ಸವಿಯಾಗಿ ಉಣಬಡಿಸಿರುವ ಪರಿ ಅದ್ಭುತ
ಬಹಳ ಸುಂದರವಾಗಿದೆ ಕವಿತೆ
ಗೆಳೆತನ ಎಲ್ಲವೂ ಮೀರಿದ ಬಂದ
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಕನಸು ಹೊತ್ತು ಸಾಗುವ ಜೀವನದಲ್ಲಿ
ಅಪರಿಚಿತರ ನಡುವೆ ಚಿರಪರಿಚಿತ ಬಂದವನ್ನು ಬೆಸೆಯುವ ಬೆಸುಗೆಯ ಸ್ನೇಹವೇ ಗೆಳೆತನ