ಗಾಳಿಪಟ
ಪ್ರಥಮ ಏಕಾದಶಿ
ಬಾಲ್ಯದಲ್ಲಿ
ಅದೇನೋ ಖುಷಿ
ಬಣ್ಣ ಬಣ್ಣದ ಪಟ
ಆಗಸಕೇರಿಸಿ
ನಲಿದ ನೆನಪು
ಈಗಲೂ ಹಸಿ
ನಿರ್ಧಿಷ್ಟ ಗುರಿ ಕನಸು
ಇರದಾ ಮನಸು
ಬಾನಾಡಿಯಾಗಿ
ಪಟದೊಡನೆ
ಹಾರಾಡಿದ ಸೊಗಸು
ದಾರದ ಗೋಜಲು
ಬಿಡಿಸಿ
ಗೋತ ಹೊಡೆದ ಪಟಕೆ
ಬಾಲಂಗೋಸಿ
ಸರಿದೂಗಿಸಿ
ಸರಿ ಸೂತ್ರ ನಿರ್ಮಿಸಿ
ಗಾಳಿಯ ರಭಸಕ್ಕೆ
ಪಟದ ಗಾತ್ರಕ್ಕೆ
ಸರಿಯಾದ ದಾರ
ಅಳೆದು ಸುರಿದು
ಮಾಡಿದ ನಿರ್ಧಾರ
ಕ್ಷೇಮವಾಗಿ
ಹಾರಿಳಿಯೆ ಆಧಾರ
ಜೀವನ ಪಾಠ
ಕಲಿಸಿದ ಆಟ
ಸೂತ್ರ ಸರಿಯಿರೆ
ಸೊಗಸಾಗಿ
ಹಾರಾಡುವ
ಜೀವನವಿದು
ಗಾಳಿಪಟ
–ನಟೇಶ
ಚಂದದ ಕವನ
ಗಾಳಿಪಟ ದ ಸೂತ್ರ..ಜೀವನ …ಕ್ರಮಕ್ಕೆ ಹೋಲಿಕೆ ಕೊಡುವ ಮೂಲಕ.. ಉತ್ತಮ ಸಂದೇಶ.. ಹೊತ್ತ ನಿಮ್ಮ ಕವನ..ಚೆನ್ನಾಗಿದೆ ಸಾರ್…ಧನ್ಯವಾದಗಳು
ನಿರ್ದಿಷ್ಟ ಗುರಿ ಹಾಗೂ ಕನಸು ಇರಬೇಕಾದ ಅವಶ್ಯಕತೆ, ತಗೊಳ್ಳಬೇಕಾದ ಸರಿಯಾದ ನಿರ್ಧಾರ, ಇತ್ಯಾದಿ ಉತ್ತಮ ಸಂದೇಶಗಳನ್ನು ಹೊತ್ತ ಕವನ.
ಕವನ ಚೆನ್ನಾಗಿದೆ!