ನಿರಪೇಕ್ಷ
ಇರುವುದೆಲ್ಲವ
ಭುವಿಗೆ ಸುರಿವ
ಪಾರಿಜಾತದ ತೃಪ್ತಿ
ಅಕ್ಷಯ
ಕೀರ್ತಿ ಶನಿಯಲ್ಲ
ಇಳೆಗೆ
ಮಳೆ ಸುರಿಸಿ
ನಿರಾಳವಾದ ಮೋಡಕೆ
ಸಾರ್ಥಕತೆ
ಹೆಸರಿಗಾಗಿ ಹಪಾಹಪಿಯಲ್ಲ
ಹಸಿದ ಹಸುಳೆಗೆ
ತುಂಬಿದೆದೆಯ ಹಾಲುಣಿಸಿ
ನಿರಾಳವಾದ ಹೆತ್ತವ್ವನ
ನೆಮ್ಮದಿ
ಪ್ರತಿಫಲಾಪೇಕ್ಷಿಯಲ್ಲ
–ಎಂ.ಆರ್ ಅನಸೂಯ
ಕನ್ನಡ ಅಕ್ಷರದ ಮೇಲೆ ಅಕ್ಕರೆಯುಳ್ಳವರಿಗಾಗಿ...
ಇರುವುದೆಲ್ಲವ
ಭುವಿಗೆ ಸುರಿವ
ಪಾರಿಜಾತದ ತೃಪ್ತಿ
ಅಕ್ಷಯ
ಕೀರ್ತಿ ಶನಿಯಲ್ಲ
ಇಳೆಗೆ
ಮಳೆ ಸುರಿಸಿ
ನಿರಾಳವಾದ ಮೋಡಕೆ
ಸಾರ್ಥಕತೆ
ಹೆಸರಿಗಾಗಿ ಹಪಾಹಪಿಯಲ್ಲ
ಹಸಿದ ಹಸುಳೆಗೆ
ತುಂಬಿದೆದೆಯ ಹಾಲುಣಿಸಿ
ನಿರಾಳವಾದ ಹೆತ್ತವ್ವನ
ನೆಮ್ಮದಿ
ಪ್ರತಿಫಲಾಪೇಕ್ಷಿಯಲ್ಲ
–ಎಂ.ಆರ್ ಅನಸೂಯ
ಸಂಪಾದಕರಿಗೆ ಧನ್ಯವಾದಗಳು
Fine
ಧನ್ಯವಾದಗಳು ಸರ್
ಸರಳ ಸುಂದರ ಕವನ ಧನ್ಯವಾದಗಳು ಮೇಡಂ
ಧನ್ಯವಾದಗಳು ಮೇಡಂ
ಚೆನ್ನಾಗಿದೆ ಕವನ
ಧನ್ಯವಾದಗಳು ಮೇಡಂ
ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸದ ಘನತೆಯನ್ನು ಎತ್ತಿ ಹಿಡಿದಿದೆ ಕವನ.
ಧನ್ಯವಾದಗಳು ಮೇಡಂ
ಪುರುಷನ ಆತ್ಮಕ್ಕಿಂತ ಹೆಣ್ಣಿನ ಆತ್ಮ ಉತ್ತಮವಾದದ್ದು, ಆದ್ದರಿಂದಲೇ ಕಬ್ಬಿಣದಂಥ ಪುರುಷ, ಆಯಸ್ಕಾಂತದಂಥ ಹೆಣ್ಣಿನೆಡೆಗೆ ಆಕರ್ಷಿತವಾಗುವುದೆಂಬ ಮಾಸ್ತಿ ವ್ಯಾಖ್ಯಾನಕ್ಕೆ ಬರೆದ ಭಾಷ್ಯ ನಿಮ್ಮ ಕವನ.
ಸೊಗಸಾದ ಭಾವಲಹರಿ.
ಧನ್ಯವಾದಗಳು ಸರ್