ಹೆಮ್ಮೆಯ ಅಪ್ಪ
ಬಂದ ಬವಣೆಗಳನೆಲ್ಲ
ಮನೆಯ ಹೊಣೆಗಳನೆಲ್ಲ
ಹಣೆಯಲ್ಲಿ ಬರೆದಂತೆಂದುಕೊಳ್ಳದೆ
ಹೊಣೆ ಹೊರುವನೀತ ‘ಪಿತ’
ಮಡದಿಯ ತೋಳಿನೊಳಿಟ್ಟು
ಮಕ್ಕಳ ಹೆಗಲ ಮೇಲೆಹೊತ್ತು
ನೋವು, ಕಷ್ಟಗಳ
ಹೃದಯದೊಳಗಡಗಿಸಿ
ನಗುತಲಿರುವನೀತ ‘ಪಿತ’
ಮಕ್ಕಳ ಏಳಿಗೆಗೆ
ಮಡದಿಯ ಬಾಳಿಗೆ
ಆಸರೆಯಾಗಿ
ಸಂಸಾರ ರಥವ
ಎಳಿಯುವನೀತ ‘ಪಿತ’
ಕೆಲಸ ಕೆಲಸ ಹೊರಗೆ
ಒಳಗೆ ನಿರಂತರ ಕೆಲಸ
ದುಡಿಯುತೆ
ತೋರನಿವನೆಂದು ಆಲಸ್ಯ
ಹೇಳನೆಂದಿಗು, ಯಾರಿಗೂ
ತನ್ನ ಆಯಾಸ
ನೋವು ನಲಿವ ಸಮನಾಗಿ
ಸ್ವೀಕರಿಸುವ ಶಕ್ತಿ ನೀಡಪ್ಪ
ನನ್ನ ಮಡದಿ ಮಕ್ಕಳ ಕಾಪಾಡಪ್ಪ
ಎಂದು ದೇವರಲ್ಲಿ ಸದಾ
ಬೇಡುವ ನಿಸ್ವಾರ್ಥಿ
ಅಪ್ಪ ಅಪ್ಪ ಅಪ್ಪ
-ನಟೇಶ
ನಿಸ್ವಾರ್ಥ ಅಪ್ಪನ ನೋಟ..ಚೆನ್ನಾಗಿದೆ ಸಾರ್… ಧನ್ಯವಾದಗಳು
ಚಂದದ ಕವನ
ಅಪ್ಪ ಯೊರುವ ಜವಾಬ್ದಾರಿಗಳನ್ನು ಸುಂದರ ಪದಪುಂಜಗಳಲ್ಲಿ ಹಿಡಿದಿಟ್ಟ ಕವಿತೆ.
ಒಲವು ನೀಡುತ್ತಾ, ಕರ್ತವ್ಯ ನಿರ್ವಹಣೆಯೊಂದಿಗೆ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸುವ ಅಪ್ಪನ ಬಗೆಗಿನ ಸೊಗಸಾದ ಸಕಾಲಿಕ ಕವನ.