ಸಾಯಿಸುತೆ ಮೇಡಂ ಅವರ ಕಾದಂಬರಿಗಳ ಹೆಸರುಗಳನ್ನು ಪೋಣಿಸಿ ಹೊಸೆದ ಸಾಲುಗಳು. :-
“ಬಾಳೊಂದು ಚದುರಂಗ”,
ತಟ್ಟಿತ್ತು ಅಂತರಂಗ,
“ಅರುಣ ಕಿರಣ” ಗಳಿಂದ ತುಂಬಿದ ಅರುಣರಾಗಕೆ,
ಸೋತು ಹಾಡಿತು “ಹೃದಯರಾಗ”.
ತುಂಟ “ರಾಧ ಮೋಹನ”,
ಸೆಳೆಯುವವನು ನುಡಿಸಿ ಕೊಳಲ “ಮಧುರ ಗಾನ”,
ಹಾಡಿ “ಮೌನ ಆಲಾಪನ”,
ಯಶೋಧಾ “ಆಡಿಸಿದಳು ಜಗದೋದ್ಧಾರನ”.
“ಇಬ್ಬನಿ ಕರಗಿತು” “ಮುಂಜಾನೆಯ ಮುಂಬೆಳಕು” ಮೂಡಲು,
ಹಬ್ಬಲು “ಇಂದ್ರ ಧನುಸ್ಸು” ನರ್ತಿಸಿತು “ಹಿಮಗಿರಿಯ ನವಿಲು”,
“ಮನಸ್ಸೇ ಸ್ವಲ್ಪ ನಿಲ್ಲು”,
ಓಡದಿರು ಚಲಿಸಿದಂತೆ “ಬಿಳಿ ಮೋಡಗಳು”.
“ಹೇಮಂತದ ಸೊಗಸು”,
ತುಂಬಿತು “ಸವಿಗನಸು”,
“ಸುಪ್ರಭಾತದ ಹೊಂಗನಸು”,
ಅರಳಿಸಿತು ಮನಸ್ಸು .
ಮಿಡಿದಾಗ “ಮಾನಸ ವೀಣಾ”,
ಮಾತನಾಡಿತು “ಮೊಗ್ಗೊಡೆದ ಮೌನ”,
ಬೆಳಗಲು ಭರವಸೆಯ “ನೀಲಾಂಜನ”,
ಬಾಳು “ಪ್ರೀತಿಯ ಹೂಬನ”.
ಸ್ವತಃ “ಸದ್ಗೃಹಸ್ಥೆ”,
ಕಾದಂಬರಿ ಲೋಕದ ಮಿನುಗುತಾರೆ ಸಾಯಿಸುತೆ,
ಓದುಗ ಅಭಿಮಾನಿಗಳ “ಪ್ರಿಯಸಖಿ” ಆರಾಧ್ಯ ದೇವತೆ,
ಪ್ರತಿ ಹೃದಯದೊಳಗೂ ಆರಾಧಿತೆ “.
ಪ್ರೀತಿಯಿಂದ, ಅಭಿಮಾನದಿಂದ….
-ನಯನ ಬಜಕೂಡ್ಲು
ತುಂಬಾ ಸೊಗಸಾದ ಅನಾವರಣ. ಧನ್ಯವಾದಗಳು ನಯನ ಮೇಡಂ
ವಾಹ್… ಸಾಯಿಸುತೆಯವರಿಗೆ ಅರ್ಪಿತ, ಈ ವಿಶೇಷ ರೀತಿಯ ಕವನ!
ನಿಮ್ಮ ಅಭಿಮಾನ ದೊಡ್ಡದು. ಉತ್ತಮ ಲೇಖಕಿಗೆ ಅಷ್ಟೇ ಅಭಿಮಾನದ ಕವನ. ತುಂಬಾ ಚೆನ್ನಾಗಿದೆ ಮೇಡಂ
ಸುಂದರ ಕವಿತೆ. ಕುಳಿತು ಸಾಯಿಸುತೆ ಅವರ ಯಾವ್ಯಾವ ಕಾದಂಬರಿಯನ್ನು ಓದಿದ್ದೇನೆ ಎಂದು ನೆನೆಪಿಸಿಕೊಳ್ಳಲು ಸಹಾಯ ಮಾಡಿತು. ನೆಚ್ಚಿನ ಲೇಖಕಿಗೆ ಹೆಣೆದ ಸುಂದರ ಮಾಲೆಗಾಗಿ ಅಭಿನಂದನೆಗಳು.