ಮಬ್ಬು
ದಾರಿ ದೀವಿಗೆಯೊಂದು
ಬೇಕೀಗ
ದಾರಿ ಅಸ್ಪಷ್ಟ, ಕವಲುಗಳು
ನೂರು
ಫಲಕಗಳು ಹಳೆಯದಾಗಿವೆ
ಕಣ್ಣುಗಳು ಕಿರಿದಾಗಿವೆ
ಬದುಕಿನ ದಾರಿ
ತೋರುವವರಾರು
ಮುಳ್ಳು ಕಲ್ಲುಗಳ ಮೆಟ್ಟಿ
ಕಣಿವೆಗಳ ಪೈಪೋಟಿ
ದಾಟಿ ಹಿಡಿಯಬೇಕಿದೆ
ಸಿಗದೂರ ಹುಡುಕಿ
ಸರಿರಾತ್ರಿ ಚಂದ್ರಮ
ಕೂಡ ಮರೆ
ಸಣ್ಣ ಮೋಡದೊಳಗೆ ಸೆರೆ
ಸುತ್ತಲಿನ ಮಿಣುಕು ತಾರೆ
ತೋರಲಾರವು ಆಸರೆ
ಹಿಂದೆ ದೂರದಲೆಲ್ಲೋ
ಬೆಳಕಿದ್ದ ಹಾಗೆ
ಕಣ್ಣು ಮುಚ್ಚಿಯೂ
ನಡೆಯಬಹುದಿತ್ತೇನೋ
ಎನ್ನುವ ಹಾಗಿತ್ತು ಭ್ರಮೆ
ಕುಳಿತು ಕುಳಿತಲ್ಲೇ
ನಿಂತಲ್ಲೇ ನಿಂತು ಇರಲಾಗದು
ಮಬ್ಬು ದಾರಿಯಲ್ಲಿ
ಮುಗ್ಗರಿಸದೆ ಮುನ್ನಡೆಯಲು
ಬೇಕಿದೆ ದೀವಿಗೆ
ಕಾಣದ ಸರಿಯೂರ
ಸೇರಿಸುವ
ದಾರಿ ದೀವಿಗೆ
–ನಟೇಶ
ಚೆನ್ನಾಗಿದೆ.
ಅರ್ಥಪೂರ್ಣ ವಾದ ಕವಿತೆ.. ಅಗೆದಷ್ಟು..
ಅರ್ಥ.. ಧನ್ಯವಾದಗಳು ಸಾರ್.
ಚಂದದ ಕವನ
ಸುಂದರ ಕವಿತೆ
ಸುಂದರ ಕವಿತೆ
ಸರಳ, ಸುಂದರ ಕವಿತೆ
ಚಿತ್ರಕ್ಕೊಂದು ಸುಂದರ ಕವಿತೆಯಂತೆ ಪ್ರಾರಂಭಗೊಂಡು ಅರ್ಥವತ್ತಾಗಿ ಅನಾವರಣಗೊಂಡ ಸುಂದರ ಕವಿತೆ.
ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು
ಸರಳವಾಗಿ ಮನದ ತುಮುಲಗಳನ್ನು
ಹೊರ ಹಾಕಿದೆ ಕವನ,,ತುಂಬಾ ತುಂಬಾ ಚೆನ್ನಾಗಿದೆ
ಚಂದದ ಅಭಿವ್ಯಕ್ತಿ.